ARASALU| ರೈಲು ಹಳಿ ಮೇಲೆ ಮರ ಬಿದ್ದು ರೈಲು ಸಂಚಾರ ಸ್ಥಗಿತ | ಬೆಂಗಳೂರಿನಿಂದ ಸಾಗರ ಹೋಗುತ್ತಿದ್ದ ಇಂಟರ್ ಸಿಟಿ ರೈಲು !
ಶಿವಮೊಗ್ಗ: ರೈಲು ಹಳಿಗೆ ಅಡ್ಡಲಾಗಿ ಮರ ಬಿದ್ದ ಕಾರಣ ರೈಲು ಸಂಚಾರ ಸ್ಥಗಿತಗೊಂಡ ಘಟನೆ ಅರಸಾಳು ನಿಲ್ದಾಣದ ಸಮೀಪ ರಾತ್ರಿ ನಡೆದಿದೆ.
ಮಧ್ಯಾಹ್ನ ಬೆಂಗಳೂರಿನಿಂದ ಸಾಗರ ಹೊರಟಿದ್ದ ಇಂಟರ್ ಸಿಟಿ ರೈಲು ಶಿವಮೊಗ್ಗದಲ್ಲಿ ಸ್ಟಾಪ್ ಕೊಟ್ಟ ಬಳಿಕ ಸೂಡೂರು ಬಳಿ ನಿಂತಿದೆ.
ರೈಲು ಸಂಚಾರ ಸ್ಥಗಿತಗೊಂಡು ಎರಡು ಗಂಟೆ ಕಳೆದಿದೆ. ಈಗಾಗಲೇ ಮರ ತೆರವು ಕಾರ್ಯಾಚರಣೆ ನಡೆಯುತ್ತಿದ್ದು ಘಟನೆ ಬಗ್ಗೆ ಇನ್ನಷ್ಟೇ ತಿಳಿದುಬರಬೇಕಿದೆ.