
ಹೊಸನಗರ, ತೀರ್ಥಹಳ್ಳಿಯನ್ನು ಹಿಮ್ಮೆಟ್ಟಿಸಿದ ಸಾಗರ ಮಳೆ: ಜುಲೈ ತಿಂಗಳ ಈವರೆಗೆ ಮಳೆಯ ಪ್ರಮಾಣ ಎಷ್ಟು ಗೊತ್ತಾ?
ಶಿವಮೊಗ್ಗ: ಮಲೆನಾಡಿನಾಧ್ಯಂತ ವ್ಯಾಪಕ ಮಳೆ ಆಗುತ್ತಿದ್ದು, ಶಾಲಾ ಕಾಲೇಜುಗಳಿಗೆ ರಜೆ ಜೊತೆಗೆ ಅಲ್ಲಲ್ಲಿ ಜನ ಜೀವನವೂ ಅಸ್ತವ್ಯಸ್ತಗೊಂಡಿದೆ.
ಈ ನಡುವೆ ಜಿಲ್ಲೆಯ ಮೂರು ತಾಲೂಕಿನಲ್ಲಿ ಬಾರೀ ಮಳೆಯಾಗಿದ್ದು, ಜುಲೈ ತಿಂಗಳ ಮಳೆ ಪ್ರಮಾಣ ಗಮನಿಸಿದರೆ ಸಾಗರ ತಾಲೂಕು ಪ್ರಥಮ ಸ್ಥಾನ ಪಡೆದುಕೊಂಡರೇ, ಹೊಸನಗರ ಮತ್ತು ತೀರ್ಥಹಳ್ಳಿ ತಾಲೂಕು ಕ್ರಮವಾಗಿ ಎರಡು, ಮೂರನೇ ಸ್ಥಾನದಲ್ಲಿದೆ.


ಶಿವಮೊಗ್ಗ ಜಿಲ್ಲೆಯ ಎಲ್ಲಾ ತಾಲೂಕುಗಳ ಮಳೆ ವಿವರ
ಜು.18ರ ವರೆಗೆ ಸಾಗರ ತಾಲೂಕಿನ ಸರಾಸರಿ 974.20 ಮಿಮೀ ಮಳೆ ಬಿದ್ದಿದೆ. ಹೊಸನಗರ ತಾಲೂಕಿನಲ್ಲಿ 919.20 ಮಿಮೀ, ತೀರ್ಥಹಳ್ಳಿ ತಾಲೂಕಿನಲ್ಲಿ ಸರಾಸರಿ 842.90 ಮಿಮೀ ಮಳೆಯಾಗಿದೆ. ಸೊರಬ ತಾಲೂಕಿನಲ್ಲಿ 379.50 ಮಿಮೀ, ಶಿಕಾರಿಪು ತಾಲೂಕಿನಲ್ಲಿ 257.30 ಮಿಮೀ, ಶಿವಮೊಗ್ಗ ತಾಲೂಕಿನಲ್ಲಿ 240.20 ಮಿಮೀ, ಭದ್ರಾವತಿ ತಾಲೂಕಿನಲ್ಲಿ ಅತೀ ಕಡಿಮೆ 145.10 ಮಿಮೀ ಮಳೆಯಾಗಿದೆ.
ವಾಡಿಕೆ ಮಳೆಯನ್ನು ಮೀರಿಸಿದ ಈಬಾರಿಯ ವರ್ಷಧಾರೆ
ವಿಶೇಷ ಎಂದರೆ ಶಿವಮೊಗ್ಗ ತಾಲೂಕಿನಲ್ಲಿ ಈವರೆಗೆ ಮಳೆ ಬಿದ್ದ ಪ್ರಮಾಣ ಗಮನಿಸಿದರೇ ತಿಂಗಳ ವಾಡಿಕೆ ಮಳೆ (204.70ಮಿಮೀ) ಯನ್ನು ಮೀರಿಸಿ 36ಮಿಮೀ ಹೆಚ್ಚಿನ ಮಳೆಯಾಗಿದೆ. ಶಿಕಾರಿಪುರ ತಾಲೂಕಿನಲ್ಲಿ ವಾಡಿಕೆ ಮಳೆ ( 257.70 ಮಿಮೀ) ಯನ್ನು ಈಗಾಗಲೇ ಸರಿಗಟ್ಟಿದೆ. ಸಾಗರ ತಾಲೂಕಿನಲ್ಲಿ ಜುಲೈ ತಿಂಗಳ ವಾಡಿಕೆ ಮಳೆ (847.70ಮಿಮೀ) ಆಗಿದ್ದು 13 ದಿನ ಬಾಕಿ ಇರುವಂತೆಯೇ ವಾಡಿಕೆ ಮಳೆಗಿಂತ 127 ಮಿಮೀ ಹೆಚ್ಚು ಸುರಿದಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಸರಾಸರಿ 536.91ಮಿಮೀ ಮಳೆಯಾಗಿದೆ.
