![](https://goodmorningkarnataka.com/wp-content/uploads/2022/10/Sun-Time-electronics-hosanagara-ad.jpg)
-
SAGAR| ಬರುವೆ ಗ್ರಾಮದ ಮನೆಯೊಂದರಲ್ಲಿ ಅಕ್ರಮವಾಗಿಟ್ಟಿದ್ದ ಮದ್ಯ ವಶ| ಆರೋಪಿ ವಶ | ಸಾಗರ ಅಬಕಾರಿ ಇನ್ಸಪೆಕ್ಟರ್ ಸಂದೀಪ್ ನೇತೃತ್ವದಲ್ಲಿ ದಾಳಿ
ಸಾಗರ: ಅಬಕಾರಿ ಇಲಾಖೆಯ ಇನ್ಸಪೆಕ್ಟರ್ (Inspector) ನೇತೃತ್ವದಲ್ಲಿ ದಾಳಿ ನಡೆಸಿ ಮನೆಯಲ್ಲಿ ಅಕ್ರಮವಾಗಿ ಇರಿಸಿದ್ದ ಮದ್ಯವನ್ನು ವಶ ಪಡಿಸಿಕೊಂಡ ಘಟನೆ ಸಾಗರ ತಾಲೂಕಿನ ಬರುವೆ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದು ಬರುವೆ ಗ್ರಾಮದ ಗಣಪತಿ ಎಂಬುವವರ ಮನೆಯಲ್ಲಿದ್ದ 1.8 ಲೀ ವಿಸ್ಕಿ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.
ಮದ್ಯವನ್ನು ಅಕ್ರಮವಾಗಿ ಇರಿಸಿದ್ದ ಆರೋಪದ ಮೇಲೆ ಗಣಪತಿ ಎಂಬುವವರನ್ನು ವಶಕ್ಕೆ ತೆಗೆದುಕೊಂಡು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
![](https://goodmorningkarnataka.com/wp-content/uploads/2022/11/IMG-20221121-WA0002.jpg)
![](https://goodmorningkarnataka.com/wp-content/uploads/2022/10/Sun-Time-electronics-hosanagara-ad-3.jpg)
ಕಾರ್ಯಾಚರಣೆಯಲ್ಲಿ ಸಬ್ ಇನ್ಸಪೆಕ್ಟರ್ (Sub Inspector), ಅಬಕಾರಿ ಸಿಬ್ಬಂದಿ ಮಹಾಬಲೇಶ್, ಚಾಲಕ ಗಣಪತಿ ಭಾಗವಹಿಸಿದ್ದರು.
![](https://goodmorningkarnataka.com/wp-content/uploads/2022/10/Sun-Time-electronics-hosanagara-ad-4.jpg)