
ಕೇವಲ 50 ರೂ.,ಹಣ ನೀಡದಿದ್ದಕ್ಕೆ ಅಜ್ಜಿಯನ್ನು ಕೊಂ*ದ ಮೊಮ್ಮಗ
ಕನಕಗಿರಿ: ಹಣ ನೀಡದಿದ್ದಕ್ಕೆ ಅಜ್ಜಿಯನ್ನು ಮೊಮ್ಮಗ ಕೊ*ಲೆ ಮಾಡಿದ ಘಟನೆ ಪಟ್ಟಣದ13 ನೇ ವಾರ್ಡ್ ನಲ್ಲಿ ಶುಕ್ರವಾರ ನಡೆದಿದೆ.
ಕನಕಮ್ಮ ನಾಗಪ್ಪ ಬೊಕ್ಕಸದ್(82) ಕೊಲೆಯಾದ ವೃದ್ಧೆಯಾಗಿದ್ದು, ಮೊಮ್ಮಗ
ಕೊಲೆ ಆರೋಪಿ ಮೊಮ್ಮಗ ಚೇತನಕುಮಾರ (34) ನನ್ನು ಪೊಲೀಸರು ಬಂಧಿಸಿದ್ದಾರೆ. ಚೇತನ ಕುಮಾರ ಕೆಲಸವಿಲ್ಲದೇ ನಿತ್ಯ ಅಲೆದಾಡುತ್ತಿದ್ದ, ನಂತರ ಹಣ ನೀಡು ಎಂದು ತಾಯಿ, ತಂದೆಗೆ ನಿತ್ಯ ಪೀಡಿಸುತ್ತಿದ್ದ ಶುಕ್ರವಾರ ಎಂದಿನಂತೆ ಮನೆಗೆ ಆಗಮಿಸಿ ಅಜ್ಜಿಯನ್ನು ಹಣ ಕೇಳಿದ್ದಾನೆ. ಅಜ್ಜಿ ನನ್ನಲ್ಲಿ ಹಣವಿಲ್ಲ ನಿನ್ನ ತಂದೆಗೆ ಕೇಳು ಎಂದು ಹೇಳಿ ಹಣ ನೀಡಲು ನಿರಾಕರಿಸಿದ ಕಾರಣ ರುಬ್ಬುವ ಗುಂಡು ತೆಗೆದು ವೃದ್ಧೆಯ ತಲೆಗೆ ಬಲವಾಗಿ ಹೊಡೆದಿದ್ದಾನೆ. ವೃದ್ಧೆಯನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯ ಮೃತ ಪಟ್ಟಿದ್ದು, ಕೊಲೆ ಆರೋಪಿ ತಂದೆ ವೆಂಕಟೇಶ ದೂರು ನೀಡಿದ್ದು, ಕನಕಗಿರಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
