![](https://goodmorningkarnataka.com/wp-content/uploads/2022/10/Sun-Time-electronics-hosanagara-ad.jpg)
ಶಿವಮೊಗ್ಗ : ಶಿವಮೊಗ್ಗ ನಗರ ಎಂದಿನಂತಿಲ್ಲ. ಯುವ ಮನಸ್ಸುಗಳಲ್ಲಿ ದ್ವೇಷ ಮೂಡುತ್ತಿದೆ. ಇದು ನಾಗರೀಕ ಸಮಾಜದ ಲಕ್ಷಣವಲ್ಲ.
ನಗರದ ವ್ಯಾಪಾರಸ್ತರು, ಹೊಟೇಲ್ ಉದ್ಯಮಿಗಳು, ಶಾಲಾ ಕಾಲೇಜುಗಳ ಮಕ್ಕಳು, ಪೋಷಕರು, ಆಟೋ ಮತ್ತು ಸಿಟಿ ಬಸ್ ಮಾಲೀಕರು, ಬೀದಿ ಬದಿ ವ್ಯಾಪಾರಿಗಳು ಹಾಗೂ ನಾಗರೀಕರು ಈ ಬೆಳವಣಿಗೆಗಳಿಂದ ನೊಂದು ಬೇಸತ್ತಿದ್ದಾರೆ.
![](https://goodmorningkarnataka.com/wp-content/uploads/2022/11/IMG-20221121-WA0002.jpg)
![](https://goodmorningkarnataka.com/wp-content/uploads/2022/10/Sun-Time-electronics-hosanagara-ad-3.jpg)
ಮಲೆನಾಡ ಹೆಬ್ಬಾಗಿಲು, ಸಾಹಿತ್ಯ – ಸಂಸ್ಕೃತಿಯ ತವರು, ಸುಶಿಕ್ಷಿತರ ಊರು, ಪ್ರವಾಸಿಗರ ತಾಣ ಎಂದೆಲ್ಲಾ ಶಿವಮೊಗ್ಗ ಕರೆಸಿಕೊಳ್ಳುತ್ತಿತ್ತು. ಈಗ ಜನ ಇಲ್ಲಿಗೆ ಬರಲೂ ಯೋಚಿಸುವಂತಹಾ ಸ್ಥಿತಿಗೆ ತಲುಪಿರುವುದು ನಮ್ಮ ದುರಾದೃಷ್ಟ.
ಜನಜೀವನ ಹೀಗಿರುವಾಗ ಹೊರಗಿನಿಂದ ಬಂಡವಾಳ ಹರಿದು ಬರುವುದಾಗಲೀ ಮತ್ತು ಶಿವಮೊಗ್ಗದ ಬಗ್ಗೆ ಜನ ಒಳ್ಳೆಯ ಮಾತನಾಡುವುದಾಗಲೀ ಅಸಾಧ್ಯ.
ನಮ್ಮ ಪ್ರಜ್ಞಾವಂತ ಜನ ಈಗ ಶಿವಮೊಗ್ಗದ ಪ್ರಸ್ತುತ ಸ್ಥಿತಿಯನ್ನು ಬದಲಾಯಿಸಿ ಅದಕ್ಕೆ ಹೊಸ ರೂಪ ನೀಡಬೇಕಿದೆ. ಕಳೆದು ಹೋಗಿರುವ ಘನತೆಯನ್ನು ಮರು ಸ್ಥಾಪಿಸಬೇಕಿದೆ. ಈ ನಿಟ್ಟಿನಲ್ಲಿ ಒಂದು ಸಮಾಲೋಚನ ಸಭೆಯನ್ನು ಸರ್ಕಾರಿ ನೌಕರರ ಭವನದಲ್ಲಿ ದಿನಾಂಕ 23/08/2022 ರ ಮಂಗಳವಾರ ಸಂಜೆ 5 ಗಂಟೆಗೆ ಆಯೋಜಿಸಲಾಗಿದೆ. ತಾವುಗಳು ಬಿಡುವು ಮಾಡಿಕೊಂಡು ಬಂದು ಶಿವಮೊಗ್ಗ ನಿರಾಳವಾಗುವ ಕಾರ್ಯಕ್ರಮಕ್ಕೆ ಸಲಹೆಗಳು ಹಾಗೂ ಅವನ್ನು ಕಾರ್ಯಗತಗೊಳಿಸಲು ಶ್ರಮಿಸಬೇಕು ಎಂದು ಕೋರುತ್ತೇವೆ.
– ಎಚ್ ಆರ್ ಬಸವರಾಜಪ್ಪ (+91 94499 68599)
– ಶ್ರೀಪಾಲ್ ಕೆ.ಪಿ(+91 94483 29757)
– ಗುರುಮೂರ್ತಿ.ಎಂ. (+91 94481 54365)
– ಕಿರಣ್ ಕುಮಾರ್ ಕೆ. ( +91 9900015255)
![](https://goodmorningkarnataka.com/wp-content/uploads/2022/10/Sun-Time-electronics-hosanagara-ad-4.jpg)