
ಶಿವಮೊಗ್ಗ.ಸೆ.07: ರಾಜ್ಯದಲ್ಲೇ ಪ್ರಸಿದ್ಧಿ ಪಡೆದಿರುವ ಶಿವಮೊಗ್ಗ ನಗರದ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಕಾರ್ಯಕ್ರಮ ನಡೆಯುವ ಹಿನ್ನೆಲೆಯಲ್ಲಿ ವ್ಯಾಪಕ ಪೊಲೀಸ್ ಅಳವಡಿಸಲಾಗುತ್ತಿದೆ.
ಸೆ.09 ರಂದು ವಿಸರ್ಜನಾ ಕಾರ್ಯಕ್ರಮ ನಡೆಯಲಿದ್ದು ಸಹಸ್ರಾಧಿಕ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ. ಹೀಗಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನಿಗಾ ವಹಿಸಲು ಪೊಲೀಸ್ ಇಲಾಖೆ ಸಜ್ಜಾಗಿದೆ.


ಬಂದೋಬಸ್ತ್ ವಿವರ:
ಕರ್ತವ್ಯಕ್ಕೆ 2 ಹೆಚ್ಚುವರಿ ಪೊಲೀಸ್ ಅಧೀಕ್ಷಕರು, 19 ಪೊಲೀಸ್ ಉಪಾಧೀಕ್ಷಕರು, 46 ಪೋಲಿಸ್ ನಿರೀಕ್ಷಕರು, 71 ಪೊಲೀಸ್ ಉಪನಿರೀಕ್ಷಕರು, 1970 ಪೊಲೀಸ್ ಸಿಬ್ಬಂದಿಗಳು, 700 ಗೃಹರಕ್ಷಕ ದಳ ಸಿಬ್ಬಂದಿಗಳು, 01 ಆರ್ ಎ ಎಫ್ ಕಂಪನಿ (200 ಅಧಿಕಾರಿ ಮತ್ತು ಸಿಬ್ಬಂದಿಗಳು), 15 ಕೆಎಸ್ಆರ್. ಪಿ ತುಕಡಿಯ ( 300 ಅಧಿಕಾರಿ ಮತ್ತು ಸಿಬ್ಬಂದಿಗಳು), 15 ಡಿ ಎ ಆರ್ ತುಕಡಿ(120 ಅಧಿಕಾರಿ ಹಾಗೂ ಸಿಬ್ಬಂದಿ)ಗಳನ್ನು ನಿಯೋಜಿಸಲಾಗಿದೆ ಪೊಲೀಸ್ ಪ್ರಕಟಣೆ ತಿಳಿಸಿದೆ
