
SONALE| ಮಳೆಗೆ ಕುಸಿದು ಬಿದ್ದ ಮನೆಗೋಡೆ
ಹೊಸನಗರ: ಗುರುವಾರ ರಾತ್ರಿ ಸುರಿದ ಬಾರೀ ಮಳೆಗೆ ತಾಲೂಕಿನ ಸೊನಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಳಗಿ ಗ್ರಾಮದ ರತ್ನಮ್ಮ ಕೋಂ ಅಶೋಕ ಎಂಬ ಕೂಲಿ ಕಾರ್ಮಿಕ ಕುಟುಂಬದ ವಾಸದ ಮನೆಯ ಅಡಿಗೆ ಕೋಣೆಯ ಗೋಡೆ ಕುಸಿದಿದ್ದೆ. ಸ್ಥಳಕ್ಕೆ ಗ್ರಾಮ ಪಂಚಾಯತಿ ಸದಸ್ಯ ಕೊಳಗಿ ಸತೀಶ್, ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸಂತ್ರಸ್ತರಿಗೆ ತಾತ್ಕಾಲಿಕ ನೆರವು ಒದಗಿಸಿದ್ದಾರೆ
