
HOSANAGARA| 14ನೇ ವರ್ಷದ ಚಾತುರ್ಮಾಸ್ಯ ಏಕಾದಶಿ ತಾಳಮದ್ದಲೆ ಕಾರ್ಯಕ್ರಮ : ಜು.17ಕ್ಕೆ ಚಾಲನೆ, 9 ಪ್ರಸಂಗಗಳು : ವಿಶಿಷ್ಟ ಪರಿಕಲ್ಪನೆಯಲ್ಲಿ ಮಹಾಭಾರತ-ನವಕ
ಹೊಸನಗರ: ಮಾರುತಿಪುರ ಶ್ರೀರಾಮಾರ್ಪಣಾ ಕಲಾ ವೇದಿಕೆಯ 14 ನೇ ವರ್ಷದ ಚಾತುರ್ಮಾಸ್ಯ ಏಕಾದಶಿ ತಾಳಮದ್ದಲೆ ಕಾರ್ಯಕ್ರಮ ಜು.17 ರಂದು ಚಾಲನೆಗೊಳ್ಳಲಿದೆ.
ಮಾರುತಿಪುರದ ಶ್ರೀ ಕಲ್ಯಾಣೇಶ್ವರ ದೇಗುಲದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಮಹಾಭಾರತ-ನವಕ ಎಂಬ ವಿಶೇಷ ಪರಿಕಲ್ಪನೆಯೊಂದಿಗೆ ಪ್ರಸಂಗಗಳನ್ನು ಆಯೋಜಿಸಲಾಗಿದೆ.
ಜು.17 ಬುಧವಾರ ಸಂಜೆ ಕಾರ್ಯಕ್ರಮ ಆರಂಭವಾಗಲಿದ್ದು ಆಧ್ಯಾತ್ಮ ಚಿಂತಕ ವೇದ ಶ್ರೀ ಶ್ರೀಧರಭಟ್ ಕೆಂಜಗಾಪುರ, ಮಾರುತಿಪುರ ಗ್ರಾಪಂ ಅಧ್ಯಕ್ಷೆ ದೀಪಿಕಾ ಕೃಷ್ಣ, ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ರವಿ ಬಿದನೂರು, ಸಾಮಾಜಿಕ ಚಿಂತಕ ಮಂಜುನಾಥ ಹೆಗಡೆ ಕೇಶವಪುರ ಪಾಲ್ಗೊಳ್ಳುವರು.


ಪ್ರಸಂಗಗಳು:
ಜು.17ರಂದು ಬುಧವಾರ – ಭೀಷ್ಮ ಪ್ರತಿಜ್ಞೆ, ಜು.31ರಂದು ಬುಧವಾರ – ಭೀಷ್ಮ ವಿಜಯ, ಆ.13 ರಂದು ಗುರುವಾರ- ಪಾರ್ಥ ಸಾರಥ್ಯ, ಆ.29ರಂದು ಗುರುವಾರ- ಶ್ರೀ ಕೃಷ್ಣ ಸಂಧಾನ, ಸೆ.14 ರಂದು ಶನಿವಾರ- ಭೀಷ್ಮ ಪರ್ವ, ಸೆ.28ರಂದು ಶನಿವಾರ- ವೃಷಸೇನಾ, ಅ.13ರಂದು, ಭಾನುವಾರ- ಕರ್ಣ ಪರ್ವ, ಅ.28ರಂದು ಸೋಮವಾರ- ಗದಾಯುದ್ಧ, ನ.11ರಂದು ಮಂಗಳವಾರ- ದ್ರೌಪತಿ ಪ್ರತಾಪ ತಾಳಮದ್ದಲೆ ನಡೆಯಲಿದೆ.
ಮೇಳದಲ್ಲಿ ಭಾಗವತರಾಗಿ ರಮಾನಂದ ಓತನಾಡಿ, ಆನಂದ ಬಾಣಿಗ, ವಿಷ್ಣು ಜೋಯಿಸ್ ಬಾಣಿಗ, ಮೃದಂಗ ವಾದಕರಾಗಿ ಭಾಸ್ಕರ ನೀರೇರಿ ಶ್ರೀನಾಥ್ ಎಂಎಸ್,ದುಗ್ಗಪ್ಪ ಆತವಾಡಿ, ಚಂಡೆ ವಾದಕರಾಗಿ ರಾಘವೇಂದ್ರ ಎಂ ನಿರ್ವಹಿಸಲಿರುವರು.
ಮುಮ್ಮೇಳದಲ್ಲಿ ಲಕ್ಷ್ಮಣ ಪೂಜಾರಿ, ಮಂಜುನಾಥ ಪೂಜಾರಿ, ಕೆ.ಟಿ ವೀರಭದ್ರಪ್ಪಗೌಡರು, ವಿಶ್ವ ಸನ್ ಟೈಮ್, ಕಾಡಳ್ಳಿ ಮಂಜಪ್ಪ, ಕೃಷ್ಣಮೂರ್ತಿ ಕಡೆಮನೆ
ಹಾಗೂ ಅತಿಥಿ ಕಲಾವಿದರ ಸಂಗಮದೊಂದಿಗೆ ತಾಳಮದ್ದಲೆ ಮೇಳೈಸಲಿದೆ.
ಈ ಹಿಂದೆ 13ನೇ ಚಾತುರ್ಮಾಸ್ಯ ತಾಳಮದ್ದಲೆಯನ್ನು ರಾಮಾರ್ಪಣದಿಂದ ರಾಮಾಯಣದೆಡೆಗೆ ವಿಶೇಷ ಕಲ್ಪನೆಯೊಂದಿಗೆ ನಡೆಸಿದ್ದು ಜನಮೆಚ್ಚುಗೆಗೆ ಪಾತ್ರವಾಗಿತ್ತು. ಈ ಬಾರಿ 14ನೇ ವರ್ಷದ ಕಾರ್ಯಕ್ರಮವನ್ನು ಮಹಾಭಾರತ – ನವಕ ಎಂಬ ವಿಶಿಷ್ಠ ಪರಿಕಲ್ಪನೆಯಲ್ಲಿ ಆಯೋಜಿಸಲಾಗಿದ್ದು ಯಶಸ್ವಿಗೊಳಿಸುವಂತೆ ಶ್ರೀರಾಮಾರ್ಪಣ ಕಲಾವೇದಿಕೆಯ ಸಂಘಟಕರು ವಿನಂತಿಸಿದ್ದಾರೆ.
