
ನಗರ ನಾಡಕಚೇರಿ ಕಟ್ಟಡ ಸಮಸ್ಯೆ ಬಗ್ಗೆ ಪರಿಶೀಲಿಸುವೆ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ | ಪರಿಶೀಲಿಸಿ ವರದಿ ನೀಡುವಂತೆ ತಹಶೀಲ್ದಾರ್ ಭರತರಾಜ್ ಎಂಜನಿಯರ್‌ಗೆ ಸೂಚನೆ
ಹೊಸನಗರ: ನಿರ್ಮಾಣ ಕಂಡು ಕಳೆದ ನಾಲ್ಕು ವರ್ಷದಿಂದ ನೆನಗುದಿಗೆ ಬಿದ್ದಿರುವ ನಗರ ನಾಡಕಚೇರಿ ಕಟ್ಟಡದ ಸಮಸ್ಯೆ ಬಗ್ಗೆ ಪರಿಶೀಲಿಸುವುದಾಗಿ ಮಾಹಿತಿ ನೀಡಿದ್ದಾರೆ.
ಇದರ ಮುಂದುವರಿದ ಭಾಗವಾಗಿ ಹೊಸನಗರ ತಹಶೀಲ್ದಾರ್ ಭರತರಾಜ್, ಈ ಸಂಬಂಧ ಪರಿಶೀಲಿಸಿ ವರದಿ ನೀಡುವಂತೆ ಲೋಕೋಪಯೋಗಿ ಎಇಇ ಸುನಿಲ್ ಕುಮಾರ್‌ರಿಗೆ ಸೂಚಿಸಿದ್ದಾರೆ.
ಹೊಸನಗರ ತಹಶೀಲ್ದಾರ್ ಭರತರಾಜ್ಎರಡು ದಿನದೊಳಗೆ ಎಂಜನಿಯರ್ ನೂತನ ನಾಡ ಕಚೇರಿ ಸ್ಥಳಕ್ಕೆ ಭೇಟಿ ವರದಿ ನೀಡಲಿದ್ದಾರೆ.
ಒಟ್ಟಾರೆ ಕಳೆದ ನಾಲ್ಕು ವರ್ಷದಿಂದ ಕಗ್ಗಂಟಾಗಿರುವ ನಗರ ನಾಡ ಕಚೇರಿ ನೂತನ ಕಟ್ಟಡದ ಸಮಸ್ಯೆ ಬಗೆಹರಿಯುವುದೇ ಕಾದು ನೋಡಬೇಕಾಗಿದೆ.











