ಹೊಸನಗರ: ಮೂಡುಗೊಪ್ಪ, ಕರಿಮನೆ, ಅಂಡಗದೋದೂರು ಸೇರಿದಂತೆ ಮೂರು ಗ್ರಾಪಂ ವ್ಯಾಪ್ತಿಯ ರೂ.25 ಕೋಟಿ ವೆಚ್ಚದ 30 ಹೆಚ್ಚು ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಒಂದೇ ದಿನ ಚಾಲನೆ ನೀಡಿದರು.
ಮಂಗಳವಾರ ನಗರ ಹೋಬಳಿಗೆ ಆಗಮಿಸಿದ ಸಚಿವರು, ಅಂಡಗದೋದುರು ಗ್ರಾಮ ಪಂಚಾಯಿತಿ ಮಕ್ಕಿಮನೆ ರಸ್ತೆ ಗುದ್ದಲಿ ಪೂಜೆ, ಬೇಳೂರು ಆಚಾರ್ಯ ಕಾಲೊನಿ, ಹೆಣ್ಣೆಬೈಲು ರಸ್ತೆ, ಬೇಳೂರು ಶಾಲಾ ಉದ್ಘಾಟನೆ, ಮೂಡುಗೊಪ್ಪ ಗ್ರಾಮ ಪಂಚಾಯಿತಿ ಮಾನಿ ಕೆಸಗೊಡು ರಸ್ತೆ ಉದ್ಘಾಟನೆ, ಅರೋಡಿ ಕುಂಟಳ್ಳಿ ರಸ್ತೆ ಗುದ್ದಲಿ ಪೂಜೆ, ನಗರ ಸುಳುಗೊಡು ರಸ್ತೆ, ಚಕ್ಕಾರು ರಸ್ತೆ, ದುಬಾರತಟ್ಟಿ ರಸ್ತೆ, ನಗರ ಬಸ್ ಸ್ಟಾಂಡ್ ಗುದ್ದಲಿ ಪೂಜೆ, ನಗರ ಹಾಸ್ಟೆಲ್ ಉದ್ಘಾಟನೆ, ಚಿಕ್ಕಪೇಟೆ ಅಂಗನವಾಡಿ ಉದ್ಘಾಟನೆ, ಬೈರೋಜಿಬ್ಯಾಣ ರಸ್ತೆ, ಕೆರೆಗದ್ದೆ ರಸ್ತೆ, ಕರಿಮನೆ ಗ್ರಾಮ ಪಂಚಾಯಿತಿ ಸಂದೊಡಿ ಬ್ರಿಡ್ಜ್ ಉದ್ಘಾಟನೆ, ಮಳಲಿ ಗ್ರಾಮದ ಸಂಪಗೋಡು ರಸ್ತೆ ಉದ್ಘಾಟನೆ, ಕಾನ್ಮನೆ to ನಿಲ್ಸ್ ಕಲ್ ರಸ್ತೆ, ಕರಿಮನೆ ಶಾಲೆ ಉದ್ಘಾಟನೆ, ಕಿಳಂದೂರು ರಸ್ತೆ ಮತ್ತು ಜಲಜೀವನ ಕುಡಿಯುವ ನೀರಿನ ಉದ್ಘಾಟನೆ, ನಿಲ್ಸ್ ಕಲ್ ಕುಡಿಯುವ ನೀರಿನ ಟ್ಯಾಂಕ್ ಉದ್ಘಾಟನೆ, ಅಂಡಗದೋದುರು ಗ್ರಾಮ ಪಂಚಾಯಿತಿ ಅಮ್ತಿ ರಸ್ತೆ,
ಬಾಳೆಮನೆ ರಸ್ತೆ, ಮೇಲಿನಮನೆ ಸುಬ್ಬಣ್ಣನ ಮನೆ ಹತ್ತಿರ ಕಾಲುಸುಂಕ,
ದಿಡಿಗೆ ಮನೆ ರಸ್ತೆ, ಮೇಲಿನ ಮನೆ ರಸ್ತೆ, ಕುನ್ನಳ್ಳಿ ರಸ್ತೆ ಮತ್ತು ಗಿರಿಜಮ್ಮನ ಮನೆಗೆ ಹೋಗುವ ರಸ್ತೆ, ಹೊಳೆಕೊಪ್ಪ ಜಂಬ್ಳಿ ರಸ್ತೆ, ರ್ಯಾವೆ ಕಣಕಿ ರಸ್ತೆ, ಬಿಳುಕೊಪ್ಪ ರಸ್ತೆ, ಅಗ್ಗೆಬೈಲು ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು.
ನಗರ ಬಸ್ ನಿಲ್ದಾಣ ವಿಚಾರದಲ್ಲಿ ವಿರೋಧ:
ಹೋಬಳಿ ಕೇಂದ್ರ ನಗರದಲ್ಲಿ ನೂತನ ಬಸ್ ನಿಲ್ದಾಣ ಕಾಮಗಾರಿ ಶಂಕುಸ್ಥಾಪನೆ ವಿಚಾರದಲ್ಲಿ ಮೂಡುಗೊಪ್ಪ ಗ್ರಾಪಂ ಅಧ್ಯಕ್ಷ ಕರುಣಾಕರ ಶೆಟ್ಟಿ ವಿರೋಧ ವ್ಯಕ್ತಪಡಿಸಿದರು.
ಗೃಹ ಸಚಿವ ಆರಗ ಬರುತ್ತಿದ್ದಂತೆ ವಿರೋಧ ವ್ಯಕ್ತಪಡಿಸಿದ ಕರುಣಾಕರ ಶೆಟ್ಟಿ, ನೂತನ ನಿಲ್ದಾಣಕ್ಕೆ ಅವಕಾಶ ನೀಡಿದ ನಿಮಗೆ ಗೌರವ ಸಲ್ಲಿಸುತ್ತೇನೆ. ಪಂಚಾಯ್ತಿಯಲ್ಲಿ ಕೂಡ ನಿಮ್ಮನ್ನು ಅಭಿನಂದಿಸಿ ನಿರ್ಣಯ ಮಾಡಲಾಗಿದೆ. ಆದರೆ ಗ್ರಾಪಂ ಅಧ್ಯಕ್ಷರಿಗೆ ಮಾಹಿತಿ ನೀಡದೆ ಕಡೆಗಣಿಸಿ ಶಂಕುಸ್ಥಾಪನೆ ನಡೆಸುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಈ ಬಗ್ಗೆ ನಮ್ಮ ಪಿಎ ಮಾಹಿತಿ ನೀಡಿದ್ದಾರೆ ಅಲ್ಲದೇ ಪಿಡಿಒ ಕೂಡ ಮಾಹಿತಿ ನೀಡಿದ್ದಾರೆ ಹೀಗಿದ್ದು ಒಂದು ಒಳ್ಳೆಯ ಕಾರ್ಯಕ್ರಮಕ್ಕೆ ಕಿರಿಕಿರಿ ಮಾಡೋದು ಸರಿಯಲ್ಲ. ನಿಲ್ದಾಣಕ್ಕೆ ಅವಕಾಶ ನೀಡಿದ ಸಚಿವನಾದ ನನಗೆ ನೀಡೋ ಗೌರವನಾ ಎಂದು ಪ್ರಶ್ನಿಸಿದರಲ್ಲದೇ ಅಭಿವೃದ್ಧಿ ವಿಚಾರದಲ್ಲಿ ತಕರಾರು ಬೇಡ.. ಜೊತೆಗಿರಿ ಎಂದರು. ಆದರೆ ಇದಕ್ಕೊಪ್ಪ ಕರುಣಾಕರ ಶೆಟ್ಟಿ ಅಲ್ಲಿಂದ ಹೊರನಡೆದರು. ಬಳಿಕ ನಿಲ್ದಾಣ ಕಾಮಗಾರಿಯ ಶಂಕು ಸ್ಥಾಪನೆ ನೆರವೇರಿಸಲಾಯಿತು. ಜನರ ಒತ್ತಾಸೆಗೆ ಮಣಿದು ನಗರ ಹೋಬಳಿಗೆ ಸಾಕಷ್ಟು ಅನುದಾನ ನೀಡಿದ್ದೇನೆ. ಅಂತಹ ಕಾರ್ಯಗಳಿಗೂ ಅಪಸ್ವರ ಬಂದರೆ ಹೇಗೆ ಎಂದು ಗೃಹಸಚಿವರು ಬೇಸರ ವ್ಯಕ್ತಪಡಿಸಿದರು.
ಸಚಿವರ ಆಪ್ತ ಸಹಾಯಕ ಬಸವರಾಜ ಹೊದಲ, ಜಿಪಂ ಮಾಜಿ ಸದಸ್ಯ ಸುರೇಶ ಸ್ವಾಮಿರಾವ್, ಗ್ರಾಪಂ ಪಿಡಿಒ ರಾಮಚಂದ್ರ, ಪ್ರಮುಖರಾದ ಎನ್.ವೈ.ಸುರೇಶ್, ಕೆ.ವಿ.ಕೃಷ್ಣಮೂರ್ತಿ, ಕಣ್ಕಿ ಮಹೇಶ್, ಎ.ಎನ್.ಆದಿರಾಜ್, ಸತೀಶಗೌಡ, ಸಿ.ವಿ.ಚಂದ್ರಶೇಖರ್, ಅರುಣ ಬೈಸೆ, ಕೆ.ಬಿ.ಕುಮಾರ್, ನಾರಾಯಣ ಕಾಮತ್ ವಿವಿಧ ಇಲಾಖೆಯ ಅಧಿಕಾರಿಗಳು, ಊರಿನ ಪ್ರಮುಖರು ಇದ್ದರು.