
ಬೆಂಗಳೂರು: ನೈಜ ಪತ್ರಕರ್ತರನ್ನು ಒಳಗೊಂಡ ಮಾಧ್ಯಮ ಮಾನ್ಯತಾ ಸಮಿತಿ ರಚನೆಯಾಗಿರುವುದು ಆ ಸಮಿತಿ ಘನತೆ ಹೆಚ್ಚಿಸಿದೆ ಎಂದು ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ತಿಳಿಸಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ಇಂದು ಮಾಧ್ಯಮ ಮಾನ್ಯತಾ ಸಮಿತಿ (ಮೀಡಿಯಾ ಅಕ್ರಿಡಿಟೇಶನ್ ಸಮಿತಿ)ಯ ನೂತನ ಸದಸ್ಯರುಗಳಿಗೆ ಏರ್ಪಡಿಸಿದ್ದ, ಅಭಿನಂದನಾ ಸಭೆಯಲ್ಲಿ ಮಾತನಾಡಿ, ಡಿವಿಜಿ ಕಟ್ಟಿದ ಸಂಘ ಸಮಸ್ತ ಪತ್ರಕರ್ತರ ಪ್ರಾತಿನಿಧಿಕ ಮಾತೃ ಸಂಸ್ಥೆಯಾಗಿದೆ. ಎಂಟು ಸಾವಿರಕ್ಕೂ ಹೆಚ್ಚು ಸದಸ್ಯರಿರುವ ಬೃಹತ್ ಸಂಘಟನೆಯಾಗಿದೆ ಎಂದರು.
ಸಂಘದ ಸದಸ್ಯತ್ವ ಪಡೆಯಲು ಎಲ್ಲಾ ಕಡೆಯಲ್ಲೂ ಪೈಪೋಟಿ ಇದೆ. ಅಷ್ಟರ ಮಟ್ಟಿಗೆ ಕೆಯುಡಬ್ಲ್ಯೂಜೆ ಸದಸ್ಯತ್ವಕ್ಕೆ ವಿಶ್ವಾಸರ್ಹತೆಯ ಮಹತ್ವ ಇದೆ ಎಂದರು.


ಮಾಧ್ಯಮ ಸಮಿತಿಗೆ ಈ ಬಾರಿ ಸರ್ಕಾರ ಮೌಲ್ಯವುಳ್ಳ ಪತ್ರಕರ್ತರರನ್ನು ಗುರುತಿಸಿದೆ. ಮಾಧ್ಯಮ ಅಕಾಡೆಮಿ ಸೇರಿದಂತೆ ಎಲ್ಲಾ ವಿಭಾಗಗಳಲ್ಲೂ ಇದನ್ನು ಕಾಣಬಹುದು ಈ ಸಮಿತಿಗಳ ರಚನೆ ಹಿಂದೆ ಸಿಎಂ ಮಾಧ್ಯಮ ಸಂಯೋಜಕರಾಗಿದ್ದ ಗುರುಲಿಂಗ ಸ್ವಾಮಿ ಹೊಳಿಮಠ ಅವರ ಪರಿಶ್ರಮವಿದೆ ಎಂದು ಶ್ಲಾಘಿಸಿದರು.
ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ ಮಾತನಾಡಿ, ಈ ಬಾರಿ ಕ್ರಿಯಾಶೀಲ ಸದಸ್ಯರನ್ನು ಸಮಿತಿಗೆ ನೇಮಕ ಮಾಡಲಾಗಿದೆ. ಸದಸ್ಯರು ಸವಾಲಿನ ನಡುವೆಯೇ ಕೆಲಸ ಮಾಡಬೇಕಿದೆ ಎಂದು ಅಭಿನಂದಿಸಿದರು.
ಮಾಧ್ಯಮ ಮಾನ್ಯತಾ ಸಮಿತಿ
ಸದಸ್ಯರಾದ ರುದ್ರಣ್ಣ ಹರ್ತಿಕೋಟೆ, ಹನುಮಂತ ಭೈರಮಡಗಿ, ಮೋಹನ ಕುಲಕರ್ಣಿ, ಪುಣ್ಯವತಿ, ಹರಿಪ್ರಸಾದ್, ಗಣೇಶ್, ಶಂಕರ ಪಾಗೋಜಿ ವಿನೋದ್ ನಾಯ್ಕ, ವಿಜಯ ಮಲಗಿಹಾಳ, ರವೀಶ್ ಅವರನ್ನು ಕೆಯುಡಬ್ಲ್ಯೂಜೆ ವತಿಯಿಂದ ಸನ್ಮಾನಿಸಲಾಯಿತು.
ಹಿರಿಯ ಪತ್ರಕರ್ತರಾದ ರುದ್ರಣ್ಣ ಹರ್ತಿಕೋಟೆ, ಹರಿಪ್ರಸಾದ್, ಹನುಮಂತ ಭೈರಾಮಡಗಿ ಅವರು ಅಭಿನಂದಿತರ ಪರವಾಗಿ ಮಾತನಾಡಿ, ಪತ್ರಕರ್ತರ ಮಾತೃ ಸಂಸ್ಥೆಯಲ್ಲಿ ಗೌರವಿಸಿರುವುದು ಅಭಿಮಾನದ ಸಂಗತಿ ಎಂದರು.
ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ಘಟಕದ ಅಧ್ಯಕ್ಷ ಸತ್ಯನಾರಾಯಣ, ಶಿವರಾಜ್,
ಚಿತ್ರದುರ್ಗ ಜಿಲ್ಲಾಧ್ಯಕ್ಷ
ಬಿ. ದಿನೇಶ್ ಗೌಡಗೆರೆ, ರಾಜ್ಯ ಸಮಿತಿ ಸದಸ್ಯರಾದ ಸೋಮಶೇಖರ್ ಗಾಂಧಿ, ಕುಲಕರ್ಣಿ, ರಾಜ್ಯ ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ಶಂಭುಲಿಂಗ ಮತ್ತಿತರರು ಇದ್ದರು.
