
ಹೊಸನಗರ: ಹೆದ್ದಾರಿ ಬದಿಯ ಗೂಡಂಗಡಿಗಳಿಗೆ ಸೂಕ್ತ ಸ್ಥಳಾವಕಾಶ ನೀಡುವಂತೆ ಬೀದಿ ಬದಿಯ ವ್ಯಾಪಾರಸ್ಥರು ತಹಶೀಲ್ದಾರ್ ಕಚೇರಿಯ ಮೂಲಕ ಪಟ್ಟಣ ಪಂಚಾಯ್ತಿಗೆ ಮನವಿ ಸಲ್ಲಿಸಿದ್ದಾರೆ.
ಹೊಸನಗರ ಪಟ್ಟಣದ ಮುಖ್ಯರಸ್ತೆಯ ಬದಿಯಲ್ಲಿ 40 ಕ್ಕು ಹೆಚ್ಚು ಹೊಟೆಲ್, ಅಂಗಡಿಗಳನ್ನಿಟ್ಟುಕೊಂಡು ಬಡವರು ಬದುಕು ಕಟ್ಟಿಕೊಂಡಿದ್ದಾರೆ. ಇದನ್ನು ಹೊರತುಪಡಿಸಿ ಬೇರೆ ಯಾವುದೇ ಆರ್ಥಿಕ ಮೂಲವಿಲ್ಲ. ಆದರೆ ಗೂಡಂಗಡಿ ಹೊಟೆಲ್ ಇರುವ ಪ್ರದೇಶದಲ್ಲಿ ಮೂಲಸೌಲಭ್ಯಗಳು ಇಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.


ಅಲ್ಲದೇ ಪಟ್ಟಣದ ಮುಖ್ಯ ರಸ್ತೆಯೇ ರಾಷ್ಟ್ರೀಯ ಹೆದ್ದಾರಿಯಾಗಿ ಮಾರ್ಪಡುವ ಸಾಧ್ಯತೆ ಇದ್ದು, ಇರುವ ಜಾಗಕ್ಕು ಕುತ್ತು ಬರುವ ಆತಂಕ ಎದುರಾಗಿದೆ. ಈಹಿನ್ನೆಲೆಯಲ್ಲಿ ಸೂಕ್ತ ಸ್ಥಳಾವಕಾಶದ ಜೊತೆಗೆ ಮೂಲಸೌಲಭ್ಯ ಒದಗಿಸುವಂತೆ ಮನವಿ ಮಾಡಿದ್ದಾರೆ.
ತಹಶೀಲ್ದಾರ್ ಪರವಾಗಿ ಸುಧೀಂದ್ರಕುಮಾರ್ ಮನವಿ ಪಡೆದುಕೊಂಡು ಸಂಬಂಧಿಸಿದ ಇಲಾಖೆಗೆ ಕಳುಹಿಸಿಕೊಡುವ ಭರವಸೆ ನೀಡಿದರು.
ಬೀದಿ ಬದಿ ವ್ಯಾಪಾರಸ್ಥರ ಸಂಘದ ನಾಗರಾಜಪ್ಪ, ಗಣಪತಿ, ಚಂದ್ರಶೇಖರ್, ಅವಿನಾಶ್, ಅಶೋಕ್ ಗಿರಿಜಮ್ಮ, ಜಾಕೀರ್, ಚಂದ್ರಪ್ಪ, ಶಾಲಿನಿ, ರಂಜಿತ್, ಶಾರದಾ, ಕೃಷ್ಣಮೂರ್ತಿ ಶಾರದಾ, ಯೋಗೇಂದ್ರ, ಅನ್ವರ್, ಗಂಗಾಧರ್ ಇತರರು ಇದ್ದರು.
