
ಹೈಸ್ಕೂಲು ಗೌರವ ಶಿಕ್ಷಕರಾಗಿದ್ದ ವ್ಯಕ್ತಿ ಜೆಸ್ಕಾಂ ಜಾಗೃತದಳದ ಎಸ್ಪಿಯಾಗಿ ವಯೋನಿವೃತ್ತಿ : ಹೊಸನಗರ ತಾಲೂಕು ರಾಮಚಂದ್ರಪುರ ಗ್ರಾಮದ ಕರುಣಾಕರ ಶೆಟ್ಟಿಯವರ ಗಮನ ಸೆಳೆದ ವೃತ್ತಿ ಸಾಧನೆ
ಹೊಸನಗರ: ಬದುಕಿಕೊಂದು ವೃತ್ತಿ ಬೇಕು.. ಆದರೆ ವೃತ್ತಿಯಲ್ಲೂ ಸಾಧನೆ ಅನ್ನುವಂತೆ ಬದುಕಿದವರು ವಿರಳ.. ಆದರೆ ಹೊಸನಗರ ತಾಲೂಕಿನ ರಾಮಚಂದ್ರಾಪುರ ಗ್ರಾಮದ ವ್ಯಕ್ತಿಯೋರ್ವರ ವೃತ್ತಿ ಸಾಧನೆ ಅನನ್ಯವಾಗಿದೆ.
ಹೌದು ರಾಮಚಂದ್ರಾಪುರ ಗ್ರಾಮದಲ್ಲಿ ಜನಿಸಿದ ಜೆ.ಎಂ.ಕರುಣಾಕರ ಶೆಟ್ಟಿಯವರ ವೃತ್ತಿ ಬದುಕಿನ ಸಾಧನೆ ಇದು.


ರಾಮಚಂದ್ರಾಪುರದಲ್ಲಿ ಮಂಜಯ್ಯ ಶೆಟ್ಟಿ, ಸಣ್ಣಮ್ಮ ಶೆಡ್ತಿ ಮಗನಾಗಿ ಸೆ.2, 1964ರಲ್ಲಿ ಜನಿಸಿದ ಕರುಣಾಕರ ಶೆಟ್ಟಿ BSc Bed ಪದವೀಧರರಾಗಿದ್ದು ಆರಂಭದಲ್ಲಿ ಕಾನುಗೋಡು ಸರ್ಕಾರಿ ಪ್ರೌಢಶಾಲೆಯಲ್ಲಿ ಅಲ್ಪ ಸಂಭಾವನೆಗೆ ಗೌರವ ಶಿಕ್ಷಕರಾಗಿ ಕೆಲಸ ಮಾಡಿದ್ದರು.
ಪೊಲೀಸ್ ಇಲಾಖೆಗೆ ಪ್ರವೇಶ:
1994ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡ ಅವರು, ಬುನಾದಿ ತರಭೇತಿ ಪಡೆದ ನಂತರ ಪ್ರೊಬೇಶನರ್ ಆಗಿ ವಿಜಯಪುರ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿದರು.
ಬಳಿಕ ಬಸವನಬಾಗೇವಾಡಿ, ಸಿಂದಗಿ, ಸಂಕೇಶ್ವರ ಠಾಣೆಯಲ್ಲಿ ಪಿಎಸ್ಐ ಆಗಿ ಕಾರ್ಯನಿರ್ವಹಿಸಿದರು. 2002ರಲ್ಲಿ ಮುಂಬಡ್ತಿ ಪಡೆದು ಮೈಸೂರು ಲೋಕಾಯುಕ್ತ, ಸಿಪಿಐ ಆಗಿ ಗೋಕಾಕ್, ಖಡೇ ಬಜಾರ್, ಸುಳ್ಯ, ಶಿರಸಿ, ನಿಪ್ಪಾಣಿ, ಪಿಟಿಎಸ್ ಖಾನಾಪುರ, ಲೋಕಾಯುಕ್ತ ಬೆಳಗಾವಿಯಲ್ಲಿ ಕೂಡ ಕಾರ್ಯನಿರ್ವಹಿದರು.
2015ರಲ್ಲಿ DSP ಆಗಿ ಮುಂಭಡ್ತಿ ಪಡೆದು ಲೋಕಾಯುಕ್ತ ಬೆಳಗಾವಿ, ಬೈಲಹೊಂಗಲ, DCRB ಬೆಳಗಾವಿ, ACB ಬೆಳಗಾವಿ, ಬಸವನ ಬಾಗೇವಾಡಿಯಲ್ಲಿ ಕರ್ತವ್ಯ ನಿರ್ವಹಿಸಿದರು.
2023 ರಲ್ಲಿ ಪೊಲೀಸ್ ಅಧೀಕ್ಷರಾಗಿ ಮುಂಬಡ್ತಿ ಪಡೆದು ಕಲಬುರಗಿ ಜೆಸ್ಕಾಂ ಜಾಗೃತದಳದ SP ಆಗಿ ಕರ್ತವ್ಯ ನಿರ್ವಹಿಸಿ ವಯೋ ನಿವೃತ್ತಿ ಹೊಂದಿದ್ದಾರೆ.
ಹಳ್ಳಿಯಲ್ಲಿ ಜನಿಸಿ 30 ವರ್ಷ 4 ತಿಂಗಳು ಸುಧೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ಜೆ.ಎಂ.ಕರುಣಾಕರ ಶೆಟ್ಟಿ ಹೊಸನಗರ ತಾಲೂಕಿನ ಹೆಮ್ಮೆಯ ವೃತ್ತಿ ಸಾಧಕರಾಗಿ ಹೊರಹೊಮ್ಮಿದ್ದಾರೆ.
ನಮ್ಮ ಹೆಮ್ಮೆ:
ಜೆ.ಎಂ.ಕರುಣಾಕರ ಶೆಟ್ಟಿ ಶಿಕ್ಷಕರಾಗಿ ಸೇವೆ ಸಲ್ಲಿಸುವ ತುಡಿತ ಹೊಂದಿದ್ದರು. Bsc, Bed ಬಳಿಕ ಕಾನುಗೋಡು ಸರ್ಕಾರಿ ಪ್ರೌಢಶಾಲೆಯಲ್ಲಿ ಗೌರವ ಶಿಕ್ಷಕರಾಗಿ ಕೆಲಸ ನಿರ್ವಹಿಸಿದ್ದರು. ಆದರೆ ಪೊಲೀಸ್ ಇಲಾಖೆ ಅವರನ್ನು ಕೈಬೀಸಿ ಕರೆಯಿತು. ಅಲ್ಲೂ ಕೂಡ ತಮ್ಮ ಕರ್ತವ್ಯ ನಿಷ್ಠೆ ತೋರಿದ ಅವರು ಪೊಲೀಸ್ ಇಲಾಖೆ, ಜನರು ಗೌರವಿಸುವ ರೀತಿಯಲ್ಲಿ ಉನ್ನತ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ನನಗೂ ಕೂಡ ಶಿಕ್ಷಕರಾಗಿದ್ದ ಅವರು ತಮ್ಮ ವೃತ್ತಿ ಸಾಧನೆ ಮೂಲಕ ಶಿವಮೊಗ್ಗ ಜಿಲ್ಲೆಗೆ ಕೀರ್ತಿ ತಂದಿದ್ದಾರೆ ಎಂದು ಕರಿಮನೆ ಗ್ರಾಪಂ ಮಾಜಿ ಅಧ್ಯಕ್ಷ, ಶಿವಪ್ಪನಾಯಕ ಸೌಹಾರ್ದ ಸಹಕಾರಿ ಅಧ್ಯಕ್ಷ ಎನ್.ವೈ.ಸುರೇಶ್ ಅವರ ಸೇವೆಯನ್ನು ಸಲ್ಲಿಸಿದ್ದಾರೆ.
