
ಹೊಸನಗರ: ಇತ್ತೀಚಿನ ದಿನದಲ್ಲಿ ಪರಿಸರದಲ್ಲಿ ಕಂಡು ಬರುತ್ತಿರುವ ಹವಮಾನ ವೈಪರೀತ್ಯ ಆತಂಕ ತಂದಿದ್ದು ಹೊಸ ಕಾಯಿಲೆಗಳ ಸೃಷ್ಟಿ ಸಾಧ್ಯತೆಯನ್ನು ಹೆಚ್ಚಿಸಿದೆ ಎಂದು ಜಲತಜ್ಞ ಚಕ್ರವಾಕ ಸುಬ್ರಹ್ಮಣ್ಯ ಕಳವಳ ವ್ಯಕ್ತಪಡಿಸಿದರು.

ಪಟ್ಟಣದ ಇಂದಿರಾಗಾಂಧಿ ವಸತಿ ವಿದ್ಯಾಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು, ಸಮೃದ್ಧವಾಗಿದ್ದ ಮಲೆನಾಡಿನಲ್ಲಿ ಪ್ರದೇಶದಲ್ಲಿ ಅಡಿಕೆಗೆ ಎಲೆಚುಕ್ಕೆ ರೋಗ ಕಾಣಿಸಿಕೊಳ್ಳುವ ಮೂಲಕ ಆತಂಕದ ಗೂಡಾಗಿ ಪರಿವರ್ತಿನೆಯಾಗಿದೆ ಎಂದರು.


ಇಂದು ಕಂಡು ಬರುತ್ತಿರುವ ಅತಿವೃಷ್ಟಿ ಮತ್ತು ಅನಾವೃಷ್ಟಿಗೆ ಏರುತ್ತಿರುವ ಜಾಗತಿಕ ತಾಪಮಾನ ಮುಖ್ಯ ಕಾರಣ. ಇದಕ್ಕೆ ಪ್ರಕೃತಿ ಕಾರಣ ಎನ್ನುವುದಕ್ಕಿಂತ ಮಾನವನೇ ಕಾರಣ ಎಂಬುದು ನೂರರಷ್ಟು ಸತ್ಯ ಎಂದರು.
ಮಿತಿಮೀರಿದ ಜನಸಂಖ್ಯೆ, ನಗರೀಕರಣ, ಒಂದಕ್ಕೊಂದು ಸಂಬಂಧವಿಲ್ಲದ ಜೀವನ ರೀತಿಯಿಂದಾಗಿ ಪರಿಸರದ ಮೇಲೆ ತೀವ್ರತರ ಪರಿಣಾಮಕ್ಕೆ ಕಾರಣವಾಗುತ್ತಿವೆ. ಮನುಷ್ಯ ಮಾತ್ರವಲ್ಲದೇ ವನ್ಯಜೀವಿಗಳು ಕೂಡ ವಿಚಿತ್ರ ರೋಗಕ್ಕೆ ತುತ್ತಾಗುವಂತೆ ಮಾಡಿದೆ. ಎಂದರು.
ವಾಯು, ಜಲ, ಪರಿಸರ ಮಾಲಿನ್ಯದಿಂದ ವಾಯುಮಂಡಲ ದುರ್ಬಲವಾಗುತ್ತಿದೆ. ಭೂತಾಪಮಾನ ಹೆಚ್ಚುತ್ತಿದೆ. ಸಮುದ್ರಮಟ್ಟದಲ್ಲಿ ಆವಿಯ ಪ್ರಮಾಣ ಹೆಚ್ಚಾಗುತ್ತಿದ್ದು ಅಕಾಲಿಕ ಮಳೆಗೆ ಒತ್ತು ನೀಡಿದೆ. ಯೂರೋಪ್ ಖಂಡದಲ್ಲಿ ಈಗಾಗಲೇ ಅನಾವೃಷ್ಟಿ ಹೆಚ್ಚಾಗಿದೆ. ಪಕೃತಿಯ ವರ ಎಂದೇ ಬಿಂಬಿತವಾಗಿರುವ ಮಲೆನಾಡು ಕೂಡ ಹವಮಾನ ವೈಪರೀತ್ಯಕ್ಕೆ ಸಿಲುಕಿರುವುದು ಭವಿಷ್ಯದ ಆತಂಕವನ್ನು ಸೃಷ್ಟಿಸಿದೆ ಎಂದರು.
ಇಂದಿರಾ ಗಾಂಧಿ ವಸತಿ ಶಾಲೆಯ ಪ್ರಾಂಶುಪಾಲ ಎಂ.ಪಿ.ಚಂದ್ರಶೇಖರ್ ಅಧ್ಯಕ್ಷತೆ ವಹಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಪರಿಸರ ಜಾಗೃತಿಯ ವಿಷಯದಲ್ಲಿ 5 ಹಂತದ ಕ್ವಿಜ್ ನಡೆಸಿ ಐವರು ವಿಜೇತ ವಿಧ್ಯಾರ್ಥಿಗಳಿವೆ ಬಹುಮಾನ ವಿತರಿಸಲಾಯಿತು.
ಶಿಕ್ಷಕರಾದ ಎನ್.ಕೆ.ಸಂತೋಷ್, ಡಿ.ಜಿ.ಪರಮೇಶ್, ಹೆಚ್.ಎಲ್.ತಿರುಕೇಶ್, ಒ.ಉಮೇಶನಾಯ್ಕ್, ಎಲ್.ಪ್ರಿಯ, ಎಂ.ಕೆ.ಪ್ರಿಯಾಂಕ, ಭಾರತಿ ಎಂ ನಾಯಕ್, ಡಿ.ಅಶ್ವಿನಿ ಉಪಸ್ಥಿತರಿದ್ದರು.
