Homeತಾಲ್ಲೂಕುಪ್ರಮುಖ ಸುದ್ದಿಹೊಸನಗರ

ಪಂಕ್ಚರ್ ಆಗಿ ವಾರ ಆಯ್ತು | 108 ಅಂಬುಲೆನ್ಸ್ ಅವ್ಯವಸ್ಥೆ | ಹೊಸನಗರ ಆಯ್ತು ಇದೀಗ ನಗರದ ಸರದಿ

ಹೊಸನಗರ: ತಾಲೂಕು ಕೇಂದ್ರದ 108 ಅಂಬುಲೆನ್ಸ್ ಅವ್ಯವಸ್ಥೆ ನೋಡಿ ಆಯ್ತು.. ದುರಸ್ಥಿಗೊಂಡು ಸೇವೆಗೂ ಸಜ್ಜಾಯ್ತು.. ಇದೀಗ ನಗರ ಹೋಬಳಿ ಕೇಂದ್ರದ 108 ಅಂಬುಲೆನ್ಸ್ ಸರದಿ..
ಕಳೆದ ಕೆಲವು ಸಮಯದಿಂದ 108 ಸೇವೆ ಸಿಗುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪ. ಅಲ್ಲದೇ ಟಯರ್ ಪಂಕ್ಚರ್ ಆಗಿ ವಾರ ಕಳೆದರೂ ಪಂಕ್ಚರ್ ಕೂಡ ಹಾಕದೆ ಹಾಗೇ ಬಿಡಲಾಗಿದೆ.
ನಗರ ಸಂಯುಕ್ತ ಆಸ್ಪತ್ರೆಯ ಮುಖ್ಯಧ್ವಾರದಲ್ಲೇ ಅಂಬುಲೆನ್ಸ್ ನಿಲ್ಲಿಸಲಾಗಿದೆ. ಉಪಯೋಗಕ್ಕೆ ಬಾರದೆ ಶೆಡ್ ಒಳಗಿನ ಶೋಪೀಸ್ ಗಷ್ಟೆ ಸೀಮಿತವಾಗಿದೆ.

ಸಾರ್ವಜನಿಕರ ಆಕ್ರೋಶ:
ನಗರ ಹೋಬಳಿ ಜನರ ತುರ್ತು ಆರೋಗ್ಯ ಸಮಸ್ಯೆಗಳಿಗೆ ಸ್ಪಂದಿಸುವ ಸಲುವಾಗಿ ಜನರ ಬಹುದಿನಗಳ ಬೇಡಿಕೆಯಿಂದಾಗಿ 108 ಸೌಲಭ್ಯ ನೀಡಲಾಗಿದೆ. ಆದರೆ ಜನರ ಸಮಸ್ಯೆಗೆ ಸ್ಪಂದಿಸುವ ಮಾತು ಹಾಗಿರಲಿ 108 ರದ್ದೆ ನೂರೆಂಟು ಸಮಸ್ಯೆಗಳು ಕಂಡು ಬರುತ್ತಿವೆ ಎಂದು ಜನರ ಆಕ್ರೋಶಕ್ಕೆ ತುತ್ತಾಗಿದೆ.
ವಾಹನಕ್ಕೆ ಪಂಕ್ಚರ್ ಹಾಕಲು ಕೂಡ ಸಾಧ್ಯವಾಗುತ್ತಿಲ್ಲ ಎಂದಾದರೆ ಇಂತಹ ಸೌಲಭ್ಯ ಪಡೆದು ನಾವೇನು ಮಾಡಬೇಕು ಸ್ವಾಮಿ ಅನ್ನುತ್ತಾರೆ ಸ್ಥಳೀಯರು.
ಈ ಬಗ್ಗೆ ಸ್ಥಳೀಯ ವೈದ್ಯರಿಗೆ ವಿಚಾರಿಸೋಣ ಎಂದರೆ 108 ಅಂಬುಲೆನ್ಸ್ ನಮ್ಮ ವ್ಯಾಪ್ತಿಗೆ ಬರೋದಿಲ್ಲ. ಆಸ್ಪತ್ರೆ ಒಳಗಿನ ವಿಚಾರಕ್ಕೆ ನಾವು ಕ್ರಮಕೈಗೊಳ್ಳಬಹುದು ಅಂತಾರೆ. ಎಂಬ ಅಳಲು ಸ್ಥಳೀಯರದ್ದು.

ಒಂದೇ 108 ಅಂಬುಲೆನ್ಸ್ ಸೌಲಭ್ಯವನ್ನು ಸಮರ್ಪಕವಾಗಿ ನೀಡಬೇಕು. ಇಲ್ಲ ಪಂಕ್ಚರ್ ಹಾಕಿಸುವಷ್ಟು ಸಾಧ್ಯವಾಗದೇ ಅವ್ಯವಸ್ಥೆ ಗೂಡಾಗಿ ನಿರ್ವಹಿಸುತ್ತಿರುವ ನಿರ್ವಹಣಾ ವಿಭಾಗದ ವಿರುದ್ಧ ಕ್ರಮ ಜರುಗಿಸಿ. ಅದು ಕೂಡ ಆಗಲ್ಲ ಎಂದಾದರೆ ಆಸ್ಪತ್ರೆ ಮುಂಭಾಗದಲ್ಲಿ ಪ್ರಯೋಜನಕ್ಕೆ ಶೋಪೀಸ್ ನಂತೆ ಕಾಣುತ್ತಿರುವ 108 ಅಂಬುಲೆನ್ಸ್ ಅವಶ್ಯಕತೆ ಏನು ಎಂದು ಪ್ರಶ್ನಿಸಿದ್ದಾರೆ.

ಪಂಕ್ಚರ್ ಹಾಕದೇ ವಾರ ಆಯ್ತು..
ಕಳೆದ ಮೂರ್ನಾಲ್ಕು ತಿಂಗಳಿಂದ 108 ಸೌಲಭ್ಯ ಸಮರ್ಪಕವಾಗಿಲ್ಲ. ಅದರಲ್ಲೂ ಟಯರ್ ಪಂಕ್ಚರ್ ಆಗಿ ವಾರ ಕಳೆದಿದೆ. ವಾಹನ ನೋಡಿದರೆ ಓಡಿಸಲು ಕೂಡ ಸಿಬ್ಬಂದಿಗೆ ಭಯ ಆಗುತ್ತಿರಬಹುದು. ಇನ್ನು ರೋಗಿಗಳ ಕತೆ ಏನು. ಇದನ್ನೆ ನಂಬಿಕೊಂಡಿರುವ ಬಡರೈತ ಕೂಲಿಕಾರ್ಮಿಕರು ಸಮಸ್ಯೆ ಎದುರಿಸುವಂತಾಗಿದೆ.

ರವಿ ಜೂಡೋ, ನಗರ

ನಗರ ಹೋಬಳಿಯ 108 ಅಂಬುಲೆನ್ಸ್ VIDEO REPORT ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

https://youtu.be/fPtfs3IW9Y4

ಸಮಾಜದಲ್ಲಿಯ ಸುದ್ದಿಗಳನ್ನು ಆರಿಸಿ ಮತ್ತೆ ಸಮಾಜಕ್ಕೆ ನೀಡುವ ಒಂದು ಸಣ್ಣ ಪ್ರಯತ್ನ.. ಆ ಕಾರ್ಯದಲ್ಲಿ ಖಚಿತತೆ, ವಿಶ್ವಾಸಾರ್ಹತೆ, ಸಮಸ್ಯೆಯ ಬಿಂಬ, ಬಿಂಬಿತ ಸಮಸ್ಯೆಗೆ ಪರಿಹಾರದ ಯತ್ನ.. ಆ ಯತ್ನದಲ್ಲಿ ದಕ್ಕಿದ ಒಂದಷ್ಟು ಯಶಸ್ಸು.. ಇದರಲ್ಲಿ‌ ನಿರಂತರತೆ ಕಾಯ್ದುಕೊಳ್ಳುವ ಆಶಯ.. ಅಷ್ಟೆ..

What's your reaction?

Related Posts

ಕೊಲ್ಲೂರು ಹೆದ್ದಾರಿ ಎಬಗೋಡು ಪಕ್ಕದಲ್ಲೇ ನಿಧಿ ಶೋಧನೆ : ಶಿವಲಿಂಗದ ಪಕ್ಕದಲ್ಲಿ 4 ಅಡಿಯಷ್ಟು ಗುಂಡಿ ತೋಡಿದ ನಿಧಿ ಚೋರರು

ಕೊಲ್ಲೂರು ಹೆದ್ದಾರಿ ಎಬಗೋಡು ಪಕ್ಕದಲ್ಲೇ ನಿಧಿ ಶೋಧನೆ : ಶಿವಲಿಂಗದ ಪಕ್ಕದಲ್ಲಿ 4 ಅಡಿಯಷ್ಟು…

1 of 42

Leave A Reply

Your email address will not be published. Required fields are marked *