ಪ್ರಮುಖ ಸುದ್ದಿತಾಲ್ಲೂಕುತೀರ್ಥಹಳ್ಳಿಸಾಗರಹೊಸನಗರ

HOSANAGARA| ಹೊಸನಗರದಲ್ಲಿ 23 ಮನೆಗಳಿಗೆ ಹಾನಿ | ಇದರಲ್ಲಿ ಅನಧಿಕೃತ ಮನೆಗಳೆಷ್ಟು ಗೊತ್ತಾ! ಈ‌ ಮನೆಗಳಿಗೆ ಪರಿಹಾರ ಸಿಗೋದಿಲ್ವಾ? ತಹಶೀಲ್ದಾರ್ ರಶ್ಮಿ‌ಹೇಳಿದ್ದೇನು?

HOSANAGARA| ಹೊಸನಗರದಲ್ಲಿ 23 ಮನೆಗಳಿಗೆ ಹಾನಿ | ಇದರಲ್ಲಿ ಅನಧಿಕೃತ ಮನೆಗಳೆಷ್ಟು ಗೊತ್ತಾ! ಈ‌ ಮನೆಗಳಿಗೆ ಪರಿಹಾರ ಸಿಗೋದಿಲ್ವಾ? ತಹಶೀಲ್ದಾರ್ ರಶ್ಮಿ‌ಹೇಳಿದ್ದೇನು?

ಹೊಸನಗರ: ತಾಲೂಕಿನಲ್ಲಿ ಸುರಿಯುತ್ತಿರುವ ಬಾರೀ ಮಳೆಗೆ 23 ಮನೆಗಳಿಗೆ ಹಾನಿಯಾಗಿವೆ. ಈ ಬಗ್ಗೆ ವರದಿ ಸಿದ್ದಪಡಿಸಲಾಗಿದೆ ಎಂದು ಹೊಸನಗರ ತಹಶೀಲ್ದಾರ್ ರಶ್ಮಿ ಹಾಲೇಶ್ ಹೇಳಿದ್ದಾರೆ.

ಹಾನಿಗೀಡಾದ 23 ಮನೆಗಳಲ್ಲಿ ಒಂದು ಮನೆ ಮಾತ್ರ ಅಧಿಕೃತ. ಉಳಿದಂತೆ 22 ಮನೆಗಳು ಅನಧಿಕೃತವಾಗಿವೆ ಎಂದು ಹೇಳಿದ್ದಾರೆ.

ಪರಿಹಾರ ಸಿಗುವುದೇ.?
ಈ ಹಿಂದೆ ಹಾನಿಗೀಡಾದ ಮನೆಗಳು ಅಧಿಕೃತವಾದರೇ ತಲಾ ರೂ.5 ಲಕ್ಷ ಪರಿಹಾರ ಸಿಗುತ್ತಿತ್ತು. ಅನಧಿಕೃತವಾದರೇ ರೂ.1 ಲಕ್ಷ ಪರಿಹಾರ ನೀಡಲಾಗುತ್ತಿತ್ತು. ಆದರೆ ಈಗ ಆ ನಿಯಮವಿಲ್ಲ. ಅಧಿಕೃತ‌ ಮನೆಗಳಿಗಷ್ಟೆ. ಅನಧಿಕೃತ ಮನೆಗಳ ಬಗ್ಗೆ ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳುತ್ತದೋ ಅದರೆ ಮೇಲೆ ನಿಗಧಿ ಮಾಡಬೇಕಿದೆ ಎಂದರು.

ಮನೆ ದಾಖಲೆ 9/11, ಅಥವಾ ಸರ್ಕಾರ ನೀಡಿದ ಹಕ್ಕುಪತ್ರ ಇದ್ದರೆ ಅಧಿಕೃತವಾಗಿ ಪರಿಗಣಿಸಬಹುದು. ಆದರೆ ತಾಲೂಕು ಆಡಳಿತದಿಂದ ಹಾನಿಯಾದ 23 ಮನೆಗಳನ್ನು ಒಳಗೊಂಡಂತೆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದಿದ್ದಾರೆ.

ಸಮಾಜದಲ್ಲಿಯ ಸುದ್ದಿಗಳನ್ನು ಆರಿಸಿ ಮತ್ತೆ ಸಮಾಜಕ್ಕೆ ನೀಡುವ ಒಂದು ಸಣ್ಣ ಪ್ರಯತ್ನ.. ಆ ಕಾರ್ಯದಲ್ಲಿ ಖಚಿತತೆ, ವಿಶ್ವಾಸಾರ್ಹತೆ, ಸಮಸ್ಯೆಯ ಬಿಂಬ, ಬಿಂಬಿತ ಸಮಸ್ಯೆಗೆ ಪರಿಹಾರದ ಯತ್ನ.. ಆ ಯತ್ನದಲ್ಲಿ ದಕ್ಕಿದ ಒಂದಷ್ಟು ಯಶಸ್ಸು.. ಇದರಲ್ಲಿ‌ ನಿರಂತರತೆ ಕಾಯ್ದುಕೊಳ್ಳುವ ಆಶಯ.. ಅಷ್ಟೆ..

What's your reaction?

Related Posts

1 of 45

Leave A Reply

Your email address will not be published. Required fields are marked *