
ಇದು ವಯನಾಡ್ ಮಾದರಿಯಾ?
ಬಾರೀ ಪ್ರಮಾಣದಲ್ಲಿ ಭೂಕುಸಿತ ಭೀತಿಯಲ್ಲಿ.. 200 ಮೀ ಉದ್ದದ ಬಿರುಕು! ಈ ಭಯಾನಕ ದೃಶ್ಯ ಎಲ್ಲಿಯದು ಗೊತ್ತಾ?
ಹೊಸನಗರ: ಸುಮಾರು 200 ಮೀಟರ್ ಕುಸಿಯುವ ಭೀತಿ ಎದುರಾಗಿದೆ. ಈಗಾಗಲೇ ರಸ್ತೆ ಉದ್ದಕ್ಕು ಭಯಾನಕ ಬಿರುಕು ಬಿಟ್ಟಿದೆ.. ಕುಸಿದರೇ ಮಾರ್ಗ ಕಡಿತ, ಜಮೀನು ಕಳೆದುಕೊಳ್ಳುವ ಭೀತಿ..
ಹೌದು ಅಪಾಯಕಾರಿಯಾಗಿ ಭೂಮಿ ಕುಸಿಯುತ್ತಿರುವುದು ನಗರ ಹೋಬಳಿ ಅರಮನೆಕೊಪ್ಪ ಗ್ರಾಪಂ ವ್ಯಾಪ್ತಿಯ ಕುಂದಗಲ್ಲು ಭಾಗದಲ್ಲಿ.. ಎರಡು ದಿನದ ಹಿಂದೆ ಸಣ್ಣ ಬಿರುಕು ಕಾಣಿಸಿಕೊಂಡಿದ್ದ ಇಲ್ಲಿ ಬಾರಿ ಬಿರುಕು ಕಂಡಿದೆ..ಮಾತ್ರವಲ್ಲ ಭೂಮಿ ಕುಸಿಯಲು ಆರಂಭಿಸಿದೆ.
ಇದೇ ಮಾರ್ಗದಲ್ಲಿ ಶಾಲಾ ಕಾಲೇಜು ಮಕ್ಕಳು ಓಡಾಡಬೇಕು.. ಮಾರ್ಗ ಕುಸಿದರೇ.. ಜಮೀನು ಕಳೆದುಕೊಳ್ಳಬೇಕು ಮಾತ್ರವಲ್ಲ ಮುಖ್ಯಮಾರ್ಗಕ್ಕೆ ಎರಡು ಕಿಮೀ ನಡೆದೇ ಹೋಗಬೇಕಾದ ಸ್ಥಿತಿ ಇದೆ..


ಈ ಪ್ರಮಾಣದ ಭೂಕುಸಿತ ಕಂಡುಬರುತ್ತಿರುವುದು..ಕುಂದಗಲ್ಲು ಮಾತ್ರವಲ್ಲ ಇಡೀ ನಗರ ಹೋಬಳಿಯನ್ನೇ ಭಯಕ್ಕೆ ದೂಡಿದೆ. ಜಿಲ್ಲಾಡಳಿತ ತುರ್ತಾಗಿ ಸ್ಪಂದಿಸಬೇಕಿದೆ.
