
ಹೊಸನಗರ: ಇಂದಿನಿಂದ ಹೊಸನಗರದ ಶಾಸಕರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನವೋದಯ ಪರೀಕ್ಷೆ ಬರೆಯುವ ಮಕ್ಕಳಿಗೆ ವಿಶೇಷ ತರಬೇತಿ ತರಗತಿಯನ್ನು ಆರಂಭಿಸ ಲಾಗಿದೆ
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಶ್ವಿನಿಕುಮಾರ್, ಸರ್ಕಾರಿ ಶಾಲೆಯಲ್ಲಿ ಓದುತ್ತಿರುವವರಿಗೆ ಮಾತ್ರ ಈ ಅವಕಾಶ ಮತ್ತು ಈ ವ್ಯವಸ್ಥೆ ಸಂಪೂರ್ಣ ಉಚಿತ ನುರಿತ ಆರು ಜನ ಶಿಕ್ಷಕರಿಂದ ತರಬೇತಿಯನ್ನು ನಡೆಸಲಾಗುವುದು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ವಿನಂತಿಸಿದರು.


ತರಗತಿಗೆ ಸೇರ ಬಯಸುವವರು ಪೋಷಕರೊಂದಿಗೆ ಮಕ್ಕಳು ಗುರುವಾರ ಮತ್ತು ಶುಕ್ರವಾರ ಸಂಜೆ 4:45 ರಿಂದ ಆರರ ಒಳಗೆ, ಶನಿವಾರ ಭಾನುವಾರ ಹತ್ತರಿಂದ ಹನ್ನೆರಡು ಗಂಟೆಯ ಒಳಗೆ ಬಂದು ತಮ್ಮ ಹೆಸರನ್ನು ನೋಂದಾವಣೆ ಮಾಡಿಸಿಕೊಳ್ಳಬೇಕಾಗಿ ವಿನಂತಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ 944 8189 433 ಸಂಪರ್ಕಿಸಿ
