
ನಗರ ಜಗನ್ನಾಥ ಶೆಟ್ಟಿ ಯಕ್ಷಲೋಕದ ಕಿರೀಟಪ್ರಾಯ: ಯಕ್ಷಗಾನ ಕಲಾವಿದ ಉಪ್ಪುಂದ ನಾಗೇಂದ್ರ ರಾವ್
ಹೊಸನಗರ: ಬಡಗುತಿಟ್ಟು ಯಕ್ಷಗಾನದಲ್ಲಿ ದಿ.ನಗರ ಜಗನ್ನಾಥ ಶೆಟ್ಟಿ ತಮ್ಮದೇ ವಿಶಿಷ್ಠ ಶೈಲಿಯಿಂದ ಮನೆಮಾತಾಗಿದ್ದರು. ನಾಲ್ಕು ದಶಕದಲ್ಲಿ ಇಡೀ ಯಕ್ಷಲೋಕವನ್ನು ಆವರಿಸಿಕೊಂಡಿದ್ದ ಇಂದಿಗೂ ಕಿರೀಟ ಪ್ರಾಯ ಎಂದು ಯಕ್ಷಗಾನದ ಹಿರಿಯ ಕಲಾವಿದ ಉಪ್ಪುಂದ ನಾಗೇಂದ್ರರಾವ್ ಅಭಿಪ್ರಾಯಿಸಿದರು.


ತಾಲೂಕಿನ ನೂಲಿಗ್ಗೇರಿಯಲ್ಲಿ ಗೆಳೆಯರ ಬಳಗ ಮತ್ತು ಕಲಾಭಿಮಾನಿಗಳು, ದಿ.ನಗರ ಜಗನ್ನಾಥಶೆಟ್ಟಿಯವರ 20 ನೇ ವರ್ಷದ ಸಂಸ್ಮರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ನಗರ ಎಂದೇ ಕರಾವಳಿ ಮತ್ತು ಯಕ್ಷಪ್ರೇಕ್ಷಕರಲ್ಲಿ ಮನೆಮಾತಾಗಿದ್ದ ಜಗನ್ನಾಥ ಶೆಟ್ಟಿಯವರ ಕೊಡುಗೆ ಅನನ್ಯ. ಬದುಕಿನಲ್ಲಿ ಸ್ವಾಭಿಮಾನ, ರಂಗಸ್ಥಳದಲ್ಲಿ ಗತ್ತುಗಾರಿಕೆಗೆ ಹೆಸರಾಗಿದ್ದರು. ಅವರು ಅಸ್ತಂಗತವಾಗಿ 2 ದಶಕ ಕಳೆದರೂ ಅವರ ಹೆಸರು ಇಂದಿಗೂ ಅವರ ಹೆಸರು ಮಾರ್ದನಿಸುತ್ತಿದೆ ಎಂದರೆ ಅವರು ಯಕ್ಷಕಲೆಯಲ್ಲಜ ಸಾಧಿಸಿದ ಪ್ರಭುತ್ವಕ್ಕೆ ಸಾಕ್ಷಿ ಎಂದರು. ನನಗೆ ಅವರ ಹೆಸರಿನಲ್ಲಿ ಪ್ರಶಸ್ತಿ ದಕ್ಕಿರುವುದು ನನ್ನ ಕಲಾ ಬದುಕಿಗೆ ಕಿರೀಟ ಸಿಕ್ಕಂತಾಗಿ ಎಂದು ಹರ್ಷ ವ್ಯಕ್ತಪಡಿಸಿದರು.
ನಗರ ಜಗನ್ನಾಥ ಶೆಟ್ಟಿ ಪ್ರಶಸ್ತಿ ಪ್ರಧಾನ:
ನಗರ ಜಗನ್ನಾಥ ಶೈಲಿಯನ್ನು ನೆನಪಿಗೆ ತರುವಂತ ಏಕೈಕ ಕಲಾವಿದ ಉಪ್ಪುಂದ ನಾಗೇಂದ್ರರಾವ್, ದಿ.ಕಾಳಿಂಗನಾವುಡರ ಶಿಷ್ಯ ಖ್ಯಾತ ಭಾಗವತ ಸದಾಶಿವ ಅಮಿನ್, ಕಲಾವಿದರಾದ ನಗರ ಪ್ರಕಾಶ ಶೆಟ್ಟಿ, ಸತೀಶ ಶೆಟ್ಟಿ, ಖ್ಯಾತ ಭಾಗವತ ದಿ.ನಗರ ಸುಬ್ರಹ್ಮಣ್ಯ ಆಚಾರ್ (ಮರಣೋತ್ತರ ಪ್ರಶಸ್ತಿ) ಪತ್ನಿ ಸರಸ್ವತಿ ಬೇಳುರು ಇವರಿಗೆ ರಂಗಸ್ಥಳದ ರಾಜ ನಗರ ಜಗನ್ನಾಥ ಶೆಟ್ಟಿ ಹೆಸರಿನಲ್ಲಿ ಪ್ರಶಸ್ತಿಯೊಂದಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಮಾಸ್ತಿಕಟ್ಟೆ ಸುಬ್ರಹ್ಮಣ್ಯ, ಗ್ರಾಪಂ ಮಾಜಿ ಅಧ್ಯಕ್ಷ ಕರುಣಾಕರ ಶೆಟ್ಟಿ, ಉಪಾಧ್ಯಕ್ಷೆ ಸುಮನಾ ಭಾಸ್ಕರ್, ಸದಸ್ಯ ವಿಶ್ವನಾಥ, ಪಿಎಸ್ಐ ರಮೇಶ್, ಗೆಳೆಯರ ಬಳಗದ ಸಂಚಾಲಕ ಹರೀಶ ವಕ್ರತುಂಡ, ಪ್ರಮುಖರಾದ ದೇವಗಂಗೆ ಚಂದ್ರಶೇಖರ ಶೆಟ್ಟಿ, ಮಹಾಬಲ ಕೊಠಾರಿ, ಅಬ್ಬಾಸ್, ಶೇಖರ್ ಇತರರು ಇದ್ದರು.
ಪತ್ರಕರ್ತ ರವಿ ಬಿದನೂರು ಸಂಯೋಜನೆಯಲ್ಲಿ ನಡೆದ ಕಾರ್ಯಕ್ರಮವನ್ನು ಅಶ್ವಿನಿಪ್ರಭು ನಿರ್ವಹಿಸಿದರು.
ನಂತರ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ನಡೂರು ಇವರಿಂದ ಶಿವದೂತ ಪಂಜುರ್ಲಿ ಯಕ್ಷಗಾನ ಬಯಲಾಟ ಪ್ರದರ್ಶನ ಕಂಡಿತು.
