
-
HOSANAGARA| ವಿದ್ಯಾರ್ಥಿಗಳ ದೈಹಿಕ ಕ್ಷಮತೆಗೆ ಕೀಡೆ ಸಹಕಾರಿ : ಬಿಇಒ ಹೆಚ್.ಆರ್.ಕೃಷ್ಣಮೂರ್ತಿ | ಹೊಸನಗರ ಹೋಲಿ ರಿಡೀಮರ್ ವಿದ್ಯಾಶಾಲೆಯಲ್ಲಿ ಕ್ರೀಡೋತ್ಸವ
ಹೊಸನಗರ: ವಿದ್ಯಾರ್ಥಿಗಳ ದೈಹಿಕ ಕ್ಷಮತೆಗೆ ಕ್ರೀಡೆಗಳು ಸಹಕಾರಿಯಾಗಿದ್ದು, ಮಕ್ಕಳನ್ನು ಪ್ರೋತ್ಸಾಹಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಆರ್.ಕೃಷ್ಣಮೂರ್ತಿ ಮನವಿ ಮಾಡಿದರು.
ಪಟ್ಟಣದ ಹೋಲಿ ರಿಡೀಮರ್ ವಿದ್ಯಾಸಂಸ್ಥೆ ಆವರಣದಲ್ಲಿ ಗುರುವಾರ ವಾರ್ಷಿಕ ಕ್ರೀಡೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.


ಇಂದಿನ ಆಹಾರ ಪದ್ಧತಿ ಮೊದಲಿನಂತಿಲ್ಲ. ಟೇಸ್ಟ್ ಫುಡ್ ಹಾವಳಿ ಮಕ್ಕಳನ್ನು ಆಕರ್ಷಣೆ ಮಾಡುತ್ತಿವೆ. ಆರೋಗ್ಯದ ದೃಷ್ಟಿಯಿಂದ ಇದು ಬಹಳ ಅಪಾಯಕಾರಿಯಾಗಿದೆ. ಇನ್ನು ಹೆಚ್ಚಿನ ಮಕ್ಕಳಿಗೆ ಶಾಲಾ ಹೋಂ ವರ್ಕ್ ಹೊರತು ಪಡಿಸಿ ಬೇರೆ ಕೆಲಸಗಳಿರುವುದಿಲ್ಲ. ಪೋಷಕರ ಪ್ರೀತಿಗೆ ಒಳಪಡುವ ಮಕ್ಕಳ ದೇಹದ ಸದೃಢತೆ ಉತ್ತಮ ಇರುವುದಿಲ್ಲ. ಹೀಗಾಗಿ ಮಕ್ಕಳನ್ನು ಕ್ರೀಡೆಗಳುಗೆ ಹೆಚ್ಚು ಪ್ರೋತ್ಸಾಹಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಹೋಲಿ ರಿಡೀಮರ್ ವಿದ್ಯಾ ಶಾಲೆಯ ಸಂಚಾಲಕಿ ಸಿಸ್ಟರ್ ರುಫೀನಾ ಅಂಜಲಿನ್ ಡಿಸೋಜ ಮಾತನಾಡಿ, ಮಕ್ಕಳಿಗೆ ಪಠ್ಯದ ಜೊತೆ ಪಠ್ಯೇತರ ಶಿಕ್ಷಣ ಕೂಡ ಮಹತ್ವದ್ದಾಗಿದೆ. ಪೋಷಕರು ಹೆಚ್ಚಿನ ಆಸಕ್ತಿ ತೋರಬೇಕು ಎಂದರು.
ತಾಲೂಕು ದೈಹಿಕ ಪರಿವೀಕ್ಷಕ ಕೆ.ಬಾಲಚಂದ್ರರಾವ್ ಕ್ರೀಡೋತ್ಸವದ ಧ್ವಜಾರೋಹಣ ನೆರವೇರಿಸಿದರು.
ಎಂ.ಗುಡ್ಡೆಕೊಪ್ಪ ಗ್ರಾಪಂ ಸದಸ್ಯರಾದ ಸತೀಶ ಕಾಲಸಸಿ, ದಿವ್ಯಾ ಪ್ರವೀಣ್, ಕಸಬಾ ಹೋಬಳಿ ಶಿಕ್ಷಣ ಸಂಯೋಜಕ ಕರಿಬಸಪ್ಪ, ಸಿ.ಆರ್.ಪಿ ಮಂಜಪ್ಪ, ದೈಹಿಕ ಶಿಕ್ಷಕ ಕೆ.ಎನ್.ಧನಂಜಯ್, ಶಿಕ್ಷಕರಾದ ಸುಷ್ಮಾ, ಗುರುರಾಜ್, ಕೆನರಾ ಬ್ಯಾಂಕ್ ವಿಜಯಲಕ್ಷ್ಮೀ ಉಪಸ್ಥಿತರಿದ್ದರು.
