
ವೈದ್ಯರಿಗಾಗಿ ಮರ ಹತ್ತಿದ ಗ್ರಾಪಂ ಸದಸ್ಯ: ನಗರ ಆಸ್ಪತ್ರೆ ಅವ್ಯವಸ್ಥೆ ಸರಿಪಡಿಸಲು ಕರುಣಾಕರ ಶೆಟ್ಟಿ ಆಗ್ರಹ : ಮತ್ತೊಂದೆಡೆ ಬಿಜೆಪಿಯಿಂದಲೂ ಪ್ರತಿಭಟನೆ
ಹೊಸನಗರ: ನಗರ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ, ಅವ್ಯವಸ್ಥೆ ನೀಗಿಸುವಂತೆ ಒತ್ತಾಯಿಸಿ ಗ್ರಾಪ ಸದಸ್ಯ ಕರುಣಾಕರ ಶೆಟ್ಟಿ ಮರ ಹತ್ತಿ ವಿನೂತನ ಪ್ರತಿಭಟಿಸಿದ ಘಟನೆ ಮಂಗಳವಾರ ನಡೆದಿದೆ.
ಬೆಳಿಗ್ಗೆ ನೇರವಾಗಿ ನಗರ ಸರ್ಕಾರಿ ಆಸ್ಪತ್ರೆಗೆ ಆಗಮಿಸಿದ ಕರುಣಾಕರಶೆಟ್ಟಿ ಮರ ಹತ್ತಿ ಪ್ರತಿಭಟನೆಗೆ ಮುಂದಾಗಿದ್ದು ಮಾತ್ರವಲ್ಲದೇ ಡಿಹೆಚ್ಒ ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದರು.


ಬಿಜೆಪಿಯಿಂದಲೂ ಪ್ರತಿಭಟನೆ:
ಇದೇ ವೇಳೆ ಆಸ್ಪತ್ರೆ ಅವ್ಯವಸ್ಥೆ ಖಂಡಿಸಿ ಬಿಜೆಪಿ ಕಾರ್ಯಕರ್ತರು ಕೂಡ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಸುದ್ದಿ ತಿಳಿಯುತ್ತಿದ್ದಂತೆ ಡಿಎಚ್ಒ ಡಾ.ನಟರಾಜ್, ಟಿಎಚ್ಒ ಡಾ.ಸುರೇಶ ನಾಯ್ಕ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾ ನಿರತ ಕರುಣಾಕರಶೆಟ್ಟಿಯವರನ್ನು ಮರದಿಂದ ಕೆಳಗಿಳಿಯುವಂತೆ ಮನವಿ ಮಾಡಿದರು.
ವೈದ್ಯರ ಕೊರತೆ ಸೇರಿದಂತೆ ಅನೇಕ ಸಮಸ್ಯೆಗಳು ನೀಗಬೇಕು ಮತ್ತು ಅವ್ಯವಸ್ಥೆ ಸರಿಪಡಿಸುವಂತೆ ಪಟ್ಟು ಹಿಡಿದರು.
ವೈದ್ಯರ ಕೊರತೆ ಆಗದಂತೆ, ಲ್ಯಾಬ್ ಸಿಬ್ಬಂದಿ ಆಸ್ಪತ್ರೆಯಲ್ಲಿ ಪೂರ್ಣಾವಧಿ ಕೆಲಸ ಮಾಡುವ ಸಂಬಂಧ ಕ್ರಮ ಕೈಗೊಳ್ಳುವ ಭರವಸೆಯನ್ನು ಡಿಎಚ್ಒ ನೀಡಿದ ಬಳಿಕ ಕರುಣಾಕರ ಶೆಟ್ಟಿ ಮರದಿಂದ ಕೆಳಗಿಳಿದರು. ಬಳಿಕ ಬಿಜೆಪಿ ಪ್ರಮುಖರಾದ ಕೆ.ವಿ.ಸುಬ್ರಹ್ಮಣ್ಯ, ನಿತಿನ್ ನಗರ ಇವರಿಂದ ಮನವಿ ಆಲಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ ನಂತರ ಅವರು ಕೂಡ ಧರಣಿ ನಿಲ್ಲಿಸಿದರು.
