
ಹೊಳಲ್ಕೆರೆ| ಕಂಬ ದೇವರಹಟ್ಟಿಯಲ್ಲಿ ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಯುವಕರ ಸಾ*ವು.
ಹೊಳಲ್ಕೆರೆ : ತೋಟದಲ್ಲಿ ಕೃಷಿ ಕೆಲಸ ಮಾಡುತ್ತಿದ್ದಾಗ ಅಣ್ಣತಮ್ಮಂದಿರ ಮಕ್ಕಳು ನೀರು ಕುಡಿಯಲು ಕೃಷಿ ಹೊಂಡದ ಹತ್ತಿರ ಹೊದಾಗ ಆಕಸ್ಮಿಕವಾಗಿ ಕಾಲು ಜಾರಿ ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ಹೊಳಲ್ಕೆರೆ ತಾಲೂಕಿನ ಕಂಬದೇವರಹಟ್ಟಿ ಗ್ರಾಮದಲ್ಲಿ ಬುಧವಾರ ಸಂಜೆ ಸಂಭವಿಸಿದೆ.
ರಂಗಸ್ವಾಮಿ ತಂದೆ ಗೋವಿಂದಪ್ಪ. 21ವರ್ಷ, ಪ್ರವೀಣ್ ತಂದೆ ಲಕ್ಷ್ಮಣಪ್ಪ 14 ವರ್ಷ ಸಾವನಪ್ಪಿದ್ದಾರೆ, ಇವರ ಜೊತೆಯಲ್ಲಿದ್ದ ರಮೇಶ ತಂದೆ ರಾಜಪ್ಪ 22 ವರ್ಷ ಆಕಸ್ಮಿಕವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.


ಈ ಸಂಬಂಧ ಹೊಳಲ್ಕೆರೆ ತಹಸಿಲ್ದಾರ್ ಬೀಬಿ ಫಾತಿಮಾ, ಸಿಪಿಐ ಚಿಕ್ಕಣ್ಣ, ಪಿಎಸ್ ಐ ಸಚಿನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಹೊಳಲ್ಕೆರೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ.
