
ಲಿಂಗನಮಕ್ಕಿ ಜಲಾಶಯಕ್ಕೆ ಸಂಬಂಧಿಸಿ ಎರಡನೇ ವಾರ್ನಿಂಗ್ | ನೋಟೀಸ್ ನಲ್ಲಿ ಏನಿದೆ ಗೊತ್ತಾ?
ಶಿವಮೊಗ್ಗ: ಲಿಂಗನಮಕ್ಕಿ ಜಲಾಶಯಕ್ಕೆ ಸಂಬಂಧಪಟ್ಟಂತೆ KPCL ಎರಡನೇ ನೋಟೀಸ್ ಬಿಡುಗಡೆ ಮಾಡಿದ್ದು ಶರಾವತಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಿದೆ.
ಜು.27ರ ಬೆಳಿಗ್ಗೆ 8 ಗಂಟೆಗೆ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ 1807 ಅಡಿ ತಲುಪಿದೆ. ಗರಿಷ್ಠ ಮಟ್ಟ 1819 ತಲುಪಲು ಇನ್ನು 12 ಅಡಿ ನೀರು ಬಾಕಿ ಇದೆ.
ಶರಾವತಿ ಕೊಳ್ಳದಲ್ಲಿ ಉತ್ತಮ ಮಳೆಯಾಗುತ್ತಿದ್ದು 74600 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ.


ಹೆಚ್ಚಿನ ಒಳಹರಿವು ಇರುವ ಕಾರಣ ಯಾವುದೇ ಕ್ಷಣದಲ್ಲಿ ಜಲಾಶಯದಿಂದ ಹೆಚ್ಚುವರಿ ನೀರನ್ನು ಹೊರಬಿಡುವ ಸಾಧ್ಯತೆ ಇದೆ. ನದಿ ಪಾತ್ರದ ಜನರು ತಮ್ಮ ಜಾನುವಾರು ವಗೈರೆಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳಬೇಕು ಮತ್ತು ನದಿಪಾತ್ರದ ಜನರು ಅನಗತ್ಯವಾಗಿ ನೀರಿಗೆ ಇಳಿಯದಂತೆ KPCL ಎಚ್ಚರಿಕೆ ನೀಡಿದೆ.
