
ನೂತನ ಬಸ್ ನಿಲ್ದಾಣ ನಿರ್ಮಾಣಕ್ಕೆ ಎನ್ಒಸಿ ಕೊಡದೇ ಅಕ್ರಮ : ಶಿಥಿಲ ನಿಲ್ದಾಣ ಕುಸಿದರೇ ಯಾರು ಹೊಣೆ : ತ್ವರಿತ ಕಾಮಗಾರಿಗೆ ಆಗ್ರಹಿಸಿ ನಗರ ಹೋಬಳಿ ಬಿಜೆಪಿಯಿಂದ ಅಹೋರಾತ್ರಿ ಧರಣಿ
ಹೊಸನಗರ: ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಗರದ ನೂತನ ಬಸ್ ನಿಲ್ದಾಣದ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿದ್ದು ಸ್ಥಳಿಯ ಗ್ರಾಮ ಪಂಚಾಯತ್ ಆ ಸಂದರ್ಭದಲ್ಲಿ ಕೆಲ ಪಂಚಾಯತ್ ಸದಸ್ಯರ ವೈಯಕ್ತಿಕ ಹಿತಾಸಕ್ತಿಯಿಂದ Noc ಕೊಡದೆ ಅಕ್ರಮವೆಸಿಗಿರುತ್ತಾರೆ ಎಂದು ನಗರ ಹೋಬಳಿ ಬಿಜೆಪಿ ಮುಖಂಡ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ನಗರ ನಿತಿನ್ ಆರೋಪಿಸಿದ್ದಾರೆ.
ತಾಲೂಕಿನ ನಗರ ಬಸ್ ನಿಲ್ದಾಣ ಸಮೀಪ ನೂತನ ಬಸ್ ನಿಲ್ದಾಣ ಕಾಮಗಾರಿ ಕೂಡಲೇ ನಡೆಸಿ, ತಂಗುದಾಣ ನಿರ್ಮಿಸುವಂತೆ ಆಗ್ರಹಿಸಿ ನಗರ ಹೋಬಳಿ ಬಿಜೆಪಿ ಹಮ್ಮಿಕೊಂಡಿರುವ ಅಹೋರಾತ್ರಿ ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿದರು.
ಎನ್ಒಸಿ ಕೊಡದೇ ಅಕ್ರಮ ಎಸಗಿದ ಬಗ್ಗೆ ಅಧಿಕಾರಿಗಳು ಸ್ಪಷ್ಟನೆ ಕೊಡಬೇಕು. ಈಗಿರುವ ಪಾಳುಬಿದ್ದ ಬಸ್ ನಿಲ್ದಾಣ ಸಾರ್ವಜನಿಕರ ಉಪಯೋಗಕ್ಕೆ ಯೋಗ್ಯರೀತಿಯಲ್ಲಿ ಇಲ್ಲ ಎಂಬುದು ಮೇಲ್ನೊಟಕ್ಕೆ ಅನಿಸುತ್ತದೆ. ಮುಂದೆ ಇದು ಕುಸಿದು ಬಿದ್ದರೆ ಜನ ಸಾಮಾನ್ಯರ ಜೀವಕ್ಕೆ ಯಾರು ಹೊಣೆ ಅನ್ನುವುದನ್ನು ಅಧಿಕಾರಿಗಳು ತಿಳಿಸಬೇಕು ಎಂದು ಆಗ್ರಹಿಸಿದರು.
ಶಾಸಕ ಆರಗ ಜ್ಞಾನೇಂದ್ರ ಆಪ್ತ ಸಹಾಯಕ, ಸರ್ಕಾರ ಕೂಡಲೆ ನೂತನ ಬಸ್ ನಿಲ್ದಾಣವನ್ನು ನಿರ್ಮಾಣ ಮಾಡುವಂತೆ ಆಗ್ರಹಿಸಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭಿಸಲಾಗಿದೆ ಎಂದರು.
ಪ್ರಮುಖರಾದ ಸಂತೋಷ ಚಿಕ್ಕಪೇಟೆ, ಉಮೇಶ್, ದೇವು ನಗರ, ಸಂತು ದುಬಾರತಟ್ಟಿ, ಚಿಕ್ಕಪೇಟೆ ಚಂದ್ರಶೇಖರ ಶೆಟ್ಟಿ, ಮೊಬೈಲ್ ಅನಿಲ್, ಸತ್ಯನಾರಾಯಣ, ದೇವರಾಜ ಚಿಕ್ಕಪೇಟೆ, ಕೆ.ಬಿ.ಕುಮಾರ, ರಾಘು ಆಚಾರ್ ಇತರರು ಇದ್ದರು.











