ಸಾಗರತಾಲ್ಲೂಕುಸೊರಬಹೊಸನಗರ

ಸಾಗರ ಶ್ರೀಗರದಲ್ಲಿ ಗಮನೆಳೆದ ಬೆಂಕಿಯಾಟ | ಶ್ರೀ ಗಣಪತಿಯ ಅದ್ದೂರಿ ವಿಸರ್ಜನೆ

ಸಾಗರ:  ನಗರದ 8ನೇ ವಾರ್ಡ್ ಶ್ರೀನಗರದಲ್ಲಿ 46ನೇ ವರ್ಷದ ಗಣೇಶ ವಿಸರ್ಜನೆ ಗುರುವಾರ ಅದ್ದೂರಿಯಾಗಿ ನಡೆಯಿತು…
ಕಳೆದ ಭಾನುವಾರ ಗಣಹೋಮ , ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕ್ರೀಡಾ ಚಟುವಟಿಕೆಯನ್ನ ಶ್ರೀನಗರ ಯುವಜನ ಸಂಘ ಹಾಗೂ ಕ್ರೀಡಾ ಮತ್ತು ಸಾಂಸ್ಕೃತಿ ಸಮಿತಿಯವರು ನಡೆಸಿಕೊಟ್ಟರು

ಗಮನ ಸೆಳೆದ ಬೆಂಕಿಯಾಟ ಪ್ರದರ್ಶನ
ಹಲವು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದ ಬೆಂಕಿಯಾಟ ಪ್ರದರ್ಶನ ಕಳೆದ 2 ವರ್ಷ ಕೊರೋನಾ ಸಾಂಕ್ರಾಮಿಕ ರೋಗದಿಂದ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ ಆದರೆ ಈ ಬಾರಿ ಅದ್ದೂರಿಯಾಗಿ ಬೆಂಕಿಯಾಟ ಪ್ರದರ್ಶನವನ್ನ ಸಾರ್ವಜನಿಕರು ಕಣ್ತುಂಬಿಕೊಂಡರು

ನಗರದ ಹೃದಯಭಾಗ ಸಾಗರ ಹೋಟೆಲ್ ಸರ್ಕಲ್ ಹಾಗೂ ಪೋಲಿಸ್ ಸ್ಟೇಷನ್ ಸರ್ಕಲ್ ನಲ್ಲಿ ಹಲವು ಜನ ಬೆಂಕಿಯಾಟ ಪ್ರದರ್ಶನವನ್ನು ವೀಕ್ಷಿಸಿದರು…

ಬೆಂಕಿಯಾಟ ಪ್ರದರ್ಶನದಲ್ಲಿ ಎಂ ಜಿ ಚಂದ್ರಕಾಂತ್, ಹರ್ಷ, ದಯಾನಂದ್, ದೀಪು, ಚೇತನ್, ಹೇಮಂತ್,ಮಂಜು, ದಿಗಂತ್,ಅಮಿತ್ ,ಮನೋಜ್ ,ಸೌರವ್, ಕಿರಣ್ ,ಗಂಗಾಧರ್, ಡ್ಯಾನಿ, ಇನ್ನಿತರರು ಉಪಸ್ಥಿತರಿದ್ದರು.

-ಸೂರಜ್ ನಾಯರ್

ಸಾಗರದ ಶ್ರೀನಗರದಲ್ಲಿ ಬೆಂಕಿಯಾಟದ ಬೆರಗು.. VIDEO ಗೆ ಕ್ಲಿಕ್ ಮಾಡಿ https://youtu.be/WABdx2S6tlk

ಸಮಾಜದಲ್ಲಿಯ ಸುದ್ದಿಗಳನ್ನು ಆರಿಸಿ ಮತ್ತೆ ಸಮಾಜಕ್ಕೆ ನೀಡುವ ಒಂದು ಸಣ್ಣ ಪ್ರಯತ್ನ.. ಆ ಕಾರ್ಯದಲ್ಲಿ ಖಚಿತತೆ, ವಿಶ್ವಾಸಾರ್ಹತೆ, ಸಮಸ್ಯೆಯ ಬಿಂಬ, ಬಿಂಬಿತ ಸಮಸ್ಯೆಗೆ ಪರಿಹಾರದ ಯತ್ನ.. ಆ ಯತ್ನದಲ್ಲಿ ದಕ್ಕಿದ ಒಂದಷ್ಟು ಯಶಸ್ಸು.. ಇದರಲ್ಲಿ‌ ನಿರಂತರತೆ ಕಾಯ್ದುಕೊಳ್ಳುವ ಆಶಯ.. ಅಷ್ಟೆ..

What's your reaction?

Related Posts

ಕೊಲ್ಲೂರು ಹೆದ್ದಾರಿ ಎಬಗೋಡು ಪಕ್ಕದಲ್ಲೇ ನಿಧಿ ಶೋಧನೆ : ಶಿವಲಿಂಗದ ಪಕ್ಕದಲ್ಲಿ 4 ಅಡಿಯಷ್ಟು ಗುಂಡಿ ತೋಡಿದ ನಿಧಿ ಚೋರರು

ಕೊಲ್ಲೂರು ಹೆದ್ದಾರಿ ಎಬಗೋಡು ಪಕ್ಕದಲ್ಲೇ ನಿಧಿ ಶೋಧನೆ : ಶಿವಲಿಂಗದ ಪಕ್ಕದಲ್ಲಿ 4 ಅಡಿಯಷ್ಟು…

1 of 42

Leave A Reply

Your email address will not be published. Required fields are marked *