ಶಿವಮೊಗ್ಗಪ್ರಮುಖ ಸುದ್ದಿಭದ್ರಾವತಿಶಿಕಾರಿಪುರಶಿರಾಳಕೊಪ್ಪಸಾಗರ

ಶಿವಮೊಗ್ಗ ದಸರಾ | ಆಹಾರ ದಸರಾದಲ್ಲಿ ಪಾಲ್ಗೊಳ್ಳಲು ಅರ್ಜಿ ಆಹ್ವಾನ

ಶಿವಮೊಗ್ಗ ಸೆಪ್ಟೆಂಬರ್ 21: ಶಿವಮೊಗ್ಗ ಮಹಾನಗರ ಪಾಲಿಕೆಯು ಸೆ. 24 ಮತ್ತು 27 ರಂದು ಅಡುಗೆ ಸ್ಪರ್ಧೆ ಮತ್ತು ತಿನ್ನುವ ಸ್ಪರ್ಧೆ ಹಾಗೂ ಸೆ. 26 ರಿಂದ ಅ.05 ರವರೆಗೆ ಆಹಾರ ಮೇಳವನ್ನು ಆಯೋಜಿಸಲಾಗಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.

ದಿ: 24/09/2022 ರಂದು ನಗರದ ಶ್ರೀ ನಿಜಲಿಂಗಪ್ಪ ಸಮುದಾಯ ಭವನದಲ್ಲಿ ಮ 2 ರಿಂದ 3 ರವರೆಗೆ ಅತ್ತೆ ಸೊಸೆಯರಿಗೆ ಅಡುಗೆ ಮಾಡುವ ಸ್ಪರ್ಧೆ ಹಾಗೂ ಸಂಜೆ 04 ರಿಂದ 05ರವರೆಗೆ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ಅಡುಗೆ ಮಾಡುವ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

ದಿ: 27/09/2022 ರಂದು ನಗರದ ಗಾಂಧಿ ಬಜಾರ್ ಶಿವಪ್ಪ ನಾಯಕ ವೃತ್ತದಲ್ಲಿ ಬೆಳಗ್ಗೆ 10.30ಕ್ಕೆ ಮಹಿಳಾ ಶಿಕ್ಷಕಿಯರಿಗೆ ಒಂದು ನಿಮಿಷದಲ್ಲಿ ಸೇಬುಹಣ್ಣು ತಿನ್ನುವ ಸ್ಪರ್ಧೆ ಹಾಗೂ ಮ. 12.00ಕ್ಕೆ ಪುರುಷರು ಮತ್ತು ಮಹಿಳೆಯರಿಗೆ ಒಂದು ನಿಮಿಷದಲ್ಲಿ ಮುದ್ದೆ, ಬಸ್ಸಾರು ತಿನ್ನು ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

ದಿ: 26/09/2022ರಿಂದ ದಿ: 05/10/2022ರ ವರೆಗೆ ವಿನೋಬನಗರದ ಫ್ರೀಡಂ ಪಾರ್ಕ್‍ನಲ್ಲಿ ವಿವಿಧ ಸ್ತ್ರೀಶಕ್ತಿ ಸಂಘಗಳ ಸಹಯೋಗದಲ್ಲಿ 30 ಸ್ಟಾಲ್‍ಗಳಲ್ಲಿ ಸಂಪ್ರದಾಯಿಕ ವಿವಿಧ ರೀತಿಯ ವಿಶಿಷ್ಟ ಅಡುಗೆಗಳ ತಯಾರಿಕೆ ಮತ್ತು ತಿನಿಸು ಅಂಗಳಗಳ ಆಹಾರ ಮೇಳವನ್ನು ಆಯೋಜಿಸಲಾಗಿದೆ.

ಈ ಎಲ್ಲಾ ಸ್ಪರ್ಧೆ ಮತ್ತು ಆಹಾರ ಮೇಳಕ್ಕೆ ಭಾಗವಹಿಸಲು ಇಚ್ಛಿಸುವವರು ಮೊ. ನಂ.: 9902676271 ಮತ್ತು 7795773962 ನ್ನು ಸಂಪರ್ಕಿಸಿ ನೋಂದಣಿ ಮಾಡಿಕೊಳ್ಳುವಂತೆ ಪಾಲಿಕೆ ಆಹಾರ ದಸರಾ ಸಮಿತಿಯ ಪ್ರಕಟಣೆ ತಿಳಿಸಿದೆ.

ಸಮಾಜದಲ್ಲಿಯ ಸುದ್ದಿಗಳನ್ನು ಆರಿಸಿ ಮತ್ತೆ ಸಮಾಜಕ್ಕೆ ನೀಡುವ ಒಂದು ಸಣ್ಣ ಪ್ರಯತ್ನ.. ಆ ಕಾರ್ಯದಲ್ಲಿ ಖಚಿತತೆ, ವಿಶ್ವಾಸಾರ್ಹತೆ, ಸಮಸ್ಯೆಯ ಬಿಂಬ, ಬಿಂಬಿತ ಸಮಸ್ಯೆಗೆ ಪರಿಹಾರದ ಯತ್ನ.. ಆ ಯತ್ನದಲ್ಲಿ ದಕ್ಕಿದ ಒಂದಷ್ಟು ಯಶಸ್ಸು.. ಇದರಲ್ಲಿ‌ ನಿರಂತರತೆ ಕಾಯ್ದುಕೊಳ್ಳುವ ಆಶಯ.. ಅಷ್ಟೆ..

What's your reaction?

Related Posts

1 of 45

Leave A Reply

Your email address will not be published. Required fields are marked *