
ಹೊಸನಗರ| ಸಾಗರಕ್ಕೆ ವರ್ಗಾವಣೆಗೊಂಡ ತಹಶೀಲ್ದಾರ್ ರಶ್ಮೀಹಾಲೇಶ್ ರಿಗೆ ಕಸಾಪ ಗೌರವ
ಹೊಸನಗರ: ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸಾಗರಕ್ಕೆ ವರ್ಗಾವಣೆಗೊಂಡ ತಹಶೀಲ್ದಾರರಾದ ಶ್ರೀಮತಿ ರಶ್ಮೀ ಹಾಲೇಶ್ ರಿಗೆ ಅವರ ಸೇವೆ ಸ್ಮರಿಸಿ ಗೌರವ ಸಮರ್ಪಿಸಲಾಯಿತು.
ಕಸಾಪ ಅಧ್ಯಕ್ಷರಾದ ಗಣೇಶ ಮೂರ್ತಿ ನಾಗರಕೊಡಿಗೆ ನೇತೃತ್ವದಲ್ಲಿ ಪ್ರಮುಖರು ಮಂಗಳವಾರ ತಾಲೂಕು ಕಚೇರಿಗೆ ತೆರಳಿ ಸನ್ಮಾನಿಸಿ ಗೌರವಿಸಿದರು.
ಈ ವೇಳೆ ಗಣೇಶಮೂರ್ತಿಯವರು ರಶ್ಮೀ ಹಾಲೇಶ್ ರ ಉತ್ತಮ ಸೇವೆ ಕಸಾಪ ಕಾರ್ಯಕ್ರಮಗಳಿಗೆ ಸಹಕರಿಸುವ ಮೂಲಕ ಕನ್ನಡದ ಕಾರ್ಯಕ್ರಮಕ್ಕೆ ಬೆನ್ನೆಲುಬಾಗಿದ್ದರು. ಇದೀಗ ಸಾಗರಕ್ಕೆ ವರ್ಗಾವಣೆಗೊಂಡಿದ್ದು ಅಲ್ಲಿಯೂ ಉತ್ತಮ ಸೇವೆ ಸಲ್ಲಿಸಲಿ ಎಂದು ಹಾರೈಸಿದರು.
ಕೆಸಿನಮನೆ ನಾ. ರತ್ನಾಕರ, ಕೆ ಜಿ ನಾಗೇಶ್ ಶ್ರೀಮತಿ ವೀಣಾ ನಾಗರಕೊಡಿಗೆ ಇತರರು ಭಾಗವಹಿಸಿದ್ದರು.
