
ಅಗಸರವಳ್ಳಿ ಖಾತೆ ಜಮೀನಿನಲ್ಲಿ ಮಣ್ಣು ತೆಗೆದು, ಲೇಔಟ್ ನಿರ್ಮಿಸಿ, ತಂತಿ ಬೇಲಿ ಮಾಡಿ ಗೇಟ್ ಗೆ ಬೀಗ ಜಡಿದವರ ವಿರುದ್ಧ ಕ್ರಮಕ್ಕೆ ಆಗ್ರಹ| ಚಕ್ರಾ ಸಾವೇಹಕ್ಲು ಮುಳುಗಡೆ ಸಂತ್ರಸ್ಥರ ಹೋರಾಟ ಸಮಿತಿಯಿಂದ ನಾಳೆ ಡಿಸಿ ಕಚೇರಿ ಎದುರು ಪ್ರತಿಭಟನೆ
ಶಿವಮೊಗ್ಗ: ಅಗಸರವಳ್ಳಿ ಖಾತೆ ಜಮೀನಿನಲ್ಲಿ ಮಣ್ಣನ್ನು ತೆಗೆದು ಕೃಷಿಗೆ ಬಾರದಂತೆ ಮಾಡಿ, ಖಾತೆ ಜಮೀನಿನಲ್ಲಿ ಲೇವ್ವಟ್ ನಿರ್ಮಿಸಿ, ತಂತಿ ಬೇಲಿ ಮಾಡಿ, ಗೇಟನ್ನು ಹಾಕಿ ಬೀಗ ಜಡಿದಿರುವವರನ್ನು ಪೊಲೀಸರು ಬಂದಿಸುವಂತೆ ಆಗ್ರಹಿಸಿ ಚಕ್ರಾ ಸಾವೇಹಕ್ಲು ಮುಳುಗಡೆ ಸಂತ್ರಸ್ಥರ ಹೋರಾಟ ಸಮಿತಿ ಜು.20 ಶನಿವಾರದಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಂಡಿದೆ.
ಸಂತ್ರಸ್ತರ ಕೃಷಿ ಚಟುವಟಿಕೆಗೆ ಅವಕಾಶಕಾಗಿ ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ಬೆಳಿಗ್ಗೆ 10-30 ಕ್ಕೆ ನ್ಯಾಯಕ್ಕಾಗಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು ಸಂತ್ರಸ್ತರು ಬಾಗವಹಿಸಿ ಬೆಂಬಲಿಸುವಂತೆ ಕೋರಲಾಗಿದೆ.


ಶಿವಮೊಗ್ಗದ ಸೋಶಿಯಲ್ ಜಸ್ಟಿಸ್ ಪಬ್ಲಿಕ್ ಪ್ರಾಬ್ಲಮ್ಸ್ ಸಂಘಟನೆ, ಚಕ್ರಾ ಸಾವೇಹಕ್ಲು ಮುಳುಗಡೆ ಸಂತ್ರಸ್ಥರ ಹೋರಾಟ ಸಮಿತಿ ಹೆಸರಲ್ಲಿ ಸುಳ್ಳು ದಾಖಲೆ ಸೃಷ್ಟಿಸಿ ಭೂಕಬಳಿಕೆ ಮಾಡಿದೆ ಎಂದು ಆರೋಪಿಸಿ ಜು.18 ರಂದು ಸೂಕ್ತ ಕ್ರಮಕ್ಕಾಗಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಿತ್ತು. ಇದರ ಬೆನ್ನಲ್ಲೇ ಹೋರಾಟ ಸಮಿತಿ ಕೂಡ ಪ್ರತಿಭಟನೆ ಹಮ್ಮಿಕೊಂಡಿದೆ.
