ಕ್ರೈಂHomeತಾಲ್ಲೂಕುತೀರ್ಥಹಳ್ಳಿಪ್ರಮುಖ ಸುದ್ದಿಶಿವಮೊಗ್ಗ

ಹೆರಟೆ ಬಳಿ ಕಾರುಗಳ‌ ನಡುವೆ ಮುಖಾಮುಖಿ ಡಿ*ಕ್ಕಿ : ಓರ್ವ ಗಂಭೀ*ರ

 ಕಾರುಗಳ‌ ನಡುವೆ ಮುಖಾಮುಖಿ ಡಿ*ಕ್ಕಿ : ಓರ್ವ ಗಂಭೀ*ರ

ಹೊಸನಗರ: ಎರಡು ಕಾರುಗಳ‌ ನಡುವೆ ಮುಖಾಮುಖಿ ಡಿಕ್ಕಿಯಾಗಿ ಓರ್ವ ಗಂಭೀರಗೊಂಡು ನಾಲ್ವರು ಗಾಯಗೊಂಡ ಘಟನೆ ಹೆರಟೆ ಸೇತುವೆ ಸಮೀಪ ಮಂಗಳವಾರ ಮಧ್ಯಾಹ್ನ ನಡೆದಿದೆ.

ಶಿವಮೊಗ್ಗ ಕಡೆಯಿಂದ ಕುಂದಾಪುರ ಕಡೆ ಹೋಗುತ್ತಿದ್ದ ಕಾರು ಮತ್ತು ಮಾಸ್ತಿಕಟ್ಟೆಯಿಂದ ಕೊಡಚಾದ್ರಿ ಕಡೆ ಹೋಗುತ್ತಿದ್ದ ಕಾರಿನ ನಡುವೆ ಅಪಘಾತ ಸಂಭವಿಸಿದೆ.
ಕುಂದಾಪುರ ಕಡೆ ಹೊರಟಿದ್ದ ಕಾರಿನಲ್ಲಿ ಅಲ್ಪಾಜ್, ಇರ್ಫಾನ್ ಇಬ್ಬರು ಇದ್ದು ಅಲ್ಫಾಜ್ ಗೆ ಹೊಟ್ಟೆಭಾಗಕ್ಕೆ ಬಲವಾದ ಪೆಟ್ಟು ಬಿದ್ದು ಗಂಭೀರ ಗಾಯವಾಗಿದೆ. ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇರ್ಫಾನ್ ಕೂಡ ಗಾಯಗೊಂಡಿದ್ದಾನೆ.

ಕೊಡಚಾದ್ರಿ ಕಡೆ ಹೊರಟಿದ್ದ ಕಾರಿನಲ್ಲಿ ಮಂಜುನಾಥ್, ಯಶ್, ಮೋಹನ್ ಸೇರಿದಂತೆ ಮೂವರು ಇದ್ದು ಮೋಹನ್ ಎಂಬುವವರ ತಲೆಗೆ ಪೆಟ್ಟಾಗಿದ್ದು, ನಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ಇಬ್ಬರ ಕೈಗಳಿಗೆ ಗಾಯಗಳಾಗಿವೆ.
ಇವರು ಬಳ್ಳಾರಿಯ ಕಂಪ್ಲಿ, ಕರಟಗಿ ಕಡೆಯವರಾಗಿದ್ದು ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಶಿವಮೊಗ್ಗದಲ್ಲಿ ನಡೆದ ನೌಕರರ ಕ್ರೀಡಾಕೂಟದಲ್ಲಿ ಭಾಗವಹಿಸಿ ಬಳಿಕ ಕೊಡಚಾದ್ರಿಗೆ ಹೋಗುತ್ತಿದ್ದರು. ನಗರದಲ್ಲಿ ರಸ್ತೆ ಮಿಸ್ ಆಗಿ ಮಾಸ್ತಿಕಟ್ಟೆ ಹೋಗಿದ್ದರು. ಬಳಿಕ ವಾಪಸ್ ಬರುವ ವೇಳೆ ಅಪಘಾತವಾಗಿದೆ.
ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಸಮಾಜದಲ್ಲಿಯ ಸುದ್ದಿಗಳನ್ನು ಆರಿಸಿ ಮತ್ತೆ ಸಮಾಜಕ್ಕೆ ನೀಡುವ ಒಂದು ಸಣ್ಣ ಪ್ರಯತ್ನ.. ಆ ಕಾರ್ಯದಲ್ಲಿ ಖಚಿತತೆ, ವಿಶ್ವಾಸಾರ್ಹತೆ, ಸಮಸ್ಯೆಯ ಬಿಂಬ, ಬಿಂಬಿತ ಸಮಸ್ಯೆಗೆ ಪರಿಹಾರದ ಯತ್ನ.. ಆ ಯತ್ನದಲ್ಲಿ ದಕ್ಕಿದ ಒಂದಷ್ಟು ಯಶಸ್ಸು.. ಇದರಲ್ಲಿ‌ ನಿರಂತರತೆ ಕಾಯ್ದುಕೊಳ್ಳುವ ಆಶಯ.. ಅಷ್ಟೆ..

What's your reaction?

Related Posts

1 of 45

Leave A Reply

Your email address will not be published. Required fields are marked *