
: ವಿದ್ಯುತ್ ಅಸಮರ್ಪಕ ಸರಬರಾಜನ್ನು ವಿರೋಧಿಸಿ ಪಟ್ಟಣದ 6 ಮತ್ತು 7ನೇ ವಾರ್ಡ್ ಗ್ರಾಮಸ್ಥರು ಮೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ದಿನಂಪ್ರತಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುತ್ತಿದೆ. ವಿದ್ಯುತ್ ಬೆಳಕು ಇಲ್ಲದೇ ಶಾಲಾ ಕಾಲೇಜು ಮಕ್ಕಳ ವ್ಯಾಸಂಗ, ದಿನನಿತ್ಯ ಕೆಲಸಗಳಿಗೆ ಕಿರಿಕಿರಿಯಾಗುತ್ತಿದೆ. ಈ ಬಗ್ಗೆ ಮೆಸ್ಕಾಂ ಕಚೇರಿ ಅಧಿಕಾರಿಗಳ ಗಮನಕ್ಕೆ ತಂದರು ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.


ಹೊಸನಗರ ಮೆಸ್ಕಾಂ SO ಮಾಯಣ್ಣ ಗೌಡರಿಗೆ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಮನವಿ ನೀಡಲಾಯಿತು.
6 ಮತ್ತು 7 ನೇ ವಾರ್ಡ್ ಗೆ ಸಂಬಂಧಪಟ್ಟಂತೆ ಟಿಸಿಯನ್ನು ಬದಲಾಯಿಸಲಾಗಿದೆ. ಮುಂದೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಆಗುವುದಿಲ್ಲ ಎಂದು ಭರವಸೆ ನೀಡಿದರು.
ದ್ಯಾವರ್ಸದ ವೀನಸ್ ಸತೀಶ್, ನಾಗೇಶ್, ಗುರುರಾಜ್ ಕೆ.ಎಸ್, ಕೃಷ್ಣಮೂರ್ತಿ, ರಘು ಪೂಜಾರಿ, ಶ್ರೀನಿವಾಸ್, ಸತೀಶ ಮತ್ತು ನಿವಾಸಿಗಳು ಹಾಜರಿದ್ದರು.
