
ತುರ್ತು ಗ್ರಾಮಸಭೆಗೆ ಬಾರದ ತಹಶೀಲ್ದಾರ್ | ಕರಿಮನೆ ಗ್ರಾಮಸ್ಥರ ಆಕ್ರೋಶ | ಅಧಿಕಾರಿಗಳ ಕೂಡಿ ಹಾಕಿ ಬಾಗಿಲು ಜಡಿದ ಗ್ರಾಮಸ್ಥರು
ಹೊಸನಗರ: 54 ಸಿ ಸಮಸ್ಯೆ, 106 ಸ.ನಂ ನಲ್ಲಿ ಇಂದಿಗೂ ಜಾಗ ಮಂಜೂರಾತಿ ಆಗದ ಸಮಸ್ಯೆ ಇನ್ನಿತರ ಸಮಸ್ಯೆಗಳ ಇತ್ಯರ್ಥಕ್ಕಾಗಿ ತುರ್ತು ಗ್ರಾಮಸಭೆ ಬಗ್ಗೆ ಮಾಹಿತಿ ನೀಡಿದ್ದರು ಕೂಡ ತಹಶೀಲ್ದಾರ್ ಸಭೆಗೆ ಬರೋದಿಲ್ಲ ಎಂದು ಹೇಳಿದ್ದನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿ ಅಧಿಕಾರಿಗಳನ್ನು ಕೂಡಿ ಹಾಕಿ ಬಾಗಿಲು ಜಡಿದ ಘಟನೆ ಕರಿಮನೆ ಗ್ರಾಪಂ ನಲ್ಲಿ ಇಂದು ನಡೆದಿದೆ.
ಕರಿ ಮನೆ ಗ್ರಾಪಂ ವ್ಯಾಪ್ತಿಯಲ್ಲಿ ಸಾಕಷ್ಟು ವರ್ಷಗಳಿಂದ ಜ್ವಲಂತ ಸಮಸ್ಯೆಗಳಿದ್ದರೂ ಕೂಡ ಅಧಿಕಾರಿಗಳು ನಿರ್ಲಕ್ಷ ತೋರುತ್ತಿದ್ದಾರೆ. ತಹಶೀಲ್ದಾರ್ ಗೆ ಬನ್ನಿ ಮೇಡಂ ಅಂದರೆ, ನನಗೆ ಎಸಿ ಚಾರ್ಜ್ ಇದೆ ಬರಲು ಆಗಲ್ಲ ಅಂತಾರೆ. ಅಲ್ಲೇ ಕುಳಿತುಕೊಂಡು ಆ ಸಮಸ್ಯೆ ಬಗೆ ಹರಿಸಲು ಬರಲ್ಲ ಅಂತಾರೆ. ಹೀಗಿರುವಾಗ ಕೆಳಮಟ್ಟದ ಸಿಬ್ಬಂದಿಗಳನ್ನು ಕೂರಿಸಿಕೊಂಡು ಸಭೆಯಲ್ಲಿ ಭಜನೆ ಮಾಡೋದಾ? ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.


ಹೊಸನಗರ ತಹಶೀಲ್ದಾರ್ ಸಭೆಗೆ ಬರಬೇಕು ಅಲ್ಲಿಯವರೆಗೆ ಬಾಗಿಲು ತೆರೆಯಲ್ಲ ಎಂದು ಬಾಗಿಲು ಜಡಿದು ಪ್ರತಿಭಟಿಸಿದರು.
