Homeತಾಲ್ಲೂಕುಪ್ರಮುಖ ಸುದ್ದಿರಾಜ್ಯಶಿವಮೊಗ್ಗಶಿವಮೊಗ್ಗ ಜಿಲ್ಲೆ

ಕೇರಳ ಮಾದರಿಯಲ್ಲಿ ರಾಜ್ಯದ ಶಿಕ್ಷಕನ ವಿಡಿಯೋ ವೈರಲ್ | ವಿದ್ಯಾರ್ಥಿಗಳ ಧ್ವನಿಯ ಮೇಲೆ ಹೆಸರು ಗುರುತಿಸಿದ ಶಿಕ್ಷಕ ಯೋಗೇಶ್ ಹೆಬ್ಬಳಗೆರೆ| ಹೊಸನಗರದ ಯೋಗೇಶ್ ಜ್ಞಾಪಕ ಶಕ್ತಿಗೆ ಮಣಿವಣ್ಣನ್ ಮೆಚ್ಚುಗೆ

ಕೇರಳ ಮಾದರಿಯಲ್ಲಿ ರಾಜ್ಯದ ಶಿಕ್ಷಕನ ವಿಡಿಯೋ ವೈರಲ್ |
ವಿದ್ಯಾರ್ಥಿಗಳ ಧ್ವನಿಯ ಮೇಲೆ ಹೆಸರು ಗುರುತಿಸಿದ ಶಿಕ್ಷಕ ಯೋಗೇಶ್ ಹೆಬ್ಬಳಗೆರೆ|

ಯೋಗೇಶ್ ಜ್ಞಾಪಕ ಶಕ್ತಿಗೆ ಮಣಿವಣ್ಣನ್ ಮೆಚ್ಚುಗೆ

ಹೊಸನಗರ: ವಿದ್ಯಾರ್ಥಿಗಳ ಮುಖ ನೋಡದೆ ಅವರ ಧ್ವನಿಯ ಮೇಲೆ ಹೆಸರನ್ನು ಗುರುತಿಸುವ ಕೇರಳದ ಶಿಕ್ಷಕನ ವಿಡಿಯೋ ವೈರಲ್ ಆದ ಬೆನ್ನಲ್ಲೇ ರಾಜ್ಯದ ಶಿಕ್ಷಕನೋರ್ವ ಅದೇ ಮಾದರಿಯಲ್ಲಿ ರಾಜ್ಯದ ಗಮನ ಸೆಳೆದಿದ್ದಾರೆ.

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಗೇರುಪುರ ಇಂದಿರಾ ಗಾಂಧಿ ವಸತಿ ಶಾಲೆಯ ಪ್ರಾಂಶುಪಾಲ ಯೋಗೇಶ್ ಹೆಬ್ಬಳಗೆರೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ 250 ವಿದ್ಯಾರ್ಥಿಗಳು ಇದ್ದು, ಮೊದಲಿಗೆ ಎಸ್ಎಸ್ಎಲ್ಸಿ ಯ 50 ವಿದ್ಯಾರ್ಥಿಗಳ ಹೆಸರನ್ನು ಧ್ವನಿಯ ಮೂಲಕ ಹೇಳಿ ಗಮನ ಸೆಳೆದಿದ್ದಾರೆ.
ವಸತಿ ಶಾಲೆಯಲ್ಲಿರುವ 250 ವಿದ್ಯಾರ್ಥಿಗಳಲ್ಲಿ 200 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಹೆಸರನ್ನು ಹೇಳುವ ಸಾಮರ್ಥ್ಯ ಹೊಂದಿರುವ ಯೋಗೇಶ್ ಮಾದರಿ ಎನಿಸಿದ್ದಾರೆ.

ಮಣಿವಣ್ಣನ್ ಟಾಸ್ಕ್!
ಕೇರಳ ರಾಜ್ಯದಲ್ಲಿ ಇಂತಹ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಮಾಜ ಕಲ್ಯಾಣ ಇಲಾಖೆಯ ಮುಖ್ಯ ಕಾರ್ಯದರ್ಶಿ ಮಣಿವಣ್ಣನ್ ತಮ್ಮ ಇಲಾಖೆಯ ಅಧೀನದಲ್ಲಿ ಬರುವ ಶಾಲೆಗಳಿಗೆ ವಿದ್ಯಾರ್ಥಿಗಳ ಧ್ವನಿ ಆಧಾರದ ಮೇಲೆ ಹೆಸರು ಹೇಳುವು ಟಾಸ್ಕ್ ನೀಡಿದ್ದರು. ಅಲ್ಲದೆ ಇದರಲ್ಲಿ ಉತ್ತಮ ಸಾಧನೆ ತೋರುವ ಟಾಪ್ 10 ಶಿಕ್ಷಕರಿಗೆ ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ.ಮಹದೇವಪ್ಪ ಜೊತೆ ಲಂಚ್ ಮಾಡುವ ಅವಕಾಶ ಕೂಡ ನೀಡಿದ್ದರು.

ರಾಜ್ಯದಲ್ಲಿ ಇಲಾಖೆಯಡಿ 721 ವಸತಿ ಶಾಲೆಗಳಿದ್ದು ಸುಮಾರು 6000 ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವೆ ಉತ್ತಮ ಸಂಬಂಧ, ಅರ್ಪಣಾ ಮನೋಭಾವ ಇದ್ದಲ್ಲಿ ಮಾತ್ರ ಒಳ್ಳೆ ಶಿಕ್ಷಣ ಸಿಗುತ್ತದೆ ಎಂಬ ಕಲ್ಪನೆಗೆ.. ಕೇರಳ ವಿಡಿಯೋ ಉದಾಹರಿಸಿ ರಾಜ್ಯದ ಶಿಕ್ಷಕರಿಗೆ ಟಾಸ್ಕ್ ನೀಡಿದ್ದು ಇಡೀ ರಾಜ್ಯದ ಶಿಕ್ಷಕರಲ್ಲಿ ಸಂಚಲನ ಮೂಡಿಸಿದೆ.

ಯೋಗೇಶ್ ಹೆಬ್ಬಾಳಗೆರೆ ಮಾದರಿಯಲ್ಲಿ ರಾಜ್ಯದಲ್ಲಿ ಬಹಳಷ್ಟು ಶಿಕ್ಷಕರು ಈ ಪ್ರಯತ್ನ ಮಾಡಿ ಸೈ ಎನಿಸಿಕೊಂಡಿದ್ದಾರೆ.

ಉತ್ತಮ ಟಾಸ್ಕ್:
ನಮ್ಮ ಇಲಾಖೆ ನೀಡಿದ ನಿರ್ದೇಶನದ ಮೇಲೆ ಈ ಪ್ರಯತ್ನ ಮಾಡಲಾಗಿದೆ. 10 ನೇ ತರಗತಿಯಲ್ಲಿರುವ 50 ಹೆಸರುಗಳನ್ನು ಧ್ವನಿಯ ಮೇಲೆ ಗುರುತಿಸಿದ್ದೇನೆ. ಶಾಲೆಯಲ್ಲಿ 250 ವಿದ್ಯಾರ್ಥಿಗಳು ಇದ್ದು ಶೇ 90 ರಷ್ಟು ಹೇಳುತ್ತೇನೆ ಎಂಬ ವಿಶ್ವಾಸವಿದೆ.
ಯೋಗೇಶ್ ಹೆಬ್ಬಳಗೆರೆ
ಪ್ರಾಂಶುಪಾಲರು
ಇಂದಿರಾ ಗಾಂಧಿ ವಸತಿ ಶಾಲೆ ಗೇರುಪುರ

ಮಣಿವಣ್ಣನ್ ಮೆಚ್ಚುಗೆ:
ಕೇರಳದ ವಿಡಿಯೋ ಟ್ವಿಟ್ಟರ್ ನಲ್ಲಿ ನೋಡಿದಾಗ ನಮ್ಮ ಶಿಕ್ಷಕರು ಹೇಗಿದ್ದಾರೆ ಒಂದು ಸಣ್ಣ ಪ್ರಯತ್ನವಾಗಿ ಟಾಸ್ಕ್ ನೀಡಬೇಕೆನಿಸಿತು. ರಾಜ್ಯದಲ್ಲಿ ಐದಾರು ಶಿಕ್ಷಕರು ವಿಡಿಯೋ ಶೇರ್ ಮಾಡಿದ್ದಾರೆ. ಪ್ರಾಂಶುಪಾಲ ಯೋಗೇಶ್ ಧ್ವನಿಯ ಮೇಲೆ ವಿದ್ಯಾರ್ಥಿಗಳನ್ನು ಗುರುತಿಸಿ ಗಮನ ಸೆಳೆದಿದ್ದಾರೆ.. ಶಿಕ್ಷಕರಿಗೆ ಅರ್ಪಣಾ ಮನೋಭಾವ ಇದ್ದಲ್ಲಿ ಮಾತ್ರ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಲು ಸಾಧ್ಯ. ಎಲ್ಲಕ್ಕಿಂತ ಮುಖ್ಯವಾಗಿ ಶಿಕ್ಷಕರಿಗೆ ವಿದ್ಯಾರ್ಥಿಗಳ ಚಲನವಲನ, ಪರಿಚಯ ಮುಖ್ಯ.

ಪಿ. ಮಣಿವಣ್ಣನ್, ಮುಖ್ಯ ಕಾರ್ಯದರ್ಶಿ, ಸಮಾಜ ಕಲ್ಯಾಣ ಇಲಾಖೆ.

ಸಮಾಜದಲ್ಲಿಯ ಸುದ್ದಿಗಳನ್ನು ಆರಿಸಿ ಮತ್ತೆ ಸಮಾಜಕ್ಕೆ ನೀಡುವ ಒಂದು ಸಣ್ಣ ಪ್ರಯತ್ನ.. ಆ ಕಾರ್ಯದಲ್ಲಿ ಖಚಿತತೆ, ವಿಶ್ವಾಸಾರ್ಹತೆ, ಸಮಸ್ಯೆಯ ಬಿಂಬ, ಬಿಂಬಿತ ಸಮಸ್ಯೆಗೆ ಪರಿಹಾರದ ಯತ್ನ.. ಆ ಯತ್ನದಲ್ಲಿ ದಕ್ಕಿದ ಒಂದಷ್ಟು ಯಶಸ್ಸು.. ಇದರಲ್ಲಿ‌ ನಿರಂತರತೆ ಕಾಯ್ದುಕೊಳ್ಳುವ ಆಶಯ.. ಅಷ್ಟೆ..

What's your reaction?

Related Posts

ನೂಲಿಗ್ಗೇರಿಯಲ್ಲಿ ವಿಜ್ಞಾನ ಮೇಳ ಕಲಿಕಾ ಹಬ್ಬದ ಸಂಭ್ರಮ ಮಕ್ಕಳ ಪ್ರತಿಭೆಯನ್ನು ಸಾಕ್ಷೀಕರಿಸಿದ ಕಾರ್ಯಕ್ರಮ

ನೂಲಿಗ್ಗೇರಿಯಲ್ಲಿ ವಿಜ್ಞಾನ ಮೇಳ ಕಲಿಕಾ ಹಬ್ಬದ ಸಂಭ್ರಮ ಮಕ್ಕಳ ಪ್ರತಿಭೆಯನ್ನು ಸಾಕ್ಷೀಕರಿಸಿದ…

ಇದು ಗುಡ್ಡಗಾಡು ಕಾರ್ ರೇಸ್ ಅಲ್ಲ..! ಮಾಸ್ತಿಕಟ್ಟೆ ತೀರ್ಥಹಳ್ಳಿ ಪ್ರಮುಖ ಹೆದ್ದಾರಿಯ ಕ್ರಾಸ್.!

ಇದು ಗುಡ್ಡಗಾಡು ಕಾರ್ ರೇಸ್ ಅಲ್ಲ..! ಮಾಸ್ತಿಕಟ್ಟೆ ತೀರ್ಥಹಳ್ಳಿ ಪ್ರಮುಖ ಹೆದ್ದಾರಿಯ ಕ್ರಾಸ್.!…

ಇಲ್ಲಿ ದೇಶ ಕಾಯುವ ಸೈನಿಕರಿಗೆ ಟೀ ಕಾಫೀ ಉಚಿತ: ಮೆಚ್ಚುಗೆಗೆ ಪಾತ್ರವಾದ ಉದಯಕುಮಾರ್ ಶೆಟ್ಟಿ ಕಳಕಳಿ

ಇಲ್ಲಿ ದೇಶ ಕಾಯುವ ಸೈನಿಕರಿಗೆ ಟೀ ಕಾಫೀ ಉಚಿತ: ಮೆಚ್ಚುಗೆಗೆ ಪಾತ್ರವಾದ ಉದಯಕುಮಾರ್ ಶೆಟ್ಟಿ…

ವಕೀಲರ ಸಮಯಪ್ರಜ್ಞೆ ಕಾರ್ಯ | ಕೆನರಾ ಬ್ಯಾಂಕ್ ಸ್ಪಂದನೆ | ಜೈಲು ಸೇರೋದು ತಪ್ಪಿಸಿಕೊಂಡ ಗ್ರಾಹಕ!

ವಕೀಲರ ಸಮಯಪ್ರಜ್ಞೆ ಕಾರ್ಯ | ಕೆನರಾ ಬ್ಯಾಂಕ್ ಸ್ಪಂದನೆ | ಜೈಲು ಸೇರೋದು ತಪ್ಪಿಸಿಕೊಂಡ ಗ್ರಾಹಕ!…

ಕೊಲ್ಲೂರು ಹೆದ್ದಾರಿ ಎಬಗೋಡು ಪಕ್ಕದಲ್ಲೇ ನಿಧಿ ಶೋಧನೆ : ಶಿವಲಿಂಗದ ಪಕ್ಕದಲ್ಲಿ 4 ಅಡಿಯಷ್ಟು ಗುಂಡಿ ತೋಡಿದ ನಿಧಿ ಚೋರರು

ಕೊಲ್ಲೂರು ಹೆದ್ದಾರಿ ಎಬಗೋಡು ಪಕ್ಕದಲ್ಲೇ ನಿಧಿ ಶೋಧನೆ : ಶಿವಲಿಂಗದ ಪಕ್ಕದಲ್ಲಿ 4 ಅಡಿಯಷ್ಟು…

1 of 42

Leave A Reply

Your email address will not be published. Required fields are marked *