ಕ್ರೈಂತಾಲ್ಲೂಕುತೀರ್ಥಹಳ್ಳಿಶಿವಮೊಗ್ಗಶಿವಮೊಗ್ಗ ಜಿಲ್ಲೆಸಾಗರ

ನಗರ ಭಾಗದಲ್ಲಿ ಸರಣಿ ಕಳ್ಳತನ, ಯತ್ನ ಪ್ರಕರಣಗಳು | ಆತಂಕದಲ್ಲಿ ಜನರು | ಪೊಲೀಸರಿಂದ ಜಾಗೃತಿ

ನಗರ ಭಾಗದಲ್ಲಿ ಸರಣಿ ಕಳ್ಳತನ, ಯತ್ನ ಪ್ರಕರಣಗಳು | ಆತಂಕದಲ್ಲಿ ಜನರು | ಪೊಲೀಸರಿಂದ ಜಾಗೃತಿ

ಹೊಸನಗರ: ತಾಲೂಕಿನ ನಗರ ಭಾಗದಲ್ಲಿ ಸರಣಿ ಕಳ್ಳತನ ಯತ್ನ ಮತ್ತು ಕಳ್ಳತನ ಪ್ರಕರಣಗಳು ನಡೆಯುತ್ತಿದ್ದು ಜನರಿಗೆ ಆತಂಕ ತರಿಸಿದರೆ ಪೊಲೀಸರಿಗೆ ತಲೆನೋವು ತರಿಸಿದೆ.

ಕಳೆದ ಆ.14 ರಂದು ಕಾನುಗೋಡು ರಾಮಕೃಷ್ಣ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿದ್ದು ರೂ.1,36,500-00 ಮೌಲ್ಯದ ಚಿನ್ನಾಭರಣ, ರೂ.4000 ಮೌಲ್ಯದ ಬೆಳ್ಳಿಯ ವಸ್ತುಗಳು ಕಳ್ಳತನವಾಗಿದೆ.
ಇದೇ ದಿನ ಮಾಸ್ತಿಕಟ್ಟೆ ಸಮೀಪದ ಕಿಲಗಾರು ವಾಸಿ ಸುಜಯ ಗೋಪಾಲ, ಸುಜಯ ಚಂದ್ರಪ್ಪಗೌಡ ಎಂಬುವವರ ಮನೆಯಲ್ಲೂ ಕೂಡ ಕಳ್ಳತನಕ್ಕೆ ಯತ್ನಿಸಿದ ಘಟನೆಗಳು‌ ನಡೆದಿವೆ.

ಪುಟ್ಟಕ್ಕನ ಮನೆ:
ನಗರ ಮಾಸ್ತಿಕಟ್ಟೆ ಮಾರ್ಗದ ಮುಂಡಳ್ಳಿ ಸಮೀಪದ ಪುಟ್ಟಕ್ಕನ ಮನೆಯಲ್ಲೂ ಕಳ್ಳತನ ಮಾಡಿದ ಘಟನೆ ಭಾನುವಾರ ನಡೆದಿದೆ. ಬಂಗಾರದ ಓಲೆ, ಮತ್ತು ಉಂಗುರ ಮತ್ತು‌ ನಗದು ಕಳ್ಳತನ ಮಾಡಲಾಗಿದೆ. ಇದು ಸಾರ್ವಜನಿಕವಾಗಿ ಚರ್ಚೆಯಾಗುತ್ತಿದ್ದಂತೆ ಸೋಮವಾರ ಬೆಳಿಗ್ಗೆ ಪುಟ್ಟಕ್ಕನ ಮನೆ ಗೇಟ್ ಮುಂಭಾಗ ಕದ್ದ ಮಾಲನ್ನು ವಾಪಾಸು ಇಟ್ಟು ಹೋಗಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಹಾಡು ಹಗಲೇ ಘಟನೆ:
ಕಿಲಗಾರು, ಕಾನುಗೋಡು, ಮುಂಡಳ್ಳಿ ಸೇರಿದಂತೆ ಎಲ್ಲಾ ಪ್ರಕರಣಗಳು ಹಾಡುಹಗಲೇ‌ ನಡೆದಿದ್ದು ಆತಂಕಕ್ಕೆ ಕಾರಣವಾಗಿದೆ. ಕೂಲಿಕಾರ್ಮಿಕರ ಮನೆಯನ್ನೇ ಕಳ್ಳತನಕ್ಕೆ ಕೇಂದ್ರೀಕರಿಸಿ ಮನೆಯಲ್ಲಿ ಯಾರು ಇಲ್ಲದ ಸಮಯ ನೋಡಿ ಕಳ್ಳತನದ ಯತ್ನ ಮಾಡಲಾಗುತ್ತಿದ್ದು ಪೊಲೀಸರಿಗೆ ತಲೆನೋವು ತರಿಸಿದೆ.

ಸಿಸಿ ಟಿವಿಗಳು ಇಲ್ಲ:
ಕಳ್ಳತನ ಪ್ರಕರಣ ತಡೆಗಟ್ಟಲು ಇನ್ನಿಲ್ಲದ ಪ್ರಯತ್ನ ಪೊಲೀಸರಿಂದ ನಡೆಯುತ್ತಿದೆ. ಸ್ಥಳಕ್ಕೆ ಬೆರಳಚ್ಚು ತಜ್ಞರ ತಂಡ, ಶ್ವಾನದಳವನ್ನು ಕರೆಸಿ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಆದರೆ ಆಯ್ದ ಜಾಗಗಗಳಲ್ಲಿ‌ ಸಿಸಿಟಿವಿ ಕ್ಯಾಮೆರಾ ಅಳವಡಿಸದಿರುವುದು ಹಿನ್ನಡೆಯಾಗಿದೆ. ಪೊಲೀಸರು ಕರಪತ್ರ ಹಂಚಿ ಜಾಗೃತಿ ಮೂಡಿಸಿದರು ಕೂಡ ಯಾವುದೇ ಪ್ರಯೋಜನವಾಗಿಲ್ಲ.

ನಗರ ಭಾಗದಲ್ಲಿ ಒಂಟಿಮನೆಗಳು ಹೆಚ್ಚು. ಅಲ್ಲದೇ ಕೂಲಿಕಾರ್ಮಿಕರು ಕೂಡ ಹೆಚ್ಚು, ಬೆಳಿಗ್ಗೆ ಮನೆಗೆ ಬಾಗಿಲು ಹಾಕಿ ಕೆಲಸಕ್ಕೆ ಹೋದರೆ ಬರುವುದು ಸಂಜೆಯೇ.. ಹೀಗಾಗಿ ಈ ಸಂದರ್ಭ ನೋಡಿಕೊಂಡು ಕಳ್ಳತನ ಯತ್ನ ನಡೆಯುತ್ತಿದೆ.

ಕಳ್ಳತನದ ಯತ್ನಗಳಿಂದ ಬಚಾವಾಗಲು, ಪೊಲೀಸರೊಂದಿಗೆ ಸಾರ್ವಜನಿಕರ ಸಹಕಾರ ಕೂಡ ಮುಖ್ಯ. ಭದ್ರತೆ ಇಲ್ಲದ ಮನೆಗಳಲ್ಲಿ ಚಿನ್ನಾಭರಣ, ನಗದು ಇಟ್ಟು ಹೋಗುವ ಬಗ್ಗೆ ನಿಗಾ ವಹಿಸಬೇಕು. ಎರಡು ಮೂರು ದಿನಗಳ ಕಾಲ ಮನೆ ಬಿಟ್ಟು ಇರುವ ಸಂದರ್ಭದಲ್ಲಿ ಅಗತ್ಯ ಮಾಹಿತಿಯನ್ನು ಪೊಲೀಸರಿಗೆ ನೀಡುವುದು ಉತ್ತಮ ಎಂಬ ಅಭಿಪ್ರಾಯ ಕೂಡ ವ್ಯಕ್ತವಾಗಿದೆ.

ನಗರ ಠಾಣೆ ಪಿಎಸ್ಐ ಶಿವಾನಂದ ಕೋಳಿ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಅಲ್ಲದೇ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಒಟ್ಟಾರೆ ನಗರ ಮಾಸ್ತಿಕಟ್ಟೆ ಭಾಗದಲ್ಲಿ ಕಳೆದ ಒಂದು ವಾರದಿಂದ ನಡೆಯುತ್ತಿರುವ ಕಳ್ಳತನ ಮತ್ತು ಯತ್ನ ಪ್ರಕರಣಗಳು ಪೊಲೀಸರ‌ ನಿದ್ದೆಗೆಡಿಸಿರುವುದು ಮಾತ್ರ ಸತ್ಯ.

ಸಮಾಜದಲ್ಲಿಯ ಸುದ್ದಿಗಳನ್ನು ಆರಿಸಿ ಮತ್ತೆ ಸಮಾಜಕ್ಕೆ ನೀಡುವ ಒಂದು ಸಣ್ಣ ಪ್ರಯತ್ನ.. ಆ ಕಾರ್ಯದಲ್ಲಿ ಖಚಿತತೆ, ವಿಶ್ವಾಸಾರ್ಹತೆ, ಸಮಸ್ಯೆಯ ಬಿಂಬ, ಬಿಂಬಿತ ಸಮಸ್ಯೆಗೆ ಪರಿಹಾರದ ಯತ್ನ.. ಆ ಯತ್ನದಲ್ಲಿ ದಕ್ಕಿದ ಒಂದಷ್ಟು ಯಶಸ್ಸು.. ಇದರಲ್ಲಿ‌ ನಿರಂತರತೆ ಕಾಯ್ದುಕೊಳ್ಳುವ ಆಶಯ.. ಅಷ್ಟೆ..

What's your reaction?

Related Posts

ತುರ್ತು ಗ್ರಾಮಸಭೆಗೆ ಬಾರದ ತಹಶೀಲ್ದಾರ್ | ಕರಿಮನೆ ಗ್ರಾಮಸ್ಥರ ಆಕ್ರೋಶ | ಅಧಿಕಾರಿಗಳ ಕೂಡಿ ಹಾಕಿ ಬಾಗಿಲು ಜಡಿದ ಗ್ರಾಮಸ್ಥರು

ತುರ್ತು ಗ್ರಾಮಸಭೆಗೆ ಬಾರದ ತಹಶೀಲ್ದಾರ್ | ಕರಿಮನೆ ಗ್ರಾಮಸ್ಥರ ಆಕ್ರೋಶ | ಅಧಿಕಾರಿಗಳ ಕೂಡಿ…

ನೂಲಿಗ್ಗೇರಿಯಲ್ಲಿ ವಿಜ್ಞಾನ ಮೇಳ ಕಲಿಕಾ ಹಬ್ಬದ ಸಂಭ್ರಮ ಮಕ್ಕಳ ಪ್ರತಿಭೆಯನ್ನು ಸಾಕ್ಷೀಕರಿಸಿದ ಕಾರ್ಯಕ್ರಮ

ನೂಲಿಗ್ಗೇರಿಯಲ್ಲಿ ವಿಜ್ಞಾನ ಮೇಳ ಕಲಿಕಾ ಹಬ್ಬದ ಸಂಭ್ರಮ ಮಕ್ಕಳ ಪ್ರತಿಭೆಯನ್ನು ಸಾಕ್ಷೀಕರಿಸಿದ…

ಇದು ಗುಡ್ಡಗಾಡು ಕಾರ್ ರೇಸ್ ಅಲ್ಲ..! ಮಾಸ್ತಿಕಟ್ಟೆ ತೀರ್ಥಹಳ್ಳಿ ಪ್ರಮುಖ ಹೆದ್ದಾರಿಯ ಕ್ರಾಸ್.!

ಇದು ಗುಡ್ಡಗಾಡು ಕಾರ್ ರೇಸ್ ಅಲ್ಲ..! ಮಾಸ್ತಿಕಟ್ಟೆ ತೀರ್ಥಹಳ್ಳಿ ಪ್ರಮುಖ ಹೆದ್ದಾರಿಯ ಕ್ರಾಸ್.!…

ಇಲ್ಲಿ ದೇಶ ಕಾಯುವ ಸೈನಿಕರಿಗೆ ಟೀ ಕಾಫೀ ಉಚಿತ: ಮೆಚ್ಚುಗೆಗೆ ಪಾತ್ರವಾದ ಉದಯಕುಮಾರ್ ಶೆಟ್ಟಿ ಕಳಕಳಿ

ಇಲ್ಲಿ ದೇಶ ಕಾಯುವ ಸೈನಿಕರಿಗೆ ಟೀ ಕಾಫೀ ಉಚಿತ: ಮೆಚ್ಚುಗೆಗೆ ಪಾತ್ರವಾದ ಉದಯಕುಮಾರ್ ಶೆಟ್ಟಿ…

1 of 43

Leave A Reply

Your email address will not be published. Required fields are marked *