
ಹೊಳಲ್ಕೆರೆ ಭೀಕ*ರ ಅಪಘಾ*ತ | ಒಂದೇ ಕುಟುಂಬದ ನಾಲ್ವರ ಸಾ*ವು!
ಹೊಳಲ್ಕೆರೆ: ತಾಲೂಕಿನ ಚಿತ್ರಹಳ್ಳಿ ಶಿವಗಂಗಾ ಮದ್ಯದ ಪೆಟ್ರೋಲ್ ಬಂಕ್ ಸಮೀಪ ನಡೆದಿರುವ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಎರಡು ಮಕ್ಕಳು ಸೇರಿ ನಾಲ್ವರು ಸ್ಥಳದಲ್ಲಿ ಸಾವು ಕಂಡಿದ್ದಾರೆ.
ಹೊಳಲ್ಕೆರೆ ತಾಲೂಕಿನ ಉದ್ಯಮಿ ಹರೇನಹಳ್ಳಿ ತಿಪ್ಪೇಸ್ವಾಮಿ ಇವರ ಹೆಂಡತಿ ಗಂಗಮ್ಮ, ಮಗನಾದ ಯಶವಂತನ ಹೆಂಡತಿ ಕಾವ್ಯ, ಇಬ್ಬರೂ ಮೊಮ್ಮಕ್ಕಳು ಸ್ಥಳದಲ್ಲೇ ಸಾವನಪ್ಪಿದ ದುರ್ಧೈವಿಗಳು.


ಮಗ ಯಶವಂತ ತೀವ್ರವಾಗಿ ಗಾಯಗೊಂಡಿದ್ದು ಚಿತ್ರದುರ್ಗ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಚಿತ್ರಳ್ಳಿ ಕಡೆಯಿಂದ ಹೊಳಲ್ಕೆರೆಗೆ ಬರುತ್ತಿದ್ದ ಟ್ರಾಕ್ಟರ್ ಹಾಗೂ ಚಿತ್ರದುರ್ಗದಿಂದ ಬರುತ್ತಿದ್ದ ಹೊಳಲ್ಕೆರೆಗೆ ಬರುತ್ತಿದ್ದ ಕಾರ್ ನಡುವೆ ಉಂಟಾದ ಅಪಘಾತ ನಡೆದಿದೆ.
