
ತೀರ್ಥಹಳ್ಳಿಯಲ್ಲಿ ಮಿಸ್ ಫೈರಿಂಗ್ – ಯುವಕ ಸಾವು
ತೀರ್ಥಹಳ್ಳಿ : ಬೇಟೆಗೆಂದು ಹೋಗಿದ್ದ ಸಂದರ್ಭದಲ್ಲಿ ಮಿಸ್ ಫೈರಿಂಗ್ ಆಗಿ ಯುವಕನೋರ್ವ ಸಾವನ್ನಪ್ಪಿದ್ದ ಘಟನೆ ತಾಲೂಕಿನ ಕಟ್ಟೆಹಕ್ಕಲಿನಲ್ಲಿ ನಡೆದಿದೆ.
ಗೌತಮ್ (25 ವರ್ಷ) ಮೃತಪಟ್ಟ ಯುವಕ. ತಾಲೂಕಿನ ಬಸವಾನಿ ಸಮೀಪದ ಕೊಳಾವರ ಗ್ರಾಮದ ಯುವಕ ಕಟ್ಟೆಹಕ್ಕಲಿಗೆ ಸ್ನೇಹಿತರ ಜೊತೆಗೆ ಬೇಟೆಗಾಗಿ ಹೋಗಿದ್ದ. ಈ ವೇಳೆ ಮಿಸ್ ಫೈರಿಂಗ್ ಆಗಿ ಮೃತಪಟ್ಟಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.


