ಪ್ರಮುಖ ಸುದ್ದಿHomeತೀರ್ಥಹಳ್ಳಿರಾಜ್ಯಶಿಕಾರಿಪುರಶಿರಾಳಕೊಪ್ಪ

ಬೆಂಗಳೂರಿನ ವಿಧಾನಸೌಧ ಪುಸ್ತಕ ಮೇಳದಲ್ಲಿ ಹೊಸನಗರ ತಾಲ್ಲೂಕಿನ ಏಕೈಕ ಪುಸ್ತಕ ಪ್ರಕಾಶನ ಬೆನಕ ಬುಕ್ಸ್‌ ಬ್ಯಾಂಕ್‌ ಪುಸ್ತಕ ಮಳಿಗೆ

ಬೆಂಗಳೂರಿನ ವಿಧಾನಸೌಧ ಪುಸ್ತಕ ಮೇಳದಲ್ಲಿ ಹೊಸನಗರ ತಾಲ್ಲೂಕಿನ ಏಕೈಕ ಪುಸ್ತಕ ಪ್ರಕಾಶನ ಬೆನಕ ಬುಕ್ಸ್‌ ಬ್ಯಾಂಕ್‌ ಪುಸ್ತಕ ಮಳಿಗೆ

ಹೊಸನಗರ : ಬೆಂಗಳೂರಿನ ವಿಧಾನಸೌಧ ಆವರಣದಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿರುವ ’ವಿಧಾನಸಭೆ ಪುಸ್ತಕ ಮೇಳ – 2025’ರಲ್ಲಿ ತಾಲ್ಲೂಕಿನ ಮೊಟ್ಟಮೊದಲ ಅಧಿಕೃತ ಹಾಗೂ ಏಕೈಕ ಪುಸ್ತಕ ಪ್ರಕಾಶನ ಸಂಸ್ಥೆಯಾದ ಕೋಡೂರು ಯಳಗಲ್ಲಿನ ಬೆನಕ ಬುಕ್ಸ್‌ ಬ್ಯಾಂಕ್‌ ಪ್ರಕಾಶನ ಸಂಸ್ಥೆ ತನ್ನ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಯನ್ನು ತೆರೆದಿದೆ.
ವಿಧಾನಸೌಧದ ಆವರಣದಲ್ಲಿ ಫೆಬ್ರವರಿ 27ರಿಂದ ಆರಂಭವಾಗಿರುವ ‘ಕರ್ನಾಟಕ ವಿಧಾನಸಭೆ ಪುಸ್ತಕ ಮೇಳ – 2025’ ಮಾರ್ಚ್‌ 3ನೇ ತಾರೀಖಿನವರೆಗೂ ನಡೆಯಲಿದ್ದು, ಮಾರ್ಚ್‌ 2ನೇ ತಾರೀಖಿನವರೆಗೆ ಸಾರ್ವಜನಿಕರಿಗೆ ಪುಸ್ತಕ ಮಳಿಗೆಗಳಿಗೆ ಹಾಗೂ ವಿಧಾನಸೌಧದ ಆವರಣಕ್ಕೆ ಉಚಿತ ಪ್ರವೇಶವಿರುತ್ತದೆ.
ತಾಲ್ಲೂಕಿನ ಮೊಟ್ಟಮೊದಲ ಅಧಿಕೃತ ಹಾಗೂ ಏಕೈಕ ಪುಸ್ತಕ ಪ್ರಕಾಶನ ಸಂಸ್ಥೆಯಾದ ಕೋಡೂರು ಗ್ರಾಮ ಯಳಗಲ್ಲಿನ ಬೆನಕ ಬುಕ್ಸ್‌ ಬ್ಯಾಂಕ್‌, ಮಳಿಗೆ ತೆರೆಯಲು ಸಲ್ಲಿಕೆಯಾಗಿದ್ದ ೪೦೦ಕ್ಕೂ ಹೆಚ್ಚು ಅರ್ಜಿಗಳಲ್ಲಿ ಮಳಿಗೆಯನ್ನು ತೆರೆಯಲು ಆಯ್ಕೆಯಾಗಿದ್ದು, ಮಳಿಗೆ ಸಂಖ್ಯೆ 37ರಲ್ಲಿ ಬೆನಕ ಬುಕ್ಸ್‌ ಬ್ಯಾಂಕ್ ಪ್ರಕಾಶನ ಸಂಸ್ಥೆ ಈವರೆಗೆ ಪ್ರಕಟಿಸಿದ 100ಕ್ಕೂ ಹೆಚ್ಚು ಕೃತಿಗಳು ವಿಶೇಷ ರಿಯಾಯಿತಿ ದರದಲ್ಲಿ ಮಾರ್ಚ್‌ 3ರವರೆಗೂ ಮಾರಾಟಕ್ಕೆ ಲಭ್ಯವಿದೆ. 2010ರಲ್ಲಿ ಆರಂಭಗೊಂಡ ಬೆನಕ ಬುಕ್ಸ್ ಬ್ಯಾಂಕ್ ಪ್ರಕಾಶನ ಸಂಸ್ಥೆ ನಾಡಿನ ಬಹುತೇಕ ಹೊಸ ಬರಹಗಾರರ ಕಥೆ, ಕವನ, ಕಾದಂಬರಿ, ಲೇಖನ, ಅಂಕಣಬರಹ, ಜೀವನಕಥನ ಸೇರಿದಂತೆ ಸಾಹಿತ್ಯದ ವಿವಿಧ ಪ್ರಕಾರದ ನೂರಕ್ಕೂ ಅಧಿಕ ಕೃತಿಗಳನ್ನು ಈವರೆಗೆ ಪ್ರಕಟಿಸಿದೆ. ಜೊತೆಗೆ ಎರಡು ಇಂಗ್ಲೀಷ್ ಕೃತಿಗಳನ್ನು ಕೂಡಾ ಪ್ರಕಟಿಸಿದೆ. ಹೆಚ್ಚಿನ ಮಾಹಿತಿಗಾಗಿ ಪ್ರಕಾಶನ ಸಂಸ್ಥೆಯ ಮೊಬೈಲ್ ಸಂಖ್ಯೆ 73384 37666ನ್ನು ಸಂಪರ್ಕಿಸಬಹುದು.

ಸಮಾಜದಲ್ಲಿಯ ಸುದ್ದಿಗಳನ್ನು ಆರಿಸಿ ಮತ್ತೆ ಸಮಾಜಕ್ಕೆ ನೀಡುವ ಒಂದು ಸಣ್ಣ ಪ್ರಯತ್ನ.. ಆ ಕಾರ್ಯದಲ್ಲಿ ಖಚಿತತೆ, ವಿಶ್ವಾಸಾರ್ಹತೆ, ಸಮಸ್ಯೆಯ ಬಿಂಬ, ಬಿಂಬಿತ ಸಮಸ್ಯೆಗೆ ಪರಿಹಾರದ ಯತ್ನ.. ಆ ಯತ್ನದಲ್ಲಿ ದಕ್ಕಿದ ಒಂದಷ್ಟು ಯಶಸ್ಸು.. ಇದರಲ್ಲಿ‌ ನಿರಂತರತೆ ಕಾಯ್ದುಕೊಳ್ಳುವ ಆಶಯ.. ಅಷ್ಟೆ..

What's your reaction?

Related Posts

ನೂಲಿಗ್ಗೇರಿಯಲ್ಲಿ ವಿಜ್ಞಾನ ಮೇಳ ಕಲಿಕಾ ಹಬ್ಬದ ಸಂಭ್ರಮ ಮಕ್ಕಳ ಪ್ರತಿಭೆಯನ್ನು ಸಾಕ್ಷೀಕರಿಸಿದ ಕಾರ್ಯಕ್ರಮ

ನೂಲಿಗ್ಗೇರಿಯಲ್ಲಿ ವಿಜ್ಞಾನ ಮೇಳ ಕಲಿಕಾ ಹಬ್ಬದ ಸಂಭ್ರಮ ಮಕ್ಕಳ ಪ್ರತಿಭೆಯನ್ನು ಸಾಕ್ಷೀಕರಿಸಿದ…

ಇದು ಗುಡ್ಡಗಾಡು ಕಾರ್ ರೇಸ್ ಅಲ್ಲ..! ಮಾಸ್ತಿಕಟ್ಟೆ ತೀರ್ಥಹಳ್ಳಿ ಪ್ರಮುಖ ಹೆದ್ದಾರಿಯ ಕ್ರಾಸ್.!

ಇದು ಗುಡ್ಡಗಾಡು ಕಾರ್ ರೇಸ್ ಅಲ್ಲ..! ಮಾಸ್ತಿಕಟ್ಟೆ ತೀರ್ಥಹಳ್ಳಿ ಪ್ರಮುಖ ಹೆದ್ದಾರಿಯ ಕ್ರಾಸ್.!…

ಇಲ್ಲಿ ದೇಶ ಕಾಯುವ ಸೈನಿಕರಿಗೆ ಟೀ ಕಾಫೀ ಉಚಿತ: ಮೆಚ್ಚುಗೆಗೆ ಪಾತ್ರವಾದ ಉದಯಕುಮಾರ್ ಶೆಟ್ಟಿ ಕಳಕಳಿ

ಇಲ್ಲಿ ದೇಶ ಕಾಯುವ ಸೈನಿಕರಿಗೆ ಟೀ ಕಾಫೀ ಉಚಿತ: ಮೆಚ್ಚುಗೆಗೆ ಪಾತ್ರವಾದ ಉದಯಕುಮಾರ್ ಶೆಟ್ಟಿ…

ವಕೀಲರ ಸಮಯಪ್ರಜ್ಞೆ ಕಾರ್ಯ | ಕೆನರಾ ಬ್ಯಾಂಕ್ ಸ್ಪಂದನೆ | ಜೈಲು ಸೇರೋದು ತಪ್ಪಿಸಿಕೊಂಡ ಗ್ರಾಹಕ!

ವಕೀಲರ ಸಮಯಪ್ರಜ್ಞೆ ಕಾರ್ಯ | ಕೆನರಾ ಬ್ಯಾಂಕ್ ಸ್ಪಂದನೆ | ಜೈಲು ಸೇರೋದು ತಪ್ಪಿಸಿಕೊಂಡ ಗ್ರಾಹಕ!…

ಕೊಲ್ಲೂರು ಹೆದ್ದಾರಿ ಎಬಗೋಡು ಪಕ್ಕದಲ್ಲೇ ನಿಧಿ ಶೋಧನೆ : ಶಿವಲಿಂಗದ ಪಕ್ಕದಲ್ಲಿ 4 ಅಡಿಯಷ್ಟು ಗುಂಡಿ ತೋಡಿದ ನಿಧಿ ಚೋರರು

ಕೊಲ್ಲೂರು ಹೆದ್ದಾರಿ ಎಬಗೋಡು ಪಕ್ಕದಲ್ಲೇ ನಿಧಿ ಶೋಧನೆ : ಶಿವಲಿಂಗದ ಪಕ್ಕದಲ್ಲಿ 4 ಅಡಿಯಷ್ಟು…

1 of 42

Leave A Reply

Your email address will not be published. Required fields are marked *