SPECIAL STORYಕ್ರೈಂತಾಲ್ಲೂಕುತೀರ್ಥಹಳ್ಳಿಹೊಸನಗರ

SAD STORY | ಇದು ಎರಡು ಬಡ ಕುಟುಂಬಗಳ ಕರುಣಾಜನಕ ಕಥೆ | ವಿಧಿಯ ಕ್ರೂರತ್ವಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಡ

ಹೊಸನಗರ: ವಿಧಿಯಾಟ ಬಲ್ಲವರಾರು.. ಎನ್ನುತ್ತಾರೆ. ಇಲ್ಲಿ ಮಾತ್ರ ವಿಧಿ ತನ್ನ ಕ್ರೂರತನದ ಅಟ್ಟಹಾಸ ಮೆರೆದಿದ್ದಾನೆ. ಕ್ರೂರತನಕ್ಕೆ ಎರಡು ಕಡು ಬಡ ಕುಟುಂಬಗಳು ಬೀದಿಗೆ ಬಂದಿವೆ. ಇಡೀ ಗ್ರಾಮವೇ ವಿಧಿಗೆ ಶಾಪ ಹಾಕುತ್ತಿದೆ.


ಹೌದು ಇದು ಮನಕಲಕುವ ಘಟನೆ.. ಯಾರ ಬದುಕಿನಲ್ಲು ಕೂಡ ನಡೆಯಬಾರದು ಎನ್ನುವಂತ ರೀತಿಯಲ್ಲಿ ದುರ್ಘಟನೆ ನಡೆದು ಹೋಗಿದೆ. ಖೈರಗುಂದ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಂಪದ ಕೈ ಈ ಘಟನೆಯಿಂದ ಕಂಪಿಸಿದೆ. ಇದಕ್ಕೆ ಕಾರಣವಾಗಿದ್ದು ಎರಡು ದಿನಗಳ ಹಿಂದೆ ಹುಲಿಕಲ್ ಹೆದ್ದಾರಿಯಲ್ಲಿ ನಡೆದ ಭೀಕರ ಅಪಘಾತ.
ಹುಲಿಕಲ್ ಅಪಘಾತದಲ್ಲಿ ಚಿಕ್ಕಪ್ಪ ಮತ್ತು ಮಗ ಸ್ಥಳದಲ್ಲೇ ಸಾವು ಕಂಡರೆ, ಚಿಕ್ಕಮ್ಮ ಎರಡು ಕಾಲುಗಳನ್ನು ಕಳೆದುಕೊಂಡ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ಮಾಡಿ ಚಿಕಿತ್ಸೆ ಫಲಕಾರಿಯಾಗದೇ ಅಸು ನೀಗಿದ್ದಾರೆ. ಅಪಘಾತ ಏನಾಯ್ತು.. ಹೇಗಾಯ್ತು ಎನ್ನುವುದಕ್ಕಿಂದ ಅಫಘಾತದಿಂದ ಏನಾಯ್ತು ಎನ್ನುವುದೇ ಇಲ್ಲಿ ಬಹಳ ಮುಖ್ಯ.


ಸರ್ವಸ್ವ ಕಳೆದುಕೊಂಡು ಏಕಾಂಗಿಯಾದ ತಾಯಿ:
ಈಕೆ ಇಂದಿರಾ ಬಡಕುಟುಂಬವಾದರೂ ಗಂಡ ಮನೆ ಮಕ್ಕಳ ನಡುವೆ ನೆಮ್ಮದಿಯ ಜೀವನ. ಖಾತೆ ಹೊಂದಿರದ ಮುಳುಗಡೆ ಜಮೀನಿನಲ್ಲಿ ಕೃಷಿ ಮಾಡಿ, ಜೊತೆಗೆ ಕೂಲಿಗೂ ಹೋಗಿ ಜೀವನವಂತೂ ನಡೆಯುತ್ತಿತ್ತು. ಆದರೆ ಮೂರು ವರ್ಷದ ಹಿಂದೆ ವಿಧಿ ಇವರ ಸಂಸಾರದಲ್ಲಿ ಅಟಕಾಯಿಸಿಕೊಂಡಿದ್ದಾರೆ. ಪತಿ ಶಂಕರಪ್ಪ ಕ್ಯಾನ್ಸರ್ ರೋಗಕ್ಕೆ ಬಲಿಯಾಗಿ ಮೃತ ಪಟ್ಟಿದ್ದಾನೆ. ಇದರಿಂದ ಪಾತಾಳಕ್ಕೆ ಕುಸಿದ ಇಂದಿರಾ ಕೊನೆಗೆ ಮಕ್ಕಳಿಗಾಗಿ ಎಲ್ಲವನ್ನು ಮರೆತು ಬದುಕು ಮುಂದುವರೆಸಿದಳು. ಕೂಲಿನಾಲಿ ಮಾಡಿಕೊಂಡು ಮಕ್ಕಳ ಭವಿಷ್ಯದ ಬಗ್ಗೆ ಕನಸು ಕಟ್ಟಿಕೊಳ್ಳುವ ಜೊತೆಗೆ ಬದುಕನ್ನು ಕಟ್ಟಲು ಆರಂಭಿಸಿದಳು.


ಜೋಕಾಲಿ ಆಯ್ತು ನೇಣು ಕುಣಿಕೆ:
ಅಪ್ಪನನ್ನು ಕಳೆದುಕೊಂಡರು ಅಮ್ಮನ ಆರೈಕೆಯಲ್ಲಿ ಬೆಳೆಯುತ್ತಿದ್ದ ಮನೆ ಮಗಳು. ಆದರೆ ವರ್ಷದ ಹಿಂದೆ ಜೋಕಾಲಿ ಆಡುತ್ತಿದ್ದ ವೇಳೆ ಆಯತಪ್ಪಿ ಜೋಕಾಲಿ ಹಗ್ಗ ಕುತ್ತಿಗೆ ಸಿಕ್ಕಿ ಅಲ್ಲೇ ಪ್ರಾಣ ಬಿಟ್ಟಿದ್ದಾಳೆ. ಅದೇನು ಇಷ್ಟು ಹೊತ್ತಾಯ್ತು ಮಗಳ ಸದ್ದೇ ಇಲ್ಲ ಎಂದು ಅಮ್ಮ ಹೊರಬಂದು ನೋಡುವ ಜೋಕಾಲಿಯಲ್ಲಿ ಮಗಳ ಶವ ನೇತಾಡುತ್ತಿತ್ತು. ಪತಿಯ ಅಗಲಿಕೆ ಮರೆಯಬೇಕು ಎನ್ನುವಾಗಲೇ ವಿಧಿ ತನ್ನ ಕ್ರೂರತೆಯನ್ನು ಮತ್ತೆ ಮೆರೆದಿದ್ದ.


ಇನ್ನು ಮನೆ ಮಗ:
ಪತಿ ಆಯ್ತು.. ಮಗಳು ಆಯ್ತು.. ಮಗನೊಬ್ಬ ಇದ್ದಾನಲ್ಲ. ಅವನ ಭವಿಷ್ಯದಲ್ಲೇ ತನ್ನ ಬದುಕನ್ನು ನೋಡುವ ಪ್ರಯತ್ನ ಮಾಡಿದ ಇಂದಿರಾಳಿಗೆ ವರ್ಷ ಕಳೆಯುವ ಹೊತ್ತಿನಲ್ಲಿ ಮತ್ತೊಂದು ಆಘಾತ ಬರಸಿಡಿಲಿನಂತೆ ಎರಗಿದೆ. ಚಿಕ್ಕಪ್ಪನೊಂದಿಗೆ ಹುಲಿಕಲ್ ಲಕ್ಷ್ಮೀ ನರಸಿಂಹ ಸ್ವಾಮಿ ದೇಗುಲದ ದೀಪೋತ್ಸವಕ್ಕೆ ಹೋಗಿ ಬರುವಾಗ ರಸ್ತೆ ಅಘಘಾತದಲ್ಲಿ ಚಿಕ್ಕಪ್ಪನೊಂದಿಗೆ ಮಗನೂ ಧಾರುಣವಾಗಿ ಮೃತಪಟ್ಟಿದ್ದಾನೆ. ಇದನ್ನು ಕಂಡ ಇಂದಿರಾಗೆ ಕುಸಿಯಲು ಏನೂ ಉಳಿದಿಲ್ಲ. ಮದುವೆಯಾಗಿ 13 ವರ್ಷ ಕಳೆದಿರುವ ಇಂದಿರಾ ಕಳೆದ ಮೂರು ವರ್ಷದಲ್ಲಿ ಆಸರೆ ಮತ್ತು ಭವಿಷ್ಯವನ್ನು ಕಳೆದುಕೊಂಡು ಏಕಾಂಗಿಯಾಗಿದ್ದಾಳೆ.


ಇಲ್ಲಿ ಮಕ್ಕಳು ಅನಾಥ:
ಆರತಿಗೊಬ್ಬಳು ಕೀರ್ತಿಗೊಬ್ಬ ಎಂಬ ಮುದ್ದುಮುದ್ದಾದ ಮಕ್ಕಳನ್ನು ಹೊಂದಿದ್ದ ಇಂದಿರಾ ಪರಿಸ್ಥಿತಿ ಹೀಗಾದರೇ.. ಮತ್ತೊಂದು ಕುಟುಂಬದಲ್ಲಿ ಇಬ್ಬರು ಮಕ್ಕಳು ಅನಾಥರಾಗಿದ್ದಾರೆ. ಹುಲಿಕಲ್ ಅಪಘಾತದಲ್ಲಿ ತಂದೆ ರವಿ ಸ್ಥಳದಲ್ಲೇ ಸಾವು ಕಂಡಿದ್ದಾರೆ. ಇನ್ನು ಅಮ್ಮ ಶಾಲಿನಿ ಎರಡು ಕಾಲನ್ನು ಕಳೆದುಕೊಂಡು ಜೀವನ್ಮರಣದ ಹೋರಾಟದಲ್ಲಿದ್ದಳು. ಅಮ್ಮನಾದರೂ ನಮ್ಮ ಜೊತೆ ಇರುತ್ತಾಳೆ ಎಂಬ ನಿರೀಕ್ಷೆಯಲ್ಲಿದ್ದ ಮುಗ್ಧ ಮಕ್ಕಳ ಮೊಗದಲ್ಲಿ ಸ್ಮಶಾನ ಮೌನ ಆವರಿಸಿದೆ. ಚಿಕಿತ್ಸೆ ಫಲಕಾರಿಯಾಗದೇ ಅಮ್ಮ ಶಾಲಿನಿ ಕೂಡ ಸಾವನ್ನಪ್ಪಿದ್ದಾಳೆ.


7 ನೇ ತರಗತಿಯ ಅಶ್ವಲ್, 4 ನೇ ತರಗತಿಯ ಅನೂಪ್ ಬದುಕು ದುರಂತಮಯವಾಗಿದೆ. ಹೇಳಿ ಕೇಳಿ ಇವರದ್ದು ಕಡು ಬಡ ಕುಟುಂಬ. ಗುಡಿಸಲು ತರದ ಮನೆಯಲ್ಲಿ ವಾಸ. ಈಗ ಅಪ್ಪನೂ ಇಲ್ಲ.. ಅಮ್ಮನೂ ಇಲ್ಲ.. ಅನಾಥ ಮಕ್ಕಳಾದೆವು ಎಂದು ರೋಧಿಸುವಂತಾಗಿದೆ.


ಹುಲಿಕಲ್ ಅಪಘಾತ ಈ ಎರಡು ಕಡು ಬಡಕುಟುಂಬಗಳನ್ನು ಅಕ್ಷರಶಃ ಬೀದಿಗೆ ತಂದಿವೆ. ಒಂದು ಕಡೆ ಬದುಕೇ ಬೇಡ ಎನಿಸಿದರೂ.. ಬದುಕುವುದಾರೆ ಹೇಗೆ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಅದಕ್ಕೆ ಕಾರಣ ಈ ಎರಡು ಕುಟುಂಬಗಳ ಆರ್ಥಿಕ ದುಸ್ಥಿತಿ.

ಅಪಘಾತ ಇನ್ಸೂರೆನ್ಸ್ ಮೇಲೆ ನಿಂತಿದೆ ಇವರ ಬದುಕು:
ಯಾವುದೇ ಆದಾಯ ವಿಲ್ಲದೇ ಕೂಲಿ ಮಾಡಿ ಬದುಕು ಸಾಗಿಸುತ್ತಿದ್ದ ಈ ಎರಡು ಕುಟುಂಬಗಳಿಗೆ ಮುಂದಿನ ದಾರಿ ಪ್ರಶ್ನೆಯಾಗಿದೆ. ಒಂದೆಡೆ ಸರ್ವಸ್ವ ಕಳೆದುಕೊಂಡ ಏಕಾಂಗಿ ತಾಯಿ ಇಂದಿರಾ, ಮತ್ತೊಂದೆಡೆ ಅಪ್ಪ ಅಮ್ಮನನ್ನು ಕಳೆದುಕೊಂಡ ಮಕ್ಕಳ ಬದುಕಿಗೂ ಅಪಘಾತದ ಇನ್ಸೂರೆನ್ಸ್ ಆಧಾರ ಎನ್ನುವಂತಾಗಿದೆ. ಈಗಾಗಲೇ ಅಮ್ಮನ ಚಿಕಿತ್ಸೆಗಾಗಿ ಸಾಲ ಮಾಡಿದ್ದಾರೆ ಅದನ್ನು ತೀರಿಸಬೇಕಿದೆ. ಈ ವಿಚಾರದಲ್ಲಿ ಸರ್ಕಾರ ಸ್ಪಂದಿಸಬೇಕಿದೆ.

ಒಟ್ಟಾರೆ ವಿಧಿಯ ಕ್ರೂರತೆಗೆ ಸಾಕ್ಷಿಯಾದ ಕಂಪದ ಕೈ ಗ್ರಾಮ ಕಂಗೆಟ್ಟಿದೆ. ಈ ಎರಡು ಕುಟುಂಬಗಳ ನೆರವಿಗೆ ಇಡೀ ಗ್ರಾಮವೇ ಬೇಡುತ್ತಿದೆ. ಅಲ್ಲದೆ ಮಾಸ್ತಿಕಟ್ಟೆಯ ಯುವ ಮಿತ್ರರು ಸಂಘಟನೆ ಕಟ್ಟಿಕೊಂಡು ಆರ್ಥಿಕ ಕ್ರೊಡೀಕರಣಕ್ಕೆ ಮುಂದಾಗಿದೆ. ಒಟ್ಟಾರೆ ನೃತದೃಷ್ಟ ತಾಯಿ.. ಅನಾಥ ಪ್ರಜ್ಞೆಯಲ್ಲಿರುವ ಮಕ್ಕಳ ಬದುಕಿಗಾಗಿ ಸಾಂತ್ವನ, ಆಸರೆ, ಆಶ್ರಯ ಸಿಗಲಿ ಎಂಬುದು ಜನರ ಆಶಯ.

ಸಹಾಯ ಮಾಡಲು ಇಚ್ಚಿಸುವವರಿಗಾಗಿ..

ಬ್ಯಾಂಕ್ ಅಕೌಂಟ್ ನಂ | 64114991440, ಇಂದಿರಾ w/o ಶಂಕ್ರಪ್ಪ, IFSC: SBIN0040328, ಸಂಪರ್ಕ ಮೊ.ನಂ 9880225768 ( ನಾಗೇಂದ್ರ ಇಂದಿರಾ ಸಹೋದರ)

ಸಮಾಜದಲ್ಲಿಯ ಸುದ್ದಿಗಳನ್ನು ಆರಿಸಿ ಮತ್ತೆ ಸಮಾಜಕ್ಕೆ ನೀಡುವ ಒಂದು ಸಣ್ಣ ಪ್ರಯತ್ನ.. ಆ ಕಾರ್ಯದಲ್ಲಿ ಖಚಿತತೆ, ವಿಶ್ವಾಸಾರ್ಹತೆ, ಸಮಸ್ಯೆಯ ಬಿಂಬ, ಬಿಂಬಿತ ಸಮಸ್ಯೆಗೆ ಪರಿಹಾರದ ಯತ್ನ.. ಆ ಯತ್ನದಲ್ಲಿ ದಕ್ಕಿದ ಒಂದಷ್ಟು ಯಶಸ್ಸು.. ಇದರಲ್ಲಿ‌ ನಿರಂತರತೆ ಕಾಯ್ದುಕೊಳ್ಳುವ ಆಶಯ.. ಅಷ್ಟೆ..

What's your reaction?

Related Posts

ಕೊಲ್ಲೂರು ಹೆದ್ದಾರಿ ಎಬಗೋಡು ಪಕ್ಕದಲ್ಲೇ ನಿಧಿ ಶೋಧನೆ : ಶಿವಲಿಂಗದ ಪಕ್ಕದಲ್ಲಿ 4 ಅಡಿಯಷ್ಟು ಗುಂಡಿ ತೋಡಿದ ನಿಧಿ ಚೋರರು

ಕೊಲ್ಲೂರು ಹೆದ್ದಾರಿ ಎಬಗೋಡು ಪಕ್ಕದಲ್ಲೇ ನಿಧಿ ಶೋಧನೆ : ಶಿವಲಿಂಗದ ಪಕ್ಕದಲ್ಲಿ 4 ಅಡಿಯಷ್ಟು…

1 of 42

Leave A Reply

Your email address will not be published. Required fields are marked *