
ಕೋಣಂದೂರು(ತೀರ್ಥಹಳ್ಳಿ): ಬಾಲಭವನ ಸೊಸೈಟಿ ಬೆಂಗಳೂರು,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನೆ ತೀರ್ಥಹಳ್ಳಿ, ಸಾರ್ವಜನಿಕ ಶಿಕ್ಷಣ ಇಲಾಖೆ ತೀರ್ಥಹಳ್ಳಿ ಇವರ ಸಹಯೋಗದಲ್ಲಿ ಕೋಣಂದೂರು ಮಕ್ಕಿಬೈಕು ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ, ಅಗ್ರಹಾರ ಹೋಬಳಿ ಮಟ್ಟದ ಶಾಲಾ ವಿದ್ಯಾರ್ಥಿಗಳಿಗೆ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ಗೀತ ಗಾಯನ ಸ್ಪರ್ಧೆ ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿದ ಕೋಣಂದೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಾಂತಮ್ಮ , ಗ್ರಾಮೀಣ ಭಾಗದ ಮಕ್ಕಳಲ್ಲಿರುವ ಪ್ರತಿಭೆ ಅನಾವರಣ ಮಾಡಲು ಇಂತಹ ಅವಕಾಶಗಳನ್ನು ಎಲ್ಲ ಮಕ್ಕಳು ಸದುಪಯೋಗ ಪಡಿಸಿಕೊಳ್ಳಲು ತಿಳಿಸಿದರು


ಕಾರ್ಯಕ್ರಮದಲ್ಲಿ ಕೋಣಂದೂರು(Konanduru) ಗ್ರಾಪಂ ಉಪಾಧ್ಯಕ್ಷೆ ಅನ್ನಪೂರ್ಣ ವಾಸುದೇವ್, ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ. ವಿಶಾಲಾಕ್ಷಿ,
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಯ ಮೇಲ್ವಿಚಾರಕಾರದ ಶ್ರೀಮತಿ. ಚಂದ್ರಿಕಾ ರವರು ಕಾರ್ಯಕ್ರಮ ದ ಉದ್ದೇಶದ ಕುರಿತು ಪ್ರಾಸ್ತವಿಕವಾಗಿ ತಿಳಿಸಿದರು.
ಕೋಣಂದೂರು ವಲಯ ಮೇಲ್ವಿಚಾರಕಾರದ ಶ್ರೀಮತಿ ಸುಮಲತಾ, ಮೇಲ್ವಿಚಾರಕಾರದ ಶ್ರೀಮತಿ ಸುಪ್ರಿತಾ, ಶ್ರೀಮತಿ ಶಮೀಮಾಭಾನು ನದಾಫ್ ಉಪಸ್ಥಿತರಿದ್ದರು.
ಕರ್ನಾಟಕ ಪಬ್ಲಿಕ್ ಶಾಲೆಯ ಉಪಪ್ರಾಂಶುಪಾಲರಾದ ಶ್ರೀಮತಿ. ಸೌಮ್ಯ, CRP ಶ್ರೀಮತಿ ಮಮತ, BRC ನಾಗರಾಜ್, ಶ್ರೀ ಮಂಜುನಾಥ್, ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಆಪ್ತಸಮಾಲೋಚಕರಾದ ಪ್ರಮೋದ್, ತೀರ್ಪುಗಾರರಾದ ಶ್ರೀಮತಿ. ಅಂಜಲಿ, ಶ್ರೀಮತಿ. ಮಂಜುಳಾ,ಕೋಣಂದೂರು ವಲಯದ ಅಂಗನವಾಡಿ ಕಾರ್ಯಕರ್ತರು, ಸಹಾಯಕಿಯರು ಉಪಸ್ಥಿತರಿದ್ದರು.
50 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಸ್ವರ್ಧೆಯಲ್ಲಿ ಭಾಗವಹಿಸಿ ಬಹುಮಾನ ಗಳಿಸಿದರು ವಿವಿಧ ಶಾಲೆಯ ಶಿಕ್ಷಕರು, ಪೋಷಕರು ಹಾಜರಿದ್ದರು.
ಶ್ರೀಮತಿ ಸುಪ್ರಿತಾ ಮೇಲ್ವಿಚಾರಕರು ಸ್ವಾಗತಿಸಿ, ಶ್ರೀಮತಿ. ಚಂದ್ರಿಕಾ ನಿರೂಪಿಸಿ, ಶ್ರೀಮತಿ. ಸುಮಲತಾ ವಂದಿಸಿದರು.
ಈ ಸಮಯದಲ್ಲಿ ಮಕ್ಕಳಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಶೋಷಣೆ ತಡೆ ಅಂಗವಾಗಿ ಜಾಗ್ರತಿ ಜಾಥಾ ಸಹ ನೆಡೆಸಲಾಯಿತು..
