
ಹೊಸನಗರ: ಪಟ್ಟಣ ಪಂಚಾಯ್ತಿಯಲ್ಲಿ ನಡೆದ ಪೌರಕಾರ್ಮಿಕರ ದಿನಾಚರಣೆ ವಿಶೇಷವಾಗಿ ಮೂಡಿ ಬಂದಿದ್ದು ರಾಜ್ಯದಲ್ಲೇ ಮಾದರಿಯಾಗಿದೆ. ಇಡೀ ವೇದಿಕೆ ಪೌರ ಕಾರ್ಮಿಕರಿಗೆ ಮೀಸಲಾಗಿದ್ದರೆ.. ಜನಪ್ರತಿನಿಧಿಗಳು, ಅಧಿಕಾರಿಗಳು ಸಭಿಕರಾಗಿ ಕುಳಿತು ಇಡೀ ಕಾರ್ಯಕ್ರಮದ ಮಹತ್ವವನ್ನು ಜಗತ್ತಿಗೆ ಸಾರಿದರು.
ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ನಾಗಪ್ಪ, ಸರಸ್ವತಿ, ಚಂದ್ರಪ್ಪ, ನಾಗರಾಜ, ನಾಗರತ್ನ, ಗೀತಾ, ಬಾಬು, ಕಾರ್ತಿಕ್, ಅಣ್ಣಪ್ಪ, ಕಿರಣ, ರಮೇಶ, ಇಸ್ಮಾಯಿಲ್, ಗಿರೀಶ್, ಸುನಿಲ್, ಉದಯ, ಸಾಧು, ಯಶೋಧಮ್ಮ, ಆನಂದ ಸೇರಿದಂತೆ, 20 ಕ್ಕು ಹೆಚ್ಚು ಪೌರಕಾರ್ಮಿಕರನ್ನು ಗೌರವಿಸಿ ಸನ್ಮಾನಿಸಲಾಯಿತು.


ಮುಖ್ಯಾಧಿಕಾರಿ ಟಿ.ಬಾಲಚಂದ್ರಪ್ಪ, ಒಬ್ಬ ರೋಗಿಗೆ ವೈದ್ಯ ಎಷ್ಟು ಮುಖ್ಯವೋ ಅದಕ್ಕು ಮಿಗಿಲಾಗಿ ಪಟ್ಟಣದ ನಾಗರಿಕರಿಗೆ ಪೌರಕಾರ್ಮಿಕ ಮುಖ್ಯ. ಅವರ ಸೇವಾಗೌರವ, ವ್ಯಕ್ತಿಗೌರವಕ್ಕೆ ಮನ್ನಣೆ ನೀಡಬೇಕಾಗಿದೆ ಎಂದರು.
ತಹಶೀಲ್ದಾರ್ ವಿ.ಎಸ್.ರಾಜೀವ್ ಪೌರಕಾರ್ಮಿಕರ ದಿನವನ್ನು ವಿಶೇಷವಾಗಿ ಆಚರಿಸುವ ಮೂಲಕ ಪಟ್ಟಣಪಂಚಾಯ್ತಿ ಗಮನಸೆಳೆದಿದೆ. ಇದು ಪೌರಕಾರ್ಮಿಕರಿಗೆ ಸಂದ ಗೌರವ ಎಂದರು.
ಹಿರಿಯ ಪೌರಕಾರ್ಮಿಕ ನಾಗಪ್ಪ ಅಧ್ಯಕ್ಷತೆವಹಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಇದಕ್ಕು ಮುನ್ನ ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಪಟ್ಟಣದಲ್ಲಿ ಜಾಥಾ ನಡೆಸಲಾಯಿತು. ಪ್ರಮುಖ ವೃತ್ತಗಳಲ್ಲಿ ಹೂ ಚೆಲ್ಲಿ ಸಿಹಿಹಂಚುವ ಮೂಲಕ ಶುಭಕೋರಲಾಯಿತು.
ಪಪಂ ಅಧ್ಯಕ್ಷೆ ಗುಲಾಬಿ ಮರಿಯಪ್ಪ, ಉಪಾಧ್ಯಕ್ಷೆ ಕೃಷ್ಣವೇಣಿ, ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಂದ್ರ ಕೋಟ್ಯಾನ್, ಸದಸ್ಯರಾದ ಹಾಲಗದ್ದೆ ಉಮೇಶ್, ಎಂ.ಎನ್.ಸುಧಾಕರ್, ಶ್ರೀಪತಿರಾವ್, ನಾಗಪ್ಪ ರೆಡ್ಡಿ, ಅಶ್ವಿನಿಕುಮಾರ್, ಗುರುರಾಜ್ ಬಜಾಜ್, ಚಂದ್ರಕಲಾ, ಯಾಸೀರ್, ಪಟ್ಟಣ ಪಂಚಾಯಿತಿ ಅಧಿಕಾರಿವರ್ಗ ಸಭಿಕರ ಆಸನದಲ್ಲಿ ಆಸೀನರಾಗಿದ್ದು ವಿಶೇಷವಾಗಿತ್ತು..
