
HULIKAL GHAT| ಬಾಳೆಬರೆಯಲ್ಲಿ ಗುಡ್ಡ ಕುಸಿದರೂ ಕೇಳೋರಿಲ್ಲ..
ಹೊಸನಗರ: ಬಾಳೆಬರೆ (Hulikal) ಘಾಟಿಯಲ್ಲಿ ಮಳೆಗೆ ಗುಡ್ಡ ಕುಸಿದು 10 ದಿನ ಕಳೆದರೂ ಯಾರು ಕೇಳೋರಿಲ್ಲ ಎಂಬಂತಾಗಿದೆ.
ಈಗಾಗಲೇ ಗುಡ್ಡ ಕುಸಿದು ಅರ್ಧ ರಸ್ತೆಯನ್ನು ಆಕ್ರಮಿಸಿಕೊಂಡಿದೆ. ಘಾಟ್ ರಸ್ತೆಯಲ್ಲಿ ವಾಹನ ಸಂಚಾರವೇ ಕಷ್ಟ. ಈ ನಡುವೆ ಗುಡ್ಡ ಕುಸಿದ ಜಾಗದಲ್ಲಿ ಎದುರುಗಡೆಯಿಂದ ವಾಹನ ಬಂದರೆ ಸೈಡ್ ನೀಡೋದು ಕೂಡ ಕಷ್ಟವಾಗುತ್ತಿದೆ. ಆದರೆ ಸಂಬಂಧಪಟ್ಟ ಅಧಿಕಾರಿಗಳು ನಮಗೆ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.


ಬಾಳೆಬರೆ ಘಾಟ್ ರಸ್ತೆ ರಾಜ್ಯ ಹೆದ್ದಾರಿ ( STATE highway ) ವ್ಯಾಪ್ತಿಯಲ್ಲಿ ಇದ್ದು ಹೆದ್ದಾರಿ ಅಧಿಕಾರಿಗಳು ಇನ್ನಾದರೂ ಗಮನಹರಿಸಿ ಗುಡ್ಡದ ಮಣ್ಣು ತೆರವುಗೊಳಿಸುವಂತೆ ಗ್ರಾಪಂ ಸದಸ್ಯ ಇಸ್ಮಾಯಿಲ್ ಮಾಸ್ತಿಕಟ್ಟೆ ಒತ್ತಾಯಿಸಿದ್ದಾರೆ.
