![](https://goodmorningkarnataka.com/wp-content/uploads/2022/10/Sun-Time-electronics-hosanagara-ad.jpg)
ಕೊಡಚಾದ್ರಿ ಸರ್ವಜ್ಞಪೀಠ ಪರಿಸರದಲ್ಲಿ ಕುಸಿದು ಬಿದ್ದು ಕೇರಳದ ವ್ಯಕ್ತಿ ಸಾವು
ಹೊಸನಗರ: ಕೊಡಚಾದ್ರಿ ಗಿರಿ ಹತ್ತಿದ ವ್ಯಕ್ತಿಯೋರ್ವ ಹೃದಯಾಘಾತದಿಂದ ಮೃತಪಟ್ಟ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ.
ಕೇರಳದ ಕನ್ನೂರು ಜಿಲ್ಲೆಯ ವಾಲಪ್ಪಿಲ್ ಸಮೀಪದ ಕೊಟ್ಟಾರತು ಗ್ರಾಮದ ನಿವಾಸಿ ಗೋವಿಂದನ್ ಕುನ್ನಪ್ಪ (72) ಮೃತ ವ್ಯಕ್ತಿ
ಶುಕ್ರವಾರದಂದು ಕೇರಳದಿಂದ ಕೊಲ್ಲೂರು ಶ್ರೀ ಮೂಕಾಂಬಿಕ ದರ್ಶನಕ್ಕೆ ಬಂದಿದ್ದ ಗೋವಿಂದನ್ ಕುಟುಂಬ ನಿನ್ನೆ ಅಲ್ಲೆ ತಂಗಿತ್ತು.
ಇಂದು ಬೆಳಿಗ್ಗೆ ಕೊಡಚಾದ್ರಿ ಗಿರಿಗೆ ಹೋಗಿದ್ದು ಪ್ರವಾಸಿಮಂದಿರದಿಂದ ಗಿರಿ ತುದಿಯ ಸರ್ವಜ್ಞ ಪೀಠಕ್ಕೆ ಕಾಲ್ನಡಿಗೆಯಲ್ಲಿ ತೆರಳಿದ್ದರು. ಸರ್ವಜ್ಞ ಪೀಠ ತಲುಪಿದ ನಂತರ ಅಲ್ಲೇ ಗೋವಿಂದನ್ ಕುಸಿದು ಬಿದ್ದಿದ್ದಾರೆ. ಬಳಿಕ ಸ್ಥಳೀಯರ ಸಹಕಾರದಿಂದ ಗಿರಿಯಿಂದ ಕೆಳಗಿಳಿಸಿನಗರ ಸರ್ಕಾರಿ ಆಸ್ಪತ್ರೆಗೆ ತರಲಾಯಿತು. ವೈದ್ಯರು ಪರಿಶೀಲಿಸಿ ಮೃತಪಟ್ಟಿರುವುದನ್ನು ದೃಢಪಡಿಸಿದರು.
ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
![](https://goodmorningkarnataka.com/wp-content/uploads/2022/10/Sun-Time-electronics-hosanagara-ad-4.jpg)