
HOSANAGARA|ಕೃಷಿ ಜಮೀನಿಗೆ ನುಗ್ಗಿದ ಮಳೆ ನೀರು : ಕಂಗಾಲಾದ ರೈತ : ನಷ್ಟ ತಪ್ಪಿಸಲು ತಡೆಗೋಡೆ ನಿರ್ಮಾಣಕ್ಕೆ ಒತ್ತಾಯ
ಹೊಸನಗರ: ಇತ್ತೀಚೆಗೆ ತಾಲೂಕಿನಲ್ಲಿ ಸುರಿಯುತ್ತಿರುವ ಮಳೆಗೆ ಅನೇಕ ಹಾನಿ ಸಂಭವಿಸಿದೆ. ಪಟ್ಟಣದ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಲೇಔಟ್ಗೆ ಅಂಟಿಕೊಂಡಿರು ಧರೆ ಕುಸಿಯುವ ಭೀತಿ ಎದುರಾಗಿದ್ದು, ಮಳೆ ಹೀಗೆ ಮುಂದುವರೆದಲ್ಲಿ ಹತ್ತಾರು ಎಕರೆ ಅಡಿಕೆ, ಭತ್ತದ ಗದ್ದೆಗಳಿಗೆ ವ್ಯಾಪಕ ಹಾನಿ ಉಂಟಾಗುವ ಆತಂಕ ರೈತರನ್ನು ಬೆಂಬಿಡದೆ ಕಾಡುತ್ತಿದೆ.
ಪಟ್ಟಣದ ಮಾರಿಗುಡ್ಡ, ಕೈಗಾರಿಕಾ ವಲಯ, ಎಪಿಎಂಸಿ, ಕೋರ್ಟ್ ಹಿಂಭಾಗ ಸೇರಿದಂತೆ ಹಲವೆಡೆ ಸುರಿದ ಮಳೆನೀರು ಮಾವಿನ ಕೊಪ್ಪ ಗ್ರಾಮದ ರತ್ನಾಕರ ಬಿನ್ ಹಿರಿಯಣ್ಣಯ್ಯ ಎಂಬವರ (ಸರ್ವೆ ನಂಬರ್ 18) ಕೃಷಿ ಜಮೀನಿನಲ್ಲಿರುವ ಹಳ್ಳದ ಮೂಲಕ ಹಾದು ಹೋಗುತ್ತಿದೆ. ಆದರೆ ಭಾರೀ ಮಳೆಯ ಹಿನ್ನಲೆ ನೀರು ಹೆಚ್ಚಾಗಿ ಹರಿದು ಬರುತ್ತಿರುವ ಕಾರಣ, ಜಮೀನಿನ ದಂಡೆ ಒಡೆದು ನೀರು ಕೃಷಿಭೂಮಿಗೆ ನುಗ್ಗಿ ಹಾನಿ ಉಂಟಾಗಿದೆ. ಕೆ ಎಸ್ ಎಸ್ ಎಸ್ ಡಿ ಸಿ ಎಲ್ ಅವರ ಲೇಔಟ್ ನಲ್ಲಿ ಮಳೆನೀರು ಸರಾಗವಾಗಿ ಹರಿಯಲು ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದಿರುವುದೇ ಈ ಎಲ್ಲಾ ಪ್ರಮಾಧಗಳಿಗೆ ಕಾರಣವಾಗಿದೆ ಎಂಬುದು ಕೃಷಿಕರ ದೂರಾಗಿದೆ.
ಸಂಭವನೀಯ ಹೆಚ್ಚಿನ ಅವಘಡ ತಪ್ಪಿಸಲು ಸಂಬಂದ ಪಟ್ಟ ಇಲಾಖೆ ಅಧಿಕಾರಿ ವರ್ಗ ಸ್ಥಳಕ್ಕೆ ಭೇಟಿ ಸೂಕ್ತ ಕ್ರಮಕ್ಕೆ ಮುಂದಾಗುವಂತೆ ರೈತ ರತ್ನಾಕರ್ ತಾಲೂಕು ಆಡಳಿತವನ್ನು ಒತ್ತಾಯಿಸಿದ್ದಾರೆ.
