
ಇಲ್ಲಿ ದೇಶ ಕಾಯುವ ಸೈನಿಕರಿಗೆ ಟೀ ಕಾಫೀ ಉಚಿತ: ಮೆಚ್ಚುಗೆಗೆ ಪಾತ್ರವಾದ ಉದಯಕುಮಾರ್ ಶೆಟ್ಟಿ ಕಳಕಳಿ
ಹೊಸನಗರ: ಹೊಸನಗರದಲ್ಲಿ ಸಸ್ಯಾಹಾರಿ ಹೋಟೆಲ್ ಉದ್ಯಮಕ್ಕೊಂದು ರಾಯಲ್ ಟಚ್ ನೀಡಿದ ಹೋಟೆಲ್ ಉದ್ಯಮಿ ಉದಯಕುಮಾರ್ ಶೆಟ್ಟಿ ಮತ್ತೊಂದು ಕಳಕಳಿಯ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಹಲವು ವರ್ಷಗಳ ಕಾಲ ಹೊಸನಗರ ಬಸ್ಸು ನಿಲ್ದಾಣದಲ್ಲಿ ಹೋಟೆಲ್ ನಡೆಸುವ ಮೂಲಕ ಹೊಸನಗರ ಭಾಗಕ್ಕೇ ಚಿರಪರಿಚಿತ ಆಗಿದ್ದ ಕುಂದಾಪುರ ತಾಲೂಕು ಗುಲ್ವಾಡಿ ನಿವಾಸಿ ಉದಯಕುಮಾರ್ ಶೆಟ್ಟಿ ಪಟ್ಟಣದ ಡಿಸಿಸಿ ಬ್ಯಾಂಕ್ ರಸ್ತೆಯಲ್ಲಿ ಶ್ರೀ ದುರ್ಗಾ ಗ್ರ್ಯಾಂಡ್ ಹೋಟೆಲ್ ನ್ನು ಹೊಸದಾಗಿ ಆರಂಭಿಸಿದ್ದಾರೆ. ಇಲ್ಲಿ ದೇಶ ಕಾಯುವ ಸೈನಿಕರಿಗೆ ಉಚಿತವಾಗಿ ಟೀ ಕಾಫಿ ನೀಡುವ ಘೋಷಣೆ ಮಾಡಿ.. ಅದನ್ನು ಕ್ಯಾಶ್ ಟೇಬಲ್ ಹಿಂದೆ ಬರೆಸುವ ಮೂಲಕ ಗಮನ ಸೆಳೆದಿದ್ದಾರೆ.
ಹೊಸನಗರ ದಲ್ಲಿ ಮೊದಲಬಾರಿಗೆ ಅಂತಾರಾಷ್ಟ್ರೀಯ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ, ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಸಂಗಡಿಗರ ಜೊತೆ ಸೇರಿ ಹಮ್ಮಿ ಕೊಳ್ಳುವ ಮೂಲಕ ಗಮನ ಸೆಳೆದಿದ್ದ ಶೆಟ್ರು ಇದೀಗ ದೇಶ ಕಾಯುವ ಸೈನಿಕರಿಗೆ ಉಚಿತ ವ್ಯವಸ್ಥೆಯ ಕಾಳಜಿಯ ಮೂಲಕ ಸೈನಿಕರಿಗೆ ಗೌರವ ಸಲ್ಲಿಸಿದ್ದಾರೆ.


