
THIRTHAHALLI| ಅಡಿಕೆ ಕಳ್ಳತನ ಮಾಡಿದ ಆರೋಪದ ಮೇಲೆ ನಾಲ್ವರ ಬಂಧನ!
ತೀರ್ಥಹಳ್ಳಿ : ಕಲ್ಲುಕೊಪ್ಪ ಕರಕುಚ್ಚಿ ಗ್ರಾಮದ ದೇವದಾಸ್ ಎಂಬುವರ ಮನೆಯಲ್ಲಿ 4 ಕ್ವಿಂಟಾಲ್ ಚಾಲಿ ಅಡಿಕೆ ಕಳ್ಳತನ ಮಾಡಿದ ಆರೋಪದ ಮೇಲೆ 4 ಜನರನ್ನು ವಾಹನ ಹಾಗೂ ಮಾಲು ಸಮೇತ ಮಾಳೂರು ಠಾಣಾ ಪೊಲೀಸರು ಬಂಧಿಸಿದ್ದಾರೆ.
ತೀರ್ಥಹಳ್ಳಿ ತಾಲೂಕಿನ ಮಾಳೂರು ವ್ಯಾಪ್ತಿಯಲ್ಲಿ ಕಳ್ಳತನ ನೆಡೆದ ಪ್ರಕರಣವನ್ನು ಬೆನ್ನತ್ತಿದ ಪೊಲೀಸರ ತಂಡ ಆರೋಪಿಗಳನ್ನು ಮಾಲು ಸಮೇತ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳಿಂದ ಅಂದಾಜು 80 ಸಾವಿರ ಮೌಲ್ಯದ ಅಡಿಕೆ ಹಾಗೂ ಕೃತ್ಯಕ್ಕೆ ಬಳಸಿದ 3 ಲಕ್ಷ ರೂ ವೆಚ್ಚದ ಬೊಲೆರೋ ಪಿಕಪ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳಾದ ಶಿಕಾರಿಪುರ ಮೂಲದ
ಹನುಮಂತ, ಅಭಿಷೇಕ್ ಹಾಗೂ ತುಕಾರಾಜ್ ಎಂಬುವರನ್ನು ಬಂಧಿಸಲಾಗಿದೆ. ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
