
ಅಂದು ರಾಜಕೀಯ ವೈರಿಗಳು.. ಇಂದು ಕುಚುಕು ಗೆಳೆಯರು.. ಜೋಡೆತ್ತುಗಳ ಫೋಟೋ ವೈರಲ್.!
ಶಿವಮೊಗ್ಗ: ಹೌದು ಅಂದು ರಾಜಕೀಯ ವೈರಿಗಳು.. ಅದೆಷ್ಟು ಎಂದರೆ ಈ ಜನುಮದಲ್ಲಿ ಒಂದಾಗುವುದಿಲ್ಲ ಎಂಬಷ್ಟರ ಮಟ್ಟಿಗೆ.. ಆದರೆ ಗೆಳೆಯರು.. ಅಲ್ಲಾ ಕುಚುಕು ಗೆಳೆಯರು.. ಯಾವ ಪರಿ ಎಂದರೆ ಏಳೇಳು ಜನುಮದ ಅನುಬಂಧ ಎನ್ನುವಷ್ಟು..


ಎರಡು ಲೈನ್ ಸುದ್ದಿ ನೋಡಿ ಯಾರಿವರು ಎಂದು ಅರ್ಥವಾಗದೇ ಇರದು. ಬೇರೆ ಕಡೆಗಳಲ್ಲಿ ಯಾವ ಕ್ಷೇತ್ರ, ಯಾರಿಗೆ ಟಿಕೆಟು.. ಯಾರಾಗ್ತಾರೆ ಬಂಡಾಯ.. ಇವುಗಳ ಬಗ್ಗೆ ಚರ್ಚೆ ಕುತೂಹಲ ಮಾಮೂಲಿ ಆದರೆ.. ತೀರ್ಥಹಳ್ಳಿಯ ಮಟ್ಟಿಗೆ ಈ ಜೋಡೆತ್ತುಗಳದ್ದೆ ಸುದ್ದಿ..
ಹೌದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮತ್ತು ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡರು ಈಗ ಕುಚುಕು ಗೆಳೆಯರು.. ಕ್ಷೇತ್ರದಲ್ಲಿ ಕೈಕೈಹಿಡಿದುಕೊಂಡೇ ಬಿರುಸಿನ ಪ್ರಚಾರ ನಡೆಸಿದ್ದಾರೆ.. ಎಲ್ಲಿ ಹೋದರೂ ಅಕ್ಕಪಕ್ಕವೇ ಉಪಸ್ಥಿತಿ, ನಗು, ಹರಟೆ, ಕೊನೆಗೆ ಪೂಜೆ ಧಿರಿಸಿನಲ್ಲಿ ಹಣ್ಣುಕಾಯಿ ಹಿಡಿದು ಒಟ್ಟಿಗೆ ಪೂಜೆಯ ಸಂಕಲ್ಪ.. ಒಟ್ಟಾರೆ ಈ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.
ಕೊನೆಗೂ ಕಾಂಗ್ರೆಸ್ ಪಕ್ಷದ ಟಿಕೆಟ್ ಗಿಟ್ಟಿಸುವಲ್ಲಿ ಯಶಸ್ವಿಯಾದ ಕಿಮ್ಮನೆ ರತ್ನಾಕರನ್ನು ಗೆಲ್ಲಿಸಿಕೊಂಡು ಬರಲು ಪಣ ತೊಟ್ಟಿರುವುದೇ ಆರ್.ಎಂ.ಮಂಜುನಾಥಗೌಡ. ಇದು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಇನ್ನಿಲ್ಲದ ವಿಶ್ವಾಸಕ್ಕೆ ಕಾರಣವಾಗಿದೆ. ಅಲ್ಲದೇ ಕಿಮ್ಮನೆಗಿಂತ ಒಂದು ಪಟ್ಟು ಜಾಸ್ತಿ RMM ಗೆ ಬಹುಪರಾಕ್ ಹೇಳುತ್ತಿರುವುದು ಕಂಡು ಬಂದಿದೆ.
ಆದರೆ ಈ ಬಾರಿಯಂತೂ ಈ ಜೋಡೆತ್ತುಗಳು ಒಂದಾಗಲು ಸಾಧ್ಯವೇ ಇಲ್ಲ ಭಾವಿಸಿದ್ದ ಮತ್ತು ಕೊನೆತನಕವೂ ನಿರೀಕ್ಷೆಯಲ್ಲಿದ್ದ ಬಿಜೆಪಿಗೆ.. ಜೋಡೆತ್ತುಗಳು ವೈರತ್ವ ಮರೆತು ಒಂದಾಗಿರುವುದು ನೋಡಿ ಆತಂಕ ತರಿಸಿರುವುದು ಸುಳ್ಳಲ್ಲ.
ಈಹಿಂದೆ ವೈರಿಗಳಾಗಿ ಪರಸ್ಪರ ಟೀಕೆ ಮಾಡಿಕೊಂಡಿದ್ದ ಈಹಿಂದಿನ ಪೋಸ್ಟ್ ಗಳನ್ನು ಹುಡುಕಿ ಹುಡುಕಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದು ಮಾತ್ರವಲ್ಲದೇ.. ವ್ಯಂಗ್ಯಭರಿತ ಟೀಕೆಗಳನ್ನ ಮಾಡುತ್ತಾ ಮತದಾರರ ಗಮನ ಸೆಳೆಯುತ್ತಿದ್ದಾರೆ
