Homeಕ್ರೈಂತೀರ್ಥಹಳ್ಳಿಭದ್ರಾವತಿರಾಜ್ಯಶಿಕಾರಿಪುರ

Shimoga Crime News | ಬಸವನಗುಡಿ ಯುವಕ ಕಾಣೆ | ಅಪರಿಚಿತ ವ್ಯಕ್ತಿ ಸಾವು

ಶಿವಮೊಗ್ಗ ಬಸವನಗುಡಿಯ 22 ವರ್ಷದ ಯುವಕ  ಕಾಣೆ

ಶಿವಮೊಗ್ಗ, ಅಕ್ಟೋಬರ್ 17: ಪವನ್, 22 ವರ್ಷ ವಾಸ ಬಸವನಗುಡಿ, 4ನೇ ಕ್ರಾಸ್, ಶಿವಮೊಗ್ಗ ಈ ವ್ಯಕ್ತಿ ಅ.9 ರಂದು ಶಿವಮೊಗ್ಗದ ಎ.ಎ. ಕಾಲೋನಿ ಚೌಡಮ್ಮ ದೇವಸ್ಥಾನದ ಹಿಂಭಾಗದಲ್ಲಿರುವ ತಮ್ಮ ಅಜ್ಜಿಯ ಮನೆಯಿಂದ ಕಾಣೆಯಾಗಿರುತ್ತಾರೆ.


ಕಾಣೆಯಾದ ಪವನ್ ಸುಮಾರು 5.4 ಅಡಿ ಎತ್ತರ, ಕೋಲು ಮುಖ, ಗೋಧಿ ಮೈಬಣ್ಣ, ತೆಳ್ಳನೆಯ ಮೈಕಟ್ಟು ಹೊಂದಿದ್ದು, ಮನೆಯಿಂದ ಕಾಣೆಯಾದ ವೇಳೆ ಕಪ್ಪು ಬಣ್ಣದ ಟೀಷರ್ಟ್ ಹಾಗೂ ನೀಲಿ ಬಣ್ಣದ ಚಡ್ಡಿ ಧರಿಸಿರುತ್ತಾರೆ. ಕನ್ನಡ, ತೆಲುಗು ಭಾಷೆ ಮಾತನಾಡುತ್ತಾನೆ.
ಈತನ ಪತ್ತೆಯಾದಲ್ಲಿ ಮಾಹಿತಿಯನ್ನು ಜಯನಗರ ಪೊಲೀಸ್ ಠಾಣೆ, ಶಿವಮೊಗ್ಗ ಜಿಲ್ಲಾ ನಿಸ್ತಂತು ಕೇಂದ್ರ, ಎಸ್‍ಪಿ ಶಿವಮೊಗ್ಗ 08182-261400, ಜಿಲ್ಲಾ ಕಂಟ್ರೋಲ್ ರೂಂ. 08182-261413, ಜಯನಗರ ಪೊಲೀಸ್ ಠಾಣೆ 08182-261416 ನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.

ಅಪರಿಚಿತ ವ್ಯಕ್ತಿ ಸಾವು

ಶಿವಮೊಗ್ಗ, ಅಕ್ಟೋಬರ್ 17 :
ಸುಮಾರು 50 ರಿಂದ 55 ವಯಸ್ಸಿನ ಅನಾಮಧೇಯ ಪುರುಷ ಹೊಳೆ ಬಸ್ ನಿಲ್ದಾಣದ ಬಳಿ ಇರುವ ಮಾಂಡವಿ ಬಾರ್ ಹತ್ತಿರದ ಮೈತ್ರಿಕ ಕಾಂಪ್ಲೆಕ್ಸ್‍ನ ಮೊದಲ ಮಳಿಗೆಯ ಫುಟ್‍ಪಾತ್ ಮೇಲೆ ಅ.12 ರ ಬೆಳಿಗ್ಗೆ ಮಲಗಿದಲ್ಲಿಯೇ ಮೃತಪಟ್ಟಿರುತ್ತಾರೆ.
ಮೃತನು ಸುಮಾರು 5 ಅಡಿ 4 ಇಂಚು ಎತ್ತರ, ಎಣ್ಣೆಗೆಂಪು ಬಣ್ಣ ಹೊಂದಿದ್ದು, ತಲೆಯಲ್ಲಿ 4 ಇಂಚು ಉದ್ದದ ಕಪ್ಪು ಬಿಳಿ ಮಿಶ್ರಿತ ಕೂದಲು, 3 ಇಂಚು ಉದ್ದದ ಬಿಳಿ ಹಾಗೂ ಕಪ್ಪು ಮಿಶ್ರಿತ ಗಡ್ಡ ಇರುತ್ತದೆ. ಈತಹ ಬಲಗೈ ಮೇಲೆ ಎಂಪಿ ಹಾಗೂ ಓಂ ಮತ್ತು ಎಡಗೈ ಮೇಲೆ ಎಸ್.ಎಂ ಎಂಬ ಹಚ್ಚೆ ಗುರುತು ಇರುತ್ತದೆ. ಬಿಳಿ ಬಣ್ಣದ ನೀಲಿ ಹೂ ಮಿಶ್ರಿತ ತುಂಬು ತೋಳಿನ ಶರ್ಟ್, ಕಾಫಿ ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ. ಮೃತನ ಶವವನ್ನು ಮೆಗ್ಗಾನ್ ಆಸ್ಪತ್ರೆ ಶವಾಗಾರದಲ್ಲಿ ಇರಿಸಲಾಗಿದೆ.
ಮೃತನ ವಾರಸುದಾರರು ಯಾರಾದರೂ ಇದ್ದಲ್ಲಿ ಕೋಟೆ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.

ಸಮಾಜದಲ್ಲಿಯ ಸುದ್ದಿಗಳನ್ನು ಆರಿಸಿ ಮತ್ತೆ ಸಮಾಜಕ್ಕೆ ನೀಡುವ ಒಂದು ಸಣ್ಣ ಪ್ರಯತ್ನ.. ಆ ಕಾರ್ಯದಲ್ಲಿ ಖಚಿತತೆ, ವಿಶ್ವಾಸಾರ್ಹತೆ, ಸಮಸ್ಯೆಯ ಬಿಂಬ, ಬಿಂಬಿತ ಸಮಸ್ಯೆಗೆ ಪರಿಹಾರದ ಯತ್ನ.. ಆ ಯತ್ನದಲ್ಲಿ ದಕ್ಕಿದ ಒಂದಷ್ಟು ಯಶಸ್ಸು.. ಇದರಲ್ಲಿ‌ ನಿರಂತರತೆ ಕಾಯ್ದುಕೊಳ್ಳುವ ಆಶಯ.. ಅಷ್ಟೆ..

What's your reaction?

Related Posts

ಕೊಲ್ಲೂರು ಹೆದ್ದಾರಿ ಎಬಗೋಡು ಪಕ್ಕದಲ್ಲೇ ನಿಧಿ ಶೋಧನೆ : ಶಿವಲಿಂಗದ ಪಕ್ಕದಲ್ಲಿ 4 ಅಡಿಯಷ್ಟು ಗುಂಡಿ ತೋಡಿದ ನಿಧಿ ಚೋರರು

ಕೊಲ್ಲೂರು ಹೆದ್ದಾರಿ ಎಬಗೋಡು ಪಕ್ಕದಲ್ಲೇ ನಿಧಿ ಶೋಧನೆ : ಶಿವಲಿಂಗದ ಪಕ್ಕದಲ್ಲಿ 4 ಅಡಿಯಷ್ಟು…

1 of 42

Leave A Reply

Your email address will not be published. Required fields are marked *