
HOSANAGARA | ಕಲ್ಲುಹಳ್ಳ ಸೇತುವೆಯ ಪಿಚ್ಚಿಂಗ್ ಕುಸಿತ : ಇದಕ್ಕೆ ಕಾರಣವಾಗಿದ್ದು.. ಬಾರೀ ಮಳೆಯೋ.. ತರಾತುರಿ ಅವೈಜ್ಞಾನಿಕ ಕಾಮಗಾರಿಯೋ? ಇದು ರಾಣೇಬೆನ್ನೂರು ಬೈಂದೂರು ರಾಷ್ಟ್ರೀಯ ಹೆದ್ದಾರಿಯ ಸೇತುವೆ
ಹೊಸನಗರ: ಮಲೆನಾಡಿನಾಧ್ಯಂತ ಬಾರೀ ಸುರಿಯುತ್ತಿದ್ದು ಹೊಸನಗರದ ಕಲ್ಲುಹಳ್ಳ ಸೇತುವೆಯ ಪಿಚ್ಚಿಂಗ್ ಕುಸಿತ ಕಂಡಿದೆ. ಬಾರೀ ಮಳೆಗೆ ಪಿಚ್ಚಿಂಗ್ ಕುಸಿಯಿತೋ.. ಇಲ್ಲ ಗಡಿಬಿಡಿಯಲ್ಲಿ ನಡೆಸಿದ ಅವೈಜ್ಞಾನಿಕ ಕಾಮಗಾರಿ ಕಾರಣವೋ ಎಂಬ ಅನುಮಾನ ಹುಟ್ಟುಹಾಕಿದೆ.
ರಾಣೇಬೆನ್ನೂರು ಬೈಂದೂರು ರಾಷ್ಟ್ರೀಯ ಹೆದ್ದಾರಿ (766c)ಯ ಸೇತುವೆಯಾಗಿದ್ದು ಇತ್ತೀಚೆಗೆ ನಿರ್ಮಾಣ ಕಂಡ ಹೊಸ ಸೇತುವೆಯಾಗಿದೆ.


ಸೇತುವೆಯ ಎರಡು ಬದಿ ಮಣ್ಣು ತುಂಬಿ ಪಿಚ್ಚಿಂಗ್ ಕಾಮಗಾರಿ ನಡೆಸಲಾಗಿದೆ. ಸುರಿದ ಮಳೆಗೆ ಮಣ್ಣು ಕುಸಿದಿದ್ದು ಅಪಾಯದ ಆತಂಕಕ್ಕೆ ಎಡೆ ಮಾಡಿದೆ.
ಸೇತುವೆ ಕಟ್ಟಿ ಆಕಡೆ, ಈಕಡೆ ಮಣ್ಣನ್ನ ಏರಿಸಿದ್ದು. ಅದು ಇನ್ನೂ ಸೆಟ್ಟಿಂಗ್ ಆಗುವ ಮೊದಲೇ ಜೆಸಿಬಿ ಹಿಟಾಚಿನಲ್ಲಿ ಲೆವೆಲ್ ಹೊಡೆಯಲಾಗಿತ್ತು, ಅಲ್ಲದೇ ಡ್ರೈ ಮಣ್ಣಿಗೆ ಪಿಚ್ಚಿಂಗ್ ಕಟ್ಟಿರುತ್ತಾರೆ. ಈಗ ನೀರು ಇಳಿದ ಹಾಗೆಲ್ಲಾ, ಮಣ್ಣು ಸೆಟ್ಟಿಂಗ್ ಆಗದ ಕಾರಣ ಕುಸಿದಿದೆ. ಇದಕ್ಕೂ ಹೆಚ್ಚು ಮಳೆಗೂ ಏನು ಸಂಬಂಧವಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ.
ಒಟ್ಟಾರೆ ಮಳೆಯೋ.. ಅವೈಜ್ಞಾನಿಕ ಕಾಮಗಾರಿಯೋ ಸೇತುವೆಯ ಪಿಚ್ಚಿಂಗ್ ಕುಸಿದು ಅಪಾಯಕ್ಕೆ ಆಹ್ವಾನ ಮಾಡಿದೆ. ಈ ಸಂಬಂಧ ತುರ್ತು ಕ್ರಮ ಅನಿವಾರ್ಯ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
