
ನಿಟ್ಟೂರು ಆಸ್ಪತ್ರೆ ವಿರುದ್ಧ ದಾಳಿಯ ಹಿಂದೆ ದುರುದ್ದೇಶ! ಕೂಲಂಕುಶ ತನಿಖೆಗಾಗಿ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಒತ್ತಾಯ
ಹೊಸನಗರ: ಯಾವೊಬ್ಬ ರೋಗಿ ದೂರು ನೀಡದಿದ್ದರು ಕೂಡ ಅಧ್ಯಕ್ಷರು, ಸದಸ್ಯರು, ಪಿಡಿಒ ಸೇರಿದಂತೆ ಇಡೀ ಗ್ರಾಪಂ ದಿಢೀರ್ ದಾಳಿ ಮಾಡಿ ವೈದ್ಯರು ಅವಧಿ ಮುಗಿದ ಔಷಧಿ ಮಾತ್ರೆಗಳನ್ನು ವಿತರಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಇದರ ಹಿಂದೆ ದುರುದ್ದೇಶ ಇರುವ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ಕೂಲಂಕುಶ ತನಿಖೆ ಮಾಡಿ ಸರಿಯಾದ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರ ಹೆಸರಿನಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ನಟರಾಜ್ ರಿಗೆ ದೂರು ಸಲ್ಲಿಸಲಾಗಿದೆ.
ವೈದ್ಯರು ಗೈರುಹಾಜರಿ ಇರುವಾಗ ಏಕಾಏಕಿ ದಾಳಿ ನಡೆಸಿ ಆಕ್ರೋಶ ಹೊರಹಾಕಿರುವುದು ನೋಡಿದರೇ ವೈದ್ಯರನ್ನು ವರ್ಗಾವಣೆ ಮಾಡುವ ದುರುದ್ದೇಶ ಕಂಡು ಬರುತ್ತಿದೆ ಎಂಬ ಮಾತು ನಿಟ್ಟೂರು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಸ್ವಚ್ಚತೆಯನ್ನು ಕೆಳಹಂತದ ಸಿಬ್ಬಂದಿಗಳು ನಿರ್ವಹಿಸಬೇಕು. ಆದರೂ ಅದಕ್ಕು ಕೂಡ ವೈದ್ಯರನ್ನು ಗುರಿಯಾಗಿಸುವ ಹುನ್ನಾರ ಸ್ಪಷ್ಟವಾಗಿದೆ ಎಂದು ದೂರಲಾಗಿದೆ.


ನಿಟ್ಟೂರಿಗೆ ವೈದ್ಯರು ಬರೋದಿಲ್ಲ.. ಬಂದರೂ ಹೆಚ್ಚು ಕಾಲ ನಿಲ್ಲೋದಿಲ್ಲ.. ಇಂತಹ ಸಂದರ್ಭದಲ್ಲಿ ಈ ಘಟನೆ ಅನುಮಾನಕ್ಕೆ ಕಾರಣವಾಗಿದೆ. ಈ ಬಗ್ಗೆ ಕೂಲಂಕುಶ ತನಿಖೆ ಮಾಡಿ ಸತ್ಯಾಸತ್ಯತೆ ತಿಳಿಸಬೇಕು. ಸೂಕ್ತ ಕ್ರಮ ಕೈಗೊಳ್ಳುವಂತೆ ಮಣಿಕಂಠ, ಸುರೇಶ, ಕಾರ್ತಿಕ್ ಒತ್ತಾಯಿಸಿದ್ದಾರೆ.
