
ಶಿವಮೊಗ್ಗ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ನೂತನ ಅಧ್ಯಕ್ಷರಾಗಿ ಶಿವಮೊಗ್ಗದ ಎಸ್.ಪಿ.ಮಧುಕರ್, ಉಪಾಧ್ಯಕ್ಷರಾಗಿ ಹೊಸನಗರದ ದತ್ತಾತ್ರೇಯ ಉಡುಪ ಆಯ್ಕೆ.
ಶಿವಮೊಗ್ಗ: 2024-2027ನೇ ಸಾಲಿನ ಶಿವಮೊಗ್ಗ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ(ರಿ) ಇದರ ನೂತನ ಅಧ್ಯಕ್ಷರಾಗಿ ಶಿವಮೊಗ್ಗದ ಎಸ್.ಪಿ.ಮಧುಕರ್, ಉಪಾಧ್ಯಕ್ಷರಾಗಿ ಹೊಸನಗರ ಪಟ್ಟಣದ ರಾಮಕೃಷ್ಣ ಮೆಡಿಕಲ್ ಮಾಲೀಕ ಎನ್.ದತ್ತಾತ್ರೇಯ ಉಡುಪ ಆಯ್ಕೆ ಆಗಿದ್ದಾರೆ.
ಜುಲೈ 21ರ ಭಾನುವಾರ ಜಿಲ್ಲಾ ಔಷಧ ಭವನದಲ್ಲಿ ಜಿಲ್ಲಾ ಕಾರ್ಯಕಾರಿ ಸಮಿತಿಯ ವಿವಿಧ ಪದಾಧಿಕಾರಿಗಳ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಉಳಿದಂತೆ ಕಾರ್ಯದರ್ಶಿಯಾಗಿ ಮೆಡಿನೋವ ಸರ್ಜಿಕಲ್ ಅಂಡ್ ಫಾರ್ಮಸಿಟಿಕಲ್ಸ್ ಮಾಲೀಕ ಈ.ಜಿ. ವೆಂಕಟೇಶ್, ಸಹ ಕಾರ್ಯದರ್ಶಿ ಆಗಿ ಲಕ್ಷ್ಮೀ ಫಾರ್ಮ ಡಿಸ್ಟ್ರಿಬ್ಯೂಟರ್ಸ್ ಮಾಲೀಕ ಎಂ.ಎಲ್. ಮಂಜುನಾಥ್, ಖಜಾಂಚಿಯಾಗಿ ರಾಜು ಫಾರ್ಮ್ ಮಾಲೀಕ ಕೆ.ಸಿ.ನಾಗರಾಜ್ ಆಯ್ಕೆಯಾಗಿದ್ದಾರೆ.ನೂತನ ಕಾರ್ಯಕಾರಿ ಸಮಿತಿಯನ್ನು ಹೊಸನಗರ ತಾಲೂಕಿನ ಔಷಧ ವ್ಯಾಪಾರಿಗಳು ಅಭಿನಂದಿಸಿದೆ.


