
ಹೊಸನಗರ/ ತೀರ್ಥಹಳ್ಳಿ ಯಡೂರು ತಲಾಸಿ ಅಬ್ಬಿ ಫಾಲ್ಸ್ ನಲ್ಲಿ ಈಜಲು ಹೋದ ಯುವಕನೋರ್ವ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.
ತೀರ್ಥಹಳ್ಳಿಯಿಂದ ಮೂವರು ಯುವಕರು ಅಬ್ಬಿಫಾಲ್ಸ್ ಗೆ ಪ್ರವಾಸಕ್ಕೆ ಬಂದಿದ್ದರು. ಅದರಲ್ಲಿ ಫಾಲ್ಸ್ ಕೆಳಗಿನ ಹೊಂಡದಲ್ಲಿ ಈಜಲು ಹೋಗಿದ್ದಾನೆ. ಬಳಿಕ ನಾಪತ್ತೆಯಾಗಿದ್ದಾನೆ. ಪೊಲೀಸರು ಮತ್ತು ಸ್ಥಳೀಯರ ಶೋಧ ಕಾರ್ಯದ ಬಳಿಕ ಶವವಾಗಿ ಪತ್ತೆಯಾಗಿದ್ದಾನೆ.


ತೀರ್ಥಹಳ್ಳಿಯಲ್ಲಿ ಡಿಪ್ಲೊಮಾ ಓದುತ್ತಿದ್ದ ರಿಷಬ್ ಎಂಬಾತ ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.
ಸ್ಥಳಕ್ಕೆ ನಗರ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
